• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೈ ಶ್ರೀರಾಮ್ ಎಂದಾಗ ದೀದಿಗೆ ಕೋಪ ಬರುವುದೇಕೆ? : ಯೋಗಿ ಆದಿತ್ಯನಾಥ್

|

ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗ ದೀದಿಗೆ ಏಕೆ ಕೋಪ ಬರುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.

ಯಾವಾಗಲೂ ಜೈ ಶ್ರೀರಾಮ್ ಎಂದವರನ್ನು ದೀದಿ ಜೈಲಿಗೆ ಕಳುಹಿಸುತ್ತಾರೆ, ಶ್ರೀರಾಮನನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರಿಗಿದೆ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಯೋಗಿ ಹೇಳಿದ್ದಾರೆ.

ಬಿಜೆಪಿ ಪರ ಮತದಾರರಿಗೆ ಕಿರುಕುಳ ನೀಡುತ್ತಿರುವ ಸಿಆರ್‌ಪಿಎಫ್: ಮಮತಾ ಆರೋಪ

ಕಳೆದ 10 ವರ್ಷಗಳಿಂದ ಪಶ್ಚಿಮ ಬಂಗಾಳ ಸರ್ಕಾರವು ಜನರನ್ನು ನಿರ್ಲಕ್ಷಿಸಿದ್ದಾರೆ, ಕೇಂದ್ರ ಸರ್ಕಾರದ ಹಲವಾರು ಕಲ್ಯಾಣ ಯೋಜನೆಗಳನ್ನು ಮಮತಾ ಬ್ಯಾನರ್ಜಿ ಸರ್ಕಾರವು ತಡೆಹಿಡಿದಿದ್ದಾರೆ ಎಂದು ಆರೋಪಿಸಿದರು.

ಮೇ 2 ರಂದು ಬಂಗಾಳಕ್ಕೆ ಟಿಎಂಸಿ ಸರ್ಕಾರದಿಂದ ಸ್ವಾತಂತ್ರ್ಯ ದೊರೆಯಲಿದೆ. ಟಿಎಂಸಿ ಗೂಂಡಾಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ. ಖಂಡಿತವಾಗಿಯೂ ಕಾಂಗ್ರೆಸ್, ಸಿಪಿಎಂ ಹಾಗೂ ಟಿಎಂಸಿಯಂತಹ ಪಕ್ಷಗಳು ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ ಆದರೆ ಅವರನ್ನು ಶೀಘ್ರ ಜೈಲಿಗಟ್ಟಲಾಗುವುದು ಎಂದರು.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷವನ್ನು ಉರುಳಿಸಲು ಬಿಜೆಪಿ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿಯ ಉನ್ನತ ನಾಯಕರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ಆರ್ಥಿಕ ನೆರವಿನಿಂದ ಹಿಡಿದು ಎಲ್ಲಾ ಪಡಿತರ ಸರಬರಾಜಿನವರೆಗೆ ಕೇಂದ್ರದಿಂದ ಬಂಗಾಳಕ್ಕೆ ನೀಡಿದ ಎಲ್ಲಾ ಸಹಾಯವನ್ನು ಟಿಎಂಸಿ ಮುಖಂಡರು ವಂಚಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಹಣವನ್ನು ಹಿಂಪಡೆಯಲಾಗುವುದು ಎಂದು ಭರವಸೆ ನೀಡಿದರು.

English summary
Uttar Pradesh CM Yogi adityanath on wednesday questioned his West Bengal counterpart and Trinamool Congress Supremo Mamata Banerjee And Asked her why does she get irritated with slogans of Jai Shriram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X