ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ ಜನ್ ಕೀ ಬಾತ್ ಎಕ್ಸಿಟ್ ಪೋಲ್: ಬಿಜೆಪಿ ಜಿಂಗಲಾಲ

|
Google Oneindia Kannada News

ಕೋಲ್ಕತ್ತಾ, ಏಪ್ರಿಲ್ 29: ಕೆಲವು ಹಿಂಸಾತ್ಮಕ ಘಟನೆಯ ನಡುವೆ ಪಶ್ಚಿಮ ಬಂಗಾಳದ ಎಂಟು ಹಂತಗಳ ಅಸೆಂಬ್ಲಿ ಚುನಾವಣೆ ಇಂದು ಮುಕ್ತಾಯಗೊಂಡಿದೆ. ಟಿಎಂಸಿ ಮತ್ತು ಬಿಜೆಪಿ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಚುನಾವಣೆಯ ಫಲಿತಾಂಶ ಮೇ ಎರಡರಂದು ಹೊರಬೀಳಲಿದೆ.

ಕೋವಿಡ್ ಹಾವಳಿಯ ನಡುವೆ ನಡೆದ ಚುನಾವಣೆಯಲ್ಲಿ, ಪ್ರಮುಖ ಪಕ್ಷಗಳು ಎಲ್ಲಾ ನಿಯಮ/ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದವು. ಕೊನೆಯ ಮೂರು ಹಂತದ ಚುನಾವಣೆಯನ್ನು ಒಂದೇ ದಿನದಲ್ಲಿ ನಡೆಸಿ ಎನ್ನುವ ಟಿಎಂಸಿ ಮನವಿಗೆ ಆಯೋಗ ಸೊಪ್ಪು ಹಾಕಿರಲಿಲ್ಲ.

ಪಶ್ಚಿಮ ಬಂಗಾಳ ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್: ಬಿಜೆಪಿ ದಿಗ್ವಿಜಯಪಶ್ಚಿಮ ಬಂಗಾಳ ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್: ಬಿಜೆಪಿ ದಿಗ್ವಿಜಯ

ಬಿಜೆಪಿ ನೂರು ಸೀಟಿಗಿಂತ ಜಾಸ್ತಿ ತೆಗೆದುಕೊಂಡರೆ ಟ್ವಿಟ್ಟರ್ ನಿಂದ ನಿವೃತ್ತಿ ಪಡೆಯುವುದಾಗಿ ಟಿಎಂಸಿಯ ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್ ಹೇಳಿದ್ದರು. ಆದರೆ, ಬಿಜೆಪಿ ಮತ್ತು ಮೋದಿಯ ಹೆಸರು ಸೌಂಡ್ ಮಾಡುತ್ತಿದೆ ಎನ್ನುವ ಅವರ ಆಡಿಯೋ ವೈರಲ್ ಆಗಿತ್ತು.

West Bengal Assembly Election Exit Poll Results 2021 By Jan Ki Baat , BJP To Win In Big Way

ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯ ಮತಗಟ್ಟೆ ಸಮೀಕ್ಷೆ ಒಂದೊಂದಾಗಿ ಹೊರಬೀಳುತ್ತಿದೆ. ಆದರೆ, ಯಾವುದೇ ವಾಹಿನಿಗಳು ಇದೇ ಪಕ್ಷ ಅಧಿಕಾರಕ್ಕೇರಲಿದೆ ಎಂದು ಹೇಳುತ್ತಿಲ್ಲ. ಆದರೆ, ಒಟ್ಟಾರೆಯಾಗಿ ಸಮೀಕ್ಷೆ ಪ್ರಕಾರ ಟಿಎಂಸಿ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿ ಏರ್ಪಡಲಿದೆ.

ಕೆಲವು ವಾಹಿನಿಗಳು ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೇರುತ್ತಾರೆ ಎಂದಿವೆ. ಕೆಲವು ವಾಹಿನಿಗಳು ಅತಂತ್ರ ಫಲಿತಾಂಶ ಬರಲಿದೆ ಎನ್ನುವ ವರದಿಯನ್ನು ಪ್ರಕಟಿಸುತ್ತಿದೆ. ಪೀಪಲ್ಸ್ ಪಲ್ಸ್ ವರದಿ ಮಾಡಿರುವ ಮತಗಟ್ಟೆ ಸಮೀಕ್ಷೆಯ ಪ್ರಕಾರ, ಬಿಜೆಪಿ ಗೆಲುವು ಸಾಧಿಸಲಿದೆ.

ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದೊಡ್ಡ ಪಕ್ಷ, ಆದರೆ ಅಧಿಕಾರವಿಲ್ಲ!ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದೊಡ್ಡ ಪಕ್ಷ, ಆದರೆ ಅಧಿಕಾರವಿಲ್ಲ!

ಈಗ ಜನ್ ಕೀ ಬಾತ್ ತನ್ನ ಸಮೀಕ್ಷೆಯನ್ನು ಪ್ರಕಟಿಸಿದ್ದು, ಇದರ ಪ್ರಕಾರ ಬಿಜೆಪಿ ಅಧಿಕಾರಕ್ಕೇರಲಿದೆ. ಜನ್-ಕೀ-ಬಾತ್ ಮತಗಟ್ಟೆ ಸಮೀಕ್ಷೆಯ ಪ್ರಕಾರ ಪಕ್ಷಗಳಿ ಎಷ್ಟು ಸ್ಥಾನ ಸಿಗಬಹುದು:

ತೃಣಮೂಲ ಕಾಂಗ್ರೆಸ್: 104 - 121
ಬಿಜೆಪಿ : 162 - 185
ಎಡಪಕ್ಷಗಳು + : 03-09

English summary
West Bengal Assembly Election Exit Poll Results 2021 By Jan Ki Baat, BJP To Win In Big Way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X