Get Updates
Get notified of breaking news, exclusive insights, and must-see stories!

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕೆಣಕಿದ ರಾಜ್ಯಪಾಲರ ಪತ್ರ!

ಕೋಲ್ಕತ್ತಾ, ಜೂನ್ 15: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣಾ ಫಲಿತಾಂಶದ ನಂತರ ನಡೆದ ಹಿಂಸಾಚಾರದ ಬಗ್ಗೆ ರಾಜ್ಯಪಾಲ ಜಗದೀಪ್ ಧಂಕರ್ ಬರೆದ ಪತ್ರ ಸೋರಿಕೆಯಾಗಿದ್ದು, ಅದರಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ಹುರುಳಿಲ್ಲ ಎಂದು ಸರ್ಕಾರ ದೂಷಿಸಿದೆ.

"ರಾಜ್ಯದಲ್ಲಿ ಚುನಾವಣೆ ಫಲಿತಾಂಶದ ಬಳಿಕ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಹಾಗೂ ನಿರ್ವಹಿಸುವಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವು ವೈಫಲ್ಯ ಅನುಭವಿಸಿದೆ," ಎಂದು ರಾಜ್ಯಪಾಲರ ಪತ್ರದಲ್ಲಿ ಆರೋಪಿಸಲಾಗಿದೆ.

ರಾಜ್ಯಪಾಲರ ಆರೋಪಕ್ಕೆ ಸರಣಿ ಟ್ವೀಟ್ ಮೂಲಕ ಸರ್ಕಾರವು ತಿರುಗೇಟು ನೀಡಿದೆ. "ಏಕಪಕ್ಷೀಯವಾಗಿ ಸಾರ್ವಜನಿಕರಿಗೆ ಪತ್ರವನ್ನು ಹಠಾತ್ತನೆ ಬಿಡುಗಡೆ ಮಾಡಿರುವುದು ಆಘಾತಕಾರಿಯಾಗಿದೆ. ಅಲ್ಲದೇ ಪತ್ರದಲ್ಲಿ ಉಲ್ಲೇಖಿಸಿರುವ ವಿಷಯಗಳು ಕಟ್ಟುಕಥೆ," ಎಂದು ಕರೆಯಲಾಗುತ್ತಿದೆ.

West Bengal Violence: CM Mamata Banerjee Govt Attacks Against Governors Letter Leak
ಸಾರ್ವಜನಿಕವಾಗಿ ಪತ್ರ ಬಿಡುಗಡೆಗೆ ಆಕ್ಷೇಪ:

"ಸಂವಹನ ಸ್ವರೂಪವು ಎಲ್ಲಾ ಸ್ಥಾಪಿತ ರೂಪಗಳನ್ನು ಉಲ್ಲಂಘಿಸುತ್ತದೆ. ಈ ಪತ್ರವನ್ನು ಮಾನ್ಯ ಮುಖ್ಯಮಂತ್ರಿಗೆ ಬರೆಯಲಾಗಿದೆ. ಆದರೆ ಏಕಕಾಲದಲ್ಲಿ ಟ್ವೀಟ್‌ಗಳ ಮೂಲಕ ಸಾರ್ವಜನಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗಿದೆ, ಇದು ಸಂವಹನದ ಪಾವಿತ್ರ್ಯತೆಗೆ ಅಡ್ಡಿಪಡಿಸುತ್ತದೆ," ಎಂದು ಪಶ್ಚಿಮ ಬಂಗಾಳದ ಗೃಹ ಇಲಾಖೆ ಟ್ವೀಟ್ ಮಾಡಿದೆ.

"ರಾಜ್ಯದಲ್ಲಿ ಮತದಾನದ ನಂತರದ ಹಿಂಸಾಚಾರವನ್ನು ಒಂದು ಹಂತದವರೆಗೂ ನಿಯಂತ್ರಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಅಂದು ಚುನಾವಣಾ ಆಯೋಗ ರಾಜ್ಯದ ಕಾನೂನು ಸುವ್ಯವಸ್ಥೆ ಉಸ್ತುವಾರಿ ವಹಿಸಿಕೊಂಡಾತ್ತು," ಎಂದು ರಾಜ್ಯ ಸರ್ಕಾರ ಹೇಳಿದೆ.

"ಎಲ್ಲಾ ರೀತಿಯ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ನಿರ್ದೇಶಿಸಲಾಗಿದೆ. ಸರ್ಕಾರವು "ಸಮಾಜದಲ್ಲಿ ಸಮಾನತೆ ಕಾಪಾಡಿಕೊಳ್ಳಲು ಮತ್ತು ಕಾನೂನು ಸುವ್ಯವಸ್ಥೆ ಎತ್ತಿಹಿಡಿಯಲು ಬದ್ಧವಾಗಿದೆ" ಎಂದು ಮತ್ತೊಂದು ಟ್ವೀಟ್ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+