ಕಾಲು ತೋರಿಸಲು ಬರ್ಮುಡಾ ಹಾಕಿ: ದೀದಿಗೆ ಬಿಜೆಪಿ ಅಧ್ಯಕ್ಷರ ಸಲಹೆ

ಕೋಲ್ಕತಾ, ಮಾರ್ಚ್ 24: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಕಾಲಿನ ಗಾಯವನ್ನು ಎಲ್ಲ ಕಡೆಯೂ ಮುಖ್ಯವಾಗಿ ಪ್ರದರ್ಶಿಸುತ್ತಿರುವುದನ್ನು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ವ್ಯಂಗ್ಯವಾಡಿದ್ದಾರೆ. ತಮ್ಮ ಕಾಲನ್ನು ಹೀಗೆ ಪ್ರದರ್ಶಿಸಬೇಕೆಂದಿದ್ದರೆ ಅವರ ಬರ್ಮುಡಾ ಧರಿಸುವುದು ಸೂಕ್ತ ಎಂದು ಘೋಷ್ ಹೇಳಿದ್ದಾರೆ. ಇದು ತೃಣಮೂಲ ಕಾಂಗ್ರೆಸ್‌ನ ಆಕ್ರೋಶಕ್ಕೆ ತುತ್ತಾಗಿದೆ.

ಪುರುಲಿಯಾದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ದಿಲೀಪ್ ಘೋಷ್, 'ಆ ಪ್ಲಾಸ್ಟರ್ ತುಂಡಾಗಿದೆ. ಹೀಗಾಗಿ ಕೃತಕ ಬ್ಯಾಂಡೇಜ್ ಅನ್ನು ಸುತ್ತಲಾಗಿದೆ. ಈಗ ಆಕೆ ಎಲ್ಲರಿಗೂ ತನ್ನ ಕಾಲನ್ನು ತೋರಿಸುತ್ತಿದ್ದಾರೆ. ಆಕೆ ಸೀರೆ ಧರಿಸುತ್ತಿದ್ದಾರೆ, ಆದರೆ ಅವರ ಒಂದು ಕಾಲು ಮಾತ್ರ ಎಲ್ಲರಿಗೂ ಕಾಣುವಂತಿರುತ್ತಿದೆ. ಈ ರೀತಿ ಯಾರಾದರೂ ಸೀರೆ ಉಡುವುದನ್ನು ನಾನು ನೊಡಿಯೇ ಇಲ್ಲ. ನೀವು ನಮ್ಮ ಕಾಲುಗಳನ್ನು ಪ್ರದರ್ಶಿಸಬೇಕೆಂದಿದ್ದರೆ, ಸೀರೆ ಏಕೆ? ಬರ್ಮುಡಾವನ್ನು ಹಾಕಿಕೊಳ್ಳಿ. ಇದರಿಂದ ಎಲ್ಲರಿಗೂ ನಿಮ್ಮ ಕಾಲು ಚೆನ್ನಾಗಿ ಕಾಣಿಸುತ್ತದೆ' ಎಂದು ಲೇವಡಿ ಮಾಡಿದ್ದರು.

ಇದನ್ನು ಕಟುವಾಗಿ ಟೀಕಿಸಿರುವ ಟಿಎಂಸಿ ಸಂಸದೆ ಮೊಹುವಾ ಮೊಯಿತ್ರಾ, ದಿಲೀಪ್ ಘೋಷ್ ಅವರನ್ನು 'ವಿಕೃತಕಾಮಿ' ಎಂದು ಕರೆದಿದ್ದಾರೆ. 'ಮಮತಾ ದೀದಿ ಅವರು ಸೀರೆ ಏಕೆ ಉಡುತ್ತಿದ್ದಾರೆ. ತಮ್ಮ ಕಾಲನ್ನು ಚೆನ್ನಾಗಿ ತೋರಿಸಲು ಅವರು ಬರ್ಮುಡಾ ಶಾರ್ಟ್ಸ್ ಹಾಕಬಹುದು ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷರು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಇಂತಹ ವಿಕೃತಕಾಮಿ ನೀತಿಭ್ರಷ್ಟ ಮಂಗಗಳು ತಾವು ಬಂಗಾಳದಲ್ಲಿ ಗೆಲ್ಲುತ್ತೇವೆ ಎಂದು ಯೋಚಿಸುತ್ತವೆಯೇ?' ಎಂದು ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.

Wear Bermudas To Display Legs: BJP State President Dilip Ghosh To Mamata Banerjee

'ಬಿಜೆಪಿ ಬಂಗಾಳ ಅಧ್ಯಕ್ಷರ ಪಾತ್ರವು ಕೀಳು ಮಾತುಗಳಿಗೆ ಸೀಮಿತವಾಗಿದೆ ಎನಿಸುತ್ತಿದೆ. ಬಂಗಾಳದ ಮುಖ್ಯಮಂತ್ರಿ ಮೇಲಿನ ತೀಕ್ಷ್ಣ ದಾಳಿಗಳಿಂದ ಟಿಎಂಸಿ ಕಾರ್ಯಕರ್ತರ ಮೇಲಿನ ಹಿಂಸಾಚಾರಗಳವರೆಗೆ ಅವರು ಎಲ್ಲ ಮಿತಿಗಳನ್ನೂ ಮೀರಿದ್ದಾರೆ. ಮತ್ತೊಮ್ಮೆ ಆಘಾತಕಾರಿ ಮಾತುಗಳು!' ಎಂದು ಕಕೋಲಿ ಘೋಷ್ ದಸ್ತಿದಾರ್ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+