• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ರಸಗುಲ್ಲಾ ನೀಡ್ತೀವಿ, ಮತಗಳನ್ನಲ್ಲ' ಮೋದಿ ಮಾತಿಗೆ ಮಮತಾ ದೀದಿ ಉತ್ತರ

|
   Lok Sabha Elections 2019 : ನರೇಂದ್ರ ಮೋದಿಗೆ ಕುರ್ತಾ, ಸಿಹಿತಿಂಡಿ ಕಳಿಸ್ತಾರೆ ದೀದಿ | Oneindia Kannada

   ಕೋಲ್ಕತ್ತಾ (ಪಶ್ಚಿಮ ಬಂಗಾಲ), ಏಪ್ರಿಲ್ 25: "ನಾವು ರಸಗುಲ್ಲಾ ಮತ್ತು ಉಡುಗೊರೆಗಳನ್ನು ಕೊಟ್ಟು ಅತಿಥಿಗಳನ್ನು ಆಹ್ವಾನಿಸುತ್ತೇವೆ. ಆದರೆ ಒಂದು ಮತ (ಬಿಜೆಪಿಗೆ) ಸಹ ನೀಡುವುದಿಲ್ಲ" ಎಂದು ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಹೆಸರನ್ನು ಎತ್ತದೆ ಚುಚ್ಚಿದ್ದಾರೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ವಿಶೇಷ ಸಂದರ್ಭಗಳಲ್ಲಿ ಅತಿಥಿ ಸತ್ಕಾರ ಮಾಡುವುದು ಬಂಗಾಳದ ಸಂಸ್ಕೃತಿ. ಹಾಗಂತ ನಾವು ಮತ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹೂಗ್ಲಿ ಜಿಲ್ಲೆಯಲ್ಲಿ ಚುನಾವಣೆ ಪ್ರಚಾರ ಮಾಡುವ ವೇಳೆ ಅವರು ಮಾತನಾಡಿದ್ದಾರೆ. ಟೀವಿ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮಮತಾ ದೀದಿ ನನಗೆ ಪ್ರತಿ ವರ್ಷ ಉಡುಗೊರೆಗಳನ್ನು ಕಳಿಸುತ್ತಾರೆ ಎಂದಿದ್ದರು.

   ಮಮತಾ ಬ್ಯಾನರ್ಜಿಯನ್ನು 'ಸ್ಟಿಕ್ಕರ್ ದೀದಿ' ಎಂದು ವ್ಯಂಗ್ಯವಾಡಿದ ಮೋದಿ

   ಜನರು ಅಚ್ಚರಿ ಪಡುತ್ತಾರೆ ಮತ್ತು ಚುನಾವಣೆ ಸಂದರ್ಭದಲ್ಲಿ ಇದನ್ನು ಹೇಳಬಾರದು. ಆದರೆ ಮಮತಾ ದೀದಿ ಪ್ರತಿ ವರ್ಷ ಉಡುಗೊರೆ ಕಳುಹಿಸುತ್ತಾರೆ. ಅವರು ಈಗಲೂ ಒಂದೆರಡು ಕುರ್ತಾವನ್ನು ತಾವೇ ಆರಿಸಿ, ಕಳುಹಿಸುತ್ತಾರೆ ಎಂದು ನಟ ಅಕ್ಷಯ್ ಕುಮಾರ್ ಜತೆಗಿನ ಸಂದರ್ಶನದಲ್ಲಿ ಹೇಳಿದ್ದರು.

   Will give Rosogollas but no votes: Mamata Banerjees Reply to Modi

   ಜತೆಗೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪ್ರತಿ ವರ್ಷ ಹೊಸ ಬಗೆಯ ಸಿಹಿ ತಿನಿಸು ಕಳಿಸುತ್ತಾರೆ. ಅದು ಒಂದು ಸಲ ಮಮತಾ ದೀದಿ ಅವರಿಗೆ ಗೊತ್ತಾಯಿತು. ಅವರು ಕೂಡ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಸಿಹಿ ತಿನಿಸು ಕಳುಹಿಸಲು ಆರಂಭಿಸಿದರು ಎಂದಿದ್ದಾರೆ.

   'ದೀದಿ' ಪಶ್ಚಿಮ ಬಂಗಾಳದಲ್ಲಿ ಸ್ಪೀಡ್ ಬ್ರೇಕರ್ ಇದ್ದಂತೆ : ನರೇಂದ್ರ ಮೋದಿ ವಾಗ್ಬಾಣ

   ಇದಕ್ಕೂ ಮುನ್ನ ಚುನಾವಣೆ ಪ್ರಚಾರಗಳಲ್ಲಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು 'ಸ್ಪೀಡ್ ಬ್ರೇಕರ್ ದೀದಿ', ಸ್ಟಿಕ್ಕರ್ ದೀದಿ ಎಂದು ಮೂದಲಿಸಿದ್ದರು. ಪ್ರಧಾನಿ ನೀಡಿದ ಹೇಳಿಕೆಯು ಬಿಜೆಪಿ ಹಾಗೂ ಟಿಎಂಸಿ ಮಧ್ಯೆ ಇರುವ ರಹಸ್ಯ ನಂಟಾನ್ನು ಬಿಚ್ಚಿಡುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Bengal Chief Minister Mamata Banerjee had a stinging reply to Prime Minister Narendra Modi's revelation that the firebrand leader sends him kurtas and gifts every year. "We welcome guests with rosogollas and gifts but not a single vote will be given (to BJP)," she said without naming PM Modi.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more