ಪ.ಬಂಗಾಳದಲ್ಲಿ ಹಿಂಸಾಚಾರಕ್ಕೆ ಎಂಟು ಜನ ಬಲಿ: ಘಟನೆ ಖಂಡಿಸಿದ ಗವರ್ನರ್
ಕೊಲ್ಕತ್ತಾ ಮಾರ್ಚ್ 22: ಮಂಗಳವಾರ ಎಂಟು ಮಂದಿಯನ್ನು ಬಲಿತೆಗೆದುಕೊಂಡ ರಾಮ್‌ಪುರಹತ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಖರ್ ಅವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅವರು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. "ಭಯಾನಕ ಹಿಂಸಾಚಾರ ಮತ್ತು ಅಗ್ನಿಸ್ಪರ್ಶದ ಭರಾಟೆ ರಾಮ್‌ಪುರಹತ್ ಬೀರ್ಭುಮ್ ಜಿಲ್ಲೆಯಲ್ಲಿ ತಾಂಡವಾಡುತ್ತಿದೆ. ಹಿಂಸಾಚಾರ ಕಾನೂನುಬಾಹಿರತೆಯ ಹಿಡಿತದಲ್ಲಿದೆ ಎಂದು ಸೂಚಿಸುತ್ತದೆ. ಈಗಾಗಲೇ ಎಂಟು ಜೀವಗಳನ್ನು ಇದು ಬಲಿಪಡೆದುಕೊಂಡಿದೆ" ಎಂದು ಹೇಳಿದರು. ಜೊತೆಗೆ ಅವರು ಮುಖ್ಯ ಕಾರ್ಯದರ್ಶಿಯಿಂದ ಘಟನೆಯ ಬಗ್ಗೆ ತುರ್ತು ಮಾಹಿತಿಯನ್ನು ಕೋರಿದ್ದಾರೆ. ಜೊತೆಗೆ ಅವರು ಎಂಟು ಜೀವಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಶೀಘ್ರ ತನಿಖೆಗೆ ಆಗ್ರಹಿಸಿದ್ದಾರೆ.
ಬಿರ್ಭುಮ್ ಜಿಲ್ಲೆಯ ರಾಮ್‌ಪುರಹತ್‌ನಲ್ಲಿ ಮಂಗಳವಾರ ಮುಂಜಾನೆ ಎಂಟು ಜನರು ತಮ್ಮ ಮನೆಗೆ ಬೆಂಕಿ ಹಚ್ಚಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ತೃಣಮೂಲ ಕಾಂಗ್ರೆಸ್ ಪಂಚಾಯತ್ ನಾಯಕನ ಹತ್ಯೆ ನಡೆದ ಕೆಲವೇ ಗಂಟೆಯೊಳಗೆ ಈ ಘಟನೆ ನಡೆದಿದೆ ಎಂದು ಡಿಜಿಪಿ ಮನೋಜ್ ಮಾಳವೀಯ ಕೋಲ್ಕತ್ತಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
Horrifying violence and arson orgy #Rampurhat #Birbhum indicates state is in grip of violence culture and lawlessness. Already eight lives lost.
— Governor West Bengal Jagdeep Dhankhar (@jdhankhar1) March 22, 2022
Have sought urgent update on the incident from Chief Secretary.
My thoughts are with the families of the bereaved. pic.twitter.com/vtI6tRJcBX
ಸುಟ್ಟ ಮನೆಯೊಂದರಿಂದ ಏಳು ಸುಟ್ಟ ದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಬ್ಬ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಳವಿಯಾ ಹೇಳಿದರು. "ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಮತ್ತು ನಿನ್ನೆ ರಾತ್ರಿಯಿಂದ ಗ್ರಾಮದಲ್ಲಿ ಪೊಲೀಸ್ ಭದ್ರತೆ ಸ್ಥಾಪಿಸಲಾಗಿದೆ. ಮನೆಗಳಿಗೆ ಹೇಗೆ ಬೆಂಕಿ ಹೊತ್ತಿಕೊಂಡಿದೆ ಮತ್ತು ಘಟನೆಗೆ ಬರ್ಶಾಲ್ ಗ್ರಾಮದ ಪಂಚಾಯತ್ ಉಪಮುಖ್ಯಸ್ಥರ ಸಾವಿಗೆ ಸಂಬಂಧವಿದೆಯೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು.

10 ಶವಗಳು ಪತ್ತೆಯಾಗಿವೆ ಎಂದು ಕೆಲವು ಅಗ್ನಿಶಾಮಕ ದಳದ ಅಧಿಕಾರಿಗಳ ಹೇಳಿಕೆಗಳ ಬಗ್ಗೆ ಕೇಳಿದಾಗ, ಉನ್ನತ ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದರು. ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ ಏಳು ಮಂದಿಯ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಗಾಯಗೊಂಡ ವ್ಯಕ್ತಿಗಳನ್ನು ರಕ್ಷಿಸಲಾಯಿತು. ಅವರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಜೊತೆಗೆ ರಾಮ್‌ಪುರಹತ್ ಪೊಲೀಸ್ ಠಾಣೆಯ ಎಸ್‌ಡಿಪಿಒ ಮತ್ತು ಉಸ್ತುವಾರಿಯನ್ನು ಸಕ್ರಿಯ ಪೊಲೀಸ್ ಕರ್ತವ್ಯದಿಂದ ತೆಗೆದುಹಾಕಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಎಡಿಜಿ (ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದೆ ಎಂದು ಮಾಳವೀಯ ಹೇಳಿದರು. ಆಡಳಿತಾರೂಢ ಟಿಎಂಸಿ ಸಚಿವ ಫಿರ್ಹಾದ್ ಹಕೀಮ್ ನೇತೃತ್ವದ ಮೂವರು ಶಾಸಕರ ತಂಡವನ್ನು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಕಳುಹಿಸಿದೆ. ಬರ್ಶಾಲ್ ಗ್ರಾಮದ ಟಿಎಂಸಿ ಪಂಚಾಯತ್ ಉಪ ಮುಖ್ಯಸ್ಥ ಭದು ಶೇಖ್ ಅವರ ಶವ ಸೋಮವಾರ ಈ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೃಣಮೂಲ ನಾಯಕ ಭದು ಶೇಖ್ ಅವರ ಮೃತದೇಹ ಸೋಮವಾರ ಪತ್ತೆಯಾದ ನಂತರ ಪ್ರತಿಭಟನೆಗಳು ಪ್ರಾರಂಭವಾದವು ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ನಾಯಕ ಸುವೆಂದು ಅಧಿಕಾರಿ, ಸರಣಿ ಟ್ವೀಟ್‌ಗಳಲ್ಲಿ ಕೇಂದ್ರ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದಾರೆ ಮತ್ತು ಪ್ರದೇಶದಲ್ಲಿ "ಭಯೋತ್ಪಾದನೆ ಮತ್ತು ಉದ್ವಿಗ್ನತೆ" ಇದೆ ಎಂದು ಆರೋಪಿಸಿದ್ದಾರೆ.
ಜೊತೆಗೆ ಹಿಂಸಾಚಾರದ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿಕೆ ನೀಡುವಂತೆ ಒತ್ತಾಯಿಸಿ 22 ಬಿಜೆಪಿ ಶಾಸಕರು ಮಂಗಳವಾರ ದಿನದ ಅಧಿವೇಶನದ ಮೊದಲಾರ್ಧದ ಕೊನೆಯಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯಿಂದ ಹೊರನಡೆದರು.
ಬಿಜೆಪಿ ಶಾಸಕ ಶಂಕರ್ ಘೋಷ್ ಶೂನ್ಯ ವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಲು ಬಯಸಿದ್ದರು. ಆದರೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಅದನ್ನು ಪ್ರಶ್ನೆಗಳಲ್ಲಿ ಪಟ್ಟಿ ಮಾಡಿಲ್ಲ ಎಂದು ಹೇಳಿದರು. ಇದರಿಂದ ಕೋಪಗೊಂಡ ಬಿಜೆಪಿ ಶಾಸಕರು 'ವಂದೇ ಮಾತರಂ' ಮತ್ತು 'ಧಿಕ್ಕಾರ ಧಿಕ್ಕಾರ' (ಖಂಡನೆ) ಘೋಷಣೆಗಳನ್ನು ಕೂಗುತ್ತಾ ಸದನದಿಂದ ಹೊರನಡೆದರು. ಘೋಷ್ ಮತ್ತು ಕೇಸರಿ ಪಕ್ಷದ 40 ಸದಸ್ಯರು ಸದನದಿಂದ ಹೊರಬಂದರು. ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದಲ್ಲಿ ರಾಜಕೀಯ ಕೊಲೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಮಮತಾ ಬ್ಯಾನರ್ಜಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications