ಮೋದಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ಮಾಡಬೇಕು: ಮಮತಾ
ಕೋಲ್ಕತಾ, ಮೇ 7: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವದ ಬಲವಾದ ಕಪಾಳಮೋಕ್ಷ ಮಾಡಬೇಕು ಎಂದು ಬಯಸಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಪುರುಲಿಯಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, 'ನನಗೆ ಹಣ ಮುಖ್ಯವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳಕ್ಕೆ ಬಂದು ನನ್ನ ಪಕ್ಷವನ್ನು ಸುಂಕ ಸಂಗ್ರಹ ಪಕ್ಷ (ಟೋಲ್ ಕಲೆಕ್ಟರ್) ಎಂದು ಕರೆದಿದ್ದರು. ಅವರಿಗೆ ನಾನು ಪ್ರಜಾಪ್ರಭುತ್ವದ ಬಲವಾದ ಕಪಾಳಮೋಕ್ಷ ಮಾಡಲು ಬಯಸಿದ್ದೇನೆ' ಎಂದು ಹೇಳಿದರು.
'ನಾನು ಅವರನ್ನು ದೇಶದ ಪ್ರಧಾನಿ ಎಂದು ಪರಿಗಣಿಸಿಲ್ಲ. ಹೀಗಾಗಿ ಅವರೊಂದಿಗೆ ನಾನು ಸಭೆಯಲ್ಲಿ ಕೂರಲಿಲ್ಲ. ಒಂದೇ ವೇದಿಕೆಯಲ್ಲಿ ಅವರೊಂದಿಗೆ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ನಾನು ಮುಂದಿನ ಪ್ರಧಾನಿಯೊಂದಿಗೆ ಮಾತನಾಡುತ್ತೇನೆ. ಚಂಡಮಾರುತದ ಹಾನಿಯನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ. ಚುನಾವಣೆಗೆ ಮುನ್ನ ಕೇಂದ್ರದ ಸಹಾಯ ನಮಗೆ ಬೇಡ' ಎಂದು ಮಮತಾ ಅವರು "ಫಣಿ" ಚಂಡಮಾರುತದ ಹಾನಿಗೆ ಪರಿಹಾರ ಕಾರ್ಯಾಚರಣೆ ನಡೆಸಲು ಕರೆಮಾಡಿದರೆ ಸ್ವೀಕರಿಸಲಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಶಾರದಾ ಮತ್ತು ನಾರದಾ ಹಗರಣಗಳಿಂದ ಪಡೆದ ಹಣದಿಂದ ಪ್ರಧಾನಿಯ ಹುದ್ದೆಯನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂದು ನರೇಂದ್ರ ಮೋದಿ ಅವರು ಮಮತಾ ವಿರುದ್ಧ ವಾಗ್ದಾಳಿ ನಡೆಸಿದ್ದರು.












Click it and Unblock the Notifications