ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಮಮತಾರಿಂದ ಮೌಲ್ಯಗಳು ನಾಶ: ಜೆಪಿ ನಡ್ಡಾ

|
Google Oneindia Kannada News

ಕೋಲ್ಕತ್ತಾ, ಫೆಬ್ರವರಿ.09: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ "ಪರಿವರ್ತನ ಯಾತ್ರೆ" ನಡೆಸಿದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದ ಬಿರ್ಭೂಮ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ನಡ್ಡಾ ಭಾಷಣದ ವೇಳೆ ಒಂದು ಮೈಕ್ ಕೈ ಕೊಟ್ಟಿತು. ತಕ್ಷಣ ಮತ್ತೊಂದು ಮೈಕ್ ಬಳಿ ತೆರಳಿ ಮಾತು ಆರಂಭಿಸಿದ ಜೆ.ಪಿ. ನಡ್ಡಾ, ಬದಲಾಗಿದ್ದು ಮೈಕ್ ಹೊರತೂ ನಮ್ಮ ಮಾತಿನ ಉದ್ದೇಶವಲ್ಲ ಎಂದು ಕೂಗಿ ಹೇಳಿದರು.

"ಬಿಜೆಪಿಯವರು ದುಡ್ಡು ಕೊಟ್ಟರೆ ಮಟನ್ ತಿನ್ನಿ; ಆದರೆ ಮತ ಹಾಕಬೇಡಿ"

ಪಶ್ಚಿಮ ಬಂಗಾಳವು ಅಭಿವೃದ್ಧಿ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಆದರೆ ತೃಣಮೂಲ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಈ ಮೌಲ್ಯಗಳನ್ನೇ ನಾಶಪಡಿಸುತ್ತಿದೆ ಎಂದು ಜೆ.ಪಿ. ನಡ್ಡಾ ಕಿಡಿ ಕಾರಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಆಡಳಿತ ನೀಡಿದ್ದು ಸಾಕು. ಪಶ್ಚಮ ಬಂಗಾಳದ ಜನರು ಇದೀಗ ಬದಲಾವಣೆಯನ್ನು ಬಯಸುತ್ತಿದ್ದಾರೆ. ಬಿಜೆಪಿಯು ನಾಡಿಯಾದಿಂದ ಪರಿವರ್ತನ ಯಾತ್ರೆ ಆರಂಭಿಸುತ್ತಿದ್ದು, ಇದು ರಾಜ್ಯದ ಜನರನ್ನು ಒಗ್ಗೂಡಿಸುವ ಕೆಲಸವನ್ನು ಮಾಡಲಿದೆ ಎಂದು ನಡ್ಡಾ ಹೇಳಿದ್ದಾರೆ.

West Bengal People Want Change, Says JP Nadda In Poriborton Yatra

"ಪಶ್ಚಿಮ ಬಂಗಾಳದ ಅಭಿವೃದ್ಧಿ ಬೇಕಾಗಿಲ್ಲ":

ತೃಣಮೂಲ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪಶ್ಚಿಮ ಬಂಗಾಳದ ಅಭಿವೃದ್ಧಿ ಬೇಕಾಗಿಲ್ಲ. "ಮಮತಾ ಅವರೇ ಇತ್ತೀಚಿಗಷ್ಟೇ ಪಶ್ಚಿಮ ಬಂಗಾಳದ ಹಾಲ್ದಿಯಾಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು" ಎಂದು ಜೆ.ಪಿ.ನಡ್ಡಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

English summary
West Bengal People Want Change, Says JP Nadda In Poriborton Yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X