ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಕೋಲ್ಕತಾ ಪಾರ್ಕ್ ಸರ್ಕಸ್ ಪ್ರದೇಶದಲ್ಲಿ ಶೂಟೌಟ್ 2 ಮೃತ

|
Google Oneindia Kannada News

ಕೋಲ್ಕತಾ, ಜೂನ್ 10: ಭಾರತ ಹಾಗೂ ಬಾಂಗ್ಲಾದೇಶ ನಡುವೆ ಬಸ್ ಸೇವೆ ಪುನರ್ ಆರಂಭವಾಗಿದೆ. ಈ ನಡುವೆ ಬಾಂಗ್ಲಾದೇಶದ ರಾಯಭಾರ ಕಚೇರಿ ಬಳಿ ಇಂದು ಗುಂಡಿನ ದಾಳಿ ನಡೆದಿದೆ.

ಈ ದುರ್ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಭದ್ರತಾ ಸಿಬ್ಬಂದಿಯೊಬ್ಬ ತನ್ನ ಸರ್ವೀಸ್ ರೈಫಲ್‌ನಿಂದ ಗುಂಡು ಹಾರಿಸಿದ್ದು, ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಹಲವು ಸುತ್ತಿನ ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ, ತಾನು ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ.

ಅಮಾನತುಗೊಂಡಿರುವ ವಕ್ತಾರೆ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ನೀಡಿರುವ ಹೇಳಿಕೆ ವಿರೋಧಿಸಿ ಹಲವಾರು ಪ್ರತಿಭಟನಾಕಾರರು ಈ ಪ್ರದೇಶದಲ್ಲಿ ಬೀಡು ಬಿಟ್ಟಿದ್ದರು. ಜನದಟ್ಟಣೆ ನಡುವೆ ಈ ದುರ್ಘಟನೆ ನಡೆದಿದ್ದು, ಭದ್ರತಾ ಸಿಬ್ಬಂದಿ 8- 10 ಸುತ್ತು ಗುಂಡು ಹಾರಿಸಿದ್ದು, ಗುರಿ ತಪ್ಪಿದ್ದರಿಂದ ಹೆಚ್ಚಿನ ಸಾವು ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Breaking News: Two Dead in Firing Near Kolkata’s Park Circus Area

ಬಾಂಗ್ಲಾದೇಶ ರಾಯಭಾರ ಕಚೇರಿಯಿಂದ ಸುಮಾರು 50 ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಮಹಿಳೆ ಬೈಕ್ ಸವಾರಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.


ಮೃತ ಪೊಲೀಸ್ ಸಿಬ್ಬಂದಿಯನ್ನು ಛೊಡ್ಪಾ ಲೆಪ್ಚಾ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ರಜೆ ಮೇಲಿದ್ದ ಈತ ಪುನಃ ಕರ್ತವ್ಯಕ್ಕೆ ಮರಳಿದ್ದ ಎಂದು ಸಿಟಿ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಕಾನ್‌ಸ್ಟೆಬಲ್ ತನ್ನ ಸೇವಾ ಆಯುಧ, ಸ್ವಯಂ-ಲೋಡಿಂಗ್ ರೈಫಲ್ ಅಥವಾ ಎಸ್‌ಎಲ್‌ಆರ್‌ನಿಂದ ಗುಂಡು ಹಾರಿಸಿದ. ಘಟನೆ ನಡೆದ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

"ಚೋಡುಪ್ ಲೆಪ್ಚಾ ಸುಮಾರು ಒಂದು ವರ್ಷದ ಹಿಂದೆ ಪೊಲೀಸರಿಗೆ ಸೇರಿದ್ದಾರೆ" ಎಂದು ಕೋಲ್ಕತ್ತಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ, ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಚೋಡುಪ್ ಲೆಪ್ಚಾ ಖಿನ್ನತೆಯಿಂದ ಬಳಲುತ್ತಿದ್ದರೆ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

"ಇಡೀ ಘಟನೆಯು ಸುಮಾರು ಐದು ನಿಮಿಷಗಳ ಕಾಲ ನಡೆಯಿತು," ಬಬ್ಲು ಶೇಖ್ ಎಂಬುವರು ಗುಂಡಿನ ದಾಳಿಯನ್ನು ನೋಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮೃತ ಮಹಿಳೆಯಲ್ಲಿ ರಿಮಾ ಸಿನ್ಹಾ ಎಂದು ಗುರುತಿಸಲಾಗಿದೆ. ಆಕೆ ಹೌರಾದ ನಿವಾಸಿ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಮೊಹಮ್ಮದ್ ಸರ್ಫರೋಶ್, ಮೊಹಮ್ಮದ್ ಬಶೀರ್ ಎಂದು ಗುರುತಿಸಲಾಗಿದೆ.

English summary
Two people, including a woman, were killed in Kolkata's Park Circus area as a policeman opened fire from his service weapon. The policeman shot himself after firing several rounds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X