ಬಂಗಾಳ ಚುನಾವಣೆ: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ, ಅಹಿತಕರ ವಾತಾವರಣ

ಕೋಲ್ಕತ್ತಾ, ಏಪ್ರಿಲ್ 1: ಪಶ್ಚಿಮ ಬಂಗಾಳದಲ್ಲಿ ಇಂದು ಎರಡನೇ ಹಂತ ಮತದಾನ ನಡೆಯುತ್ತಿದೆ. ಸಾಕಷ್ಟು ಕಡೆ ಅಹಿತಕರ ವಾತಾವರಣ ಸೃಷ್ಟಿಯಾಗಿದೆ.

ಕೇಶ್ಪುರದಲ್ಲಿ ಮತಗಟ್ಟೆ ಸಂಖ್ಯೆ 173ರಲ್ಲಿ ಬಿಜೆಪಿಯ ಕಾರ್ಯಕರ್ತನ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಬಿಜೆಪಿ ನಾಯಕ ತನ್ಮಯ್ ಘೋಷ್ ಅವರ ಕಾರನ್ನು ಧ್ವಂಸ ಮಾಡಲಾಗಿದೆ.

ದೆಬ್ರಾ ವಿಧಾನ ಪರಿಷತ್ ಚುನಾವಣಾ ಕ್ಷೇತ್ರದಲ್ಲಿ ಇಂದು ಬೆಳಗ್ಗೆ ಮತದಾನ ಆರಂಭವಾದ ಬಳಿಕ ಗಲಭೆ, ಗದ್ದಲ ಉಂಟಾಗಿದ್ದು ಬಿಜೆಪಿಯ ಮಂಡಲ ಅಧ್ಯಕ್ಷ ಮೋಹನ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

 West Bengal: BJP polling Agent Beaten Up By TMC Workers

ಇನ್ನೊಂದೆಡೆ ಘಟಲ್ ನಲ್ಲಿ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮತದಾನ ಮಾಡಲು ಹೋಗುತ್ತಿದ್ದ ತಮ್ಮನ್ನು ಟಿಎಂಸಿ ಕಾರ್ಯಕರ್ತರು ರಸ್ತೆತಡೆ ನಡೆಸಿ ತಡೆದಿದ್ದಾರೆ ಎಂದು ಹೇಳಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಸ್ತೆತಡೆಯನ್ನು ತೆರವುಗೊಳಿಸಿ ಮತದಾನಕ್ಕೆ ಹೋಗಲು ಅನುವು ಮಾಡಿಕೊಟ್ಟರು.

ಮತಗಟ್ಟೆಯ ಸಮೀಪ ಭದ್ರತಾ ಪಡೆಗಳು ಇರುವಾಗಲೇ ಈ ಘಟನೆ ನಡೆದಿದೆ. ಮತದಾರರು ಈ ಘಟನೆಯನ್ನು ಖಂಡಿಸಿದ್ದು, ಪಕ್ಷಗಳು ಗೂಂಡಾಗಳನ್ನು ಹೊರಗಿನಿಂದ ಕರೆದುಕೊಂಡು ಬರುತ್ತಾರೆ.

ಸ್ಥಳೀಯರಾದ ನಾವು ಏಕೆ ಗಲಭೆ ಸೃಷ್ಟಿಸಿ ಅನಿಶ್ಚಿತತೆ ಮೂಡಿಸಲಿ, ಅಭ್ಯರ್ಥಿಗಳು ಗಲಾಟೆ ಮಾಡುವವರನ್ನು ಕರೆತರುತ್ತಾರೆ, ಗಲಭೆ ಸೃಷ್ಟಿ ಮಾಡಿ ಸುದ್ದಿಯಾಗಬೇಕೆಂಬುದು ಅವರು ಅಂದುಕೊಂಡಂತಿದೆ ಎಂದಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+