ವಿಡಿಯೋ: ಬಿಜೆಪಿ ಕಚೇರಿ ಬಾಗಿಲು ಮುರಿದು ಟಿಎಂಸಿ ಚಿಹ್ನೆ ಬಿಡಿಸಿದ ದೀದಿ!

Recommended Video

      ಮಮತಾ ಬ್ಯಾನರ್ಜಿಯವರ ಮತ್ತೊಂದು ವಿಡಿಯೋ ವೈರಲ್ ಆಯ್ತು | Oneindia Kannada

      ಕೋಲ್ಕತ್ತಾ, ಜೂನ್ 03: ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಮತ್ತೊಂದು ವಿವಾದದಿಂದ ಸುದ್ದಿಯಾಗಿದ್ದಾರೆ.

      ಮೇ 30 ರಂದು ಪಶ್ಚಿಮ ಬಂಗಾಳದ ನೈಹತಿ ಎಂಬಲ್ಲಿಯ ಬಿಜೆಪಿ ಆಫೀಸಿಗೆ ನುಗ್ಗಿದ ಮಮತಾ ಬ್ಯಾನರ್ಜಿ , ಕಚೇರಿಯ ಬಾಗಿಲು ಮುರಿದು, ಕಚೇರಿಯ ಗೋಡೆಯ ಮೇಲೆ ತೃಣಮೂಲ ಕಾಂಗ್ರೆಸ್ ಚಿನ್ಹೆಯನ್ನು ಬರೆದು ಬಂದರು!

      Video: Mamata Banerjee breaks BJP office door and paints TMC symbol

      "ಈ ಕಚೇರಿ ತೃಣಮೂಲ ಕಾಂಗ್ರೆಸ್ ನದ್ದೇ ಆಗಿದ್ದು, ಬಿಜೆಪಿ ಅದನ್ನು ವಶಕ್ಕೆ ಪಡೆದಿತ್ತು. ಆದ್ದರಿಂದ ಈಗ ನಮ್ಮ ಕಚೇರಿಯನ್ನು ನಾವೇ ವಾಪಸ್ ಪಡೆಯುತ್ತಿದ್ದೇವೆ" ಎಂದು ಟಿಎಂಸಿ ಮುಖಂಡರು ತಿಳಿಸಿದ್ದಾರೆ.

      ಮೇ 30 ರಂದು ನಾರ್ಥ್ 24 ಪರ್ಗನಾಸ್ ಎಂಬ ಜಿಲ್ಲೆಯ ನೈಹತಿ ಎಂಬಲ್ಲಿದ್ದ ಬಿಜೆಪಿ ಕಚೇರಿಗೆ ತೆರಳಿದ ಮಮತಾ ಬ್ಯಾನರ್ಜಿ, ಅಲ್ಲಿನ ಕೇಸರಿ ಗೋಡೆಯ ಮೇಲೆ ತಮ್ಮ ಟಿಎಂಸಿ ಪಕ್ಷದ ಚಿನ್ಹೆಯನ್ನು ಬರೆದರು.

      ಈ ಘಟನೆಯ ನಂತರವೇ ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದವರನ್ನು ತರಾಟೆಗೆ ತೆಗೆದುಕೊಂಡು ವಿವಾದ ಸೃಷ್ಟಿಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+