ಸಿಬಿಐ v/s ಮಮತಾ ಬ್ಯಾನರ್ಜಿ ಯುದ್ಧ: ಪ್ರಮುಖ ಘಟನಾವಳಿಗಳು
ಕೊಲ್ಕತ್ತ, ಫೆಬ್ರವರಿ 06: ಕಳೆದ ಎರಡು ದಿನಗಳಿಂದ ಕೊಲ್ಕತ್ತದಲ್ಲಿ ನಡೆಯುತ್ತಿರುವ ಘಟನೆಗಳು ದೇಶದ ಗಮನ ಸೆಳೆದಿದೆ. ಕೊಲ್ಕತ್ತ ಪೊಲೀಸ್ ಕಮಿಷನರ್ ಅವರ ಬಂಧನಕ್ಕೆ ಬಂದಿದ್ದ ಸಿಬಿಐನ ಅಧಿಕಾರಿಗಳನ್ನೇ ಕೊಲ್ಕತ್ತ ಪೊಲೀಸರು ಬಂಧಿಸಿದ್ದರು. ಆ ನಂತರ ಅದು ಮಮತಾ ಬ್ಯಾನರ್ಜಿ v/s ಕೇಂದ್ರ ಸರ್ಕಾರ ಮಧ್ಯೆ ಯುದ್ಧವಾಗಿ ಮಾರ್ಪಾಡಾಯಿತು.
ಮಮತಾ ಬ್ಯಾನರ್ಜಿ ಅವರು ಸಿಬಿಐ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ರಾತ್ರಿ ಪ್ರತಿಭಟನಾ ಧರಣಿ ಕೂತರು. ಪ್ರಕರಣ ಸುಪ್ರಿಂಕೋರ್ಟ್ ಮೆಟ್ಟಿಲೇರಿತು. ಇಂದು ಸುಪ್ರಿಂ ಕೋರ್ಟ್ ಆದೇಶ ಹೊರಡಿಸಿದ ನಂತರ ಮಮತಾ ಬ್ಯಾನರ್ಜಿ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಕೇಂದ್ರ ಸರ್ಕಾರ v/s ಮಮತಾ ಬ್ಯಾನರ್ಜಿ ಯುದ್ಧದ ಪ್ರಮುಖ ಘಟನಾವಳಿಗಳು ಇಲ್ಲಿವೆ...
* ಕೊಲ್ಕತ್ತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಚಿಟ್‌ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ, ತಪಾಸಣೆ ಹಾಗೂ ಬಂಧನಕ್ಕೆ ಭಾನುವಾರ ರಾತ್ರಿ ಸಿಬಿಐ ತಂಡ ಆಗಮನ, ಸಿಬಿಐ ತಂಡವನ್ನು ವಶಕ್ಕೆ ಪಡೆದ ಕೊಲ್ಕತ್ತ ಪೊಲೀಸರು.

ಮಮತಾ ಬ್ಯಾನರ್ಜಿ ಧರಣಿ ಪ್ರಾರಂಭ
* ಕೇಂದ್ರ ತನಿಖಾ ಸಂಸ್ಥೆಯನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ಭಾನುವಾರ ರಾತ್ರಿ ಧರಣಿ ಸತ್ಯಾಗ್ರಹ. ಸಂವಿಧಾನ ಉಳಿಸಿ ಪ್ರತಿಭಟನೆಗೆ ಟಿಎಂಸಿಯ ಕಾರ್ಯಕರ್ತರು, ಮಂತ್ರಿಗಳು, ಶಾಸಕರು ಭಾಗಿ.

ಹಲವು ರಾಷ್ಟ್ರ ನಾಯಕರ ಬೆಂಬಲ
* ಚಂದ್ರಬಾಬು ನಾಯ್ಡು, ಕನಿಮೋಳಿ, ರಾಹುಲ್ ಗಾಂಧಿ, ದೇವೇಗೌಡ, ಯಶವಂತ ಸಿನ್ಹಾ, ಶರದ್ ಪೊವಾರ್, ತೇಜಸ್ವಿ ಯಾದವ್ ಸೇರಿ ಇನ್ನೂ ಹಲವರಿಂದ ಮಮತಾ ಬ್ಯಾನರ್ಜಿಗೆ ಬೆಂಬಲ.
* ಕೊಲ್ಕತ್ತ ಪೊಲೀಸರು ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ಸುಪ್ರಿಂಕೋರ್ಟ್‌ಗೆ ಮನವಿ ಸಲ್ಲಿಸಿದ ಸಿಬಿಐ, ಸೂಕ್ತ ದಾಖಲೆಗಳೊಂದಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ.

ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ
* ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ, ಕೊಲ್ಕತ್ತ ಪೊಲೀಸ್ ಕಮಿಷನರ್ ರಾಜೀವ್ ಅವರು ಮೇಘಾಲಯದ ಶಿಲ್ಲಾಂಗ್‌ನಲ್ಲಿ ಸಿಬಿಐ ಎದುರು ವಿಚಾರಣೆಗೆ ಹಾಜರಾಗಲು ಸೂಚಿಸಿತು. ಹಾಗೆಯೇ ರಾಜೀವ್ ಕುಮಾರ್ ಅವರನ್ನು ಬಂಧಿಸದಂತೆ ಸಿಬಿಐಗೆ ಸೂಚನೆ ನೀಡಿದೆ.

ಧರಣಿ ಅಂತ್ಯಗೊಳಿಸಿದ ಮಮತಾ
* ಸುಪ್ರಿಂ ಆದೇಶದ ಬಳಿಕ ಮಮತಾ ಬ್ಯಾನರ್ಜಿ ಅವರು ತಮ್ಮ ಮೂರು ದಿನದ ಧರಣಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಇದು ನಮಗೆ ಸಿಕ್ಕ ನೈಕಿಕ ಜಯ ಎಂದು ಹೇಳಿದರು. ಇನ್ನು ಮುಂದೆ ಇದೇ ಹೋರಾಟ ದೆಹಲಿಯಲ್ಲಿ ಮುಂದುವರೆಯಲಿದೆ ಎಂದು ಮಮತಾ ಹೇಳಿದರು.

'ಮಮತಾ ಮುಖದ ಮೇಲೆ ಮೊಟ್ಟೆ'
* ಸುಪ್ರಿಂಕೋರ್ಟ್ ಆದೇಶದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸುಪ್ರಿಂ ಆದೇಶ ಮಮತಾ ಬ್ಯಾನರ್ಜಿ ಮುಖದ ಮೇಲೆ ಮೊಟ್ಟೆ ಎಸೆದಂತಾಗಿದೆ ಎಂದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications