• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ರಾಜ್ಯಪಾಲರಿಗೆ ಟಿಎಂಸಿ ಕರೆ!

|

ಕೋಲ್ಕತ್ತಾ, ಮೇ 15 : ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಖರ್‌ಗೆ ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯುವಂತೆ ತೃಣಮೂಲ ಕಾಂಗ್ರೆಸ್ ಕರೆ ಕೊಟ್ಟಿದೆ. ಪಶ್ಚಿಮ ಬಂಗಾಳ ಮತ್ತು ಕೇಂದ್ರ ಸರ್ಕಾರದ ನಡುವೆ ಜಟಾಪಟಿ ನಡೆಯುತ್ತಲೇ ಇರುತ್ತದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ರಾಜ್ಯಪಾಲರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಪ್ಯಾಕೇಜ್ ಕುರಿತು ಅವರು ಮಾಡಿರುವ ಟ್ವೀಟ್ ವಿವಾದ ಹುಟ್ಟು ಹಾಕಿದೆ.

ಶ್ರಮಿಕ್ ರೈಲುಗಳಿಗೂ ಕೆಂಪು ಬಾವುಟ ತೋರಿದರಾ ಮಮತಾ ಬ್ಯಾನರ್ಜಿ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 20 ಲಕ್ಷ ಕೋಟಿ ಪ್ಯಾಕೇಜ್ ವಿವರಣೆ ನೀಡುತ್ತಿದ್ದಂತೆ ರಾಜ್ಯಪಾಲ ಜಗದೀಪ್ ಧನಖರ್‌ ಟ್ವೀಟ್ ಮಾಡಿದ್ದರು. ರೈತರು, ವಲಸೆ ಕಾರ್ಮಿಕರ ಬಗ್ಗೆ ಸರ್ಕಾರದ ಕಾಳಜಿ ಬಗ್ಗೆ ಶ್ಲಾಘಿಸಿದ್ದರು.

ಪಶ್ಚಿಮ ಬಂಗಾಳಕ್ಕೆ ವಿಮಾನ ಸೇವೆ ಬೇಡ; ಮಮತಾ ಪತ್ರ

ತೃಣಮೂಲ ಕಾಂಗ್ರೆಸ್ ಈ ಟ್ವೀಟ್‌ಗೆ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ಮೆಚ್ಚಿಸುವ ಕೆಲಸ ಮಾಡುವ ರಾಜ್ಯಪಾಲರು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಕಣಕ್ಕಿಳಿಯಲಿ ಎಂದು ಲೇವಡಿ ಮಾಡಿದೆ.

ಕೊರೊನಾ ವೈರಸ್: ಜೈಲು ಸಿಬ್ಬಂದಿ, ಕೈದಿಗಳ ಸುರಕ್ಷತೆಗೆ ವಿಶೇಷ ಅನುದಾನ!

ಲಾಕ್ ಡೌನ್ ಘೋಷಣೆಯಾದಾಗ ರಾಜ್ಯಪಾಲ ಜಗದೀಪ್ ಧನಖರ್‌ ಮಾಡಿದ ಒಂದು ಟ್ವೀಟ್ ಸಹ ವಿವಾದಕ್ಕೆ ಕಾರಣವಾಗಿತ್ತು. ಲಾಕ್ ಡೌನ್ ಜಾರಿಗೆ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರ ಭದ್ರತಾ ಪಡೆಗಳನ್ನು ಕರೆಸಬೇಕು ಎಂದು ಅವರು ಟ್ವೀಟ್ ಮಾಡಿದ್ದರು.

ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೆ ಬರಬೇಕು. ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದ ಅಧಿಕಾರಿಗಳನ್ನು ಮನೆಗೆ ಕಳಿಸಬೇಕು. ಪ್ಯಾರಾ ಮಿಲಿಟರಿ ಪಡೆಗಳನ್ನು ಕರೆಸಿ ಲಾಕ್ ಡೌನ್ ಯಶಸ್ವಿ ಮಾಡಬೇಕು ಎಂದು ರಾಜ್ಯಪಾಲರು ಟ್ವೀಟ್ ಮಾಡಿ ವಿವಾದ ಎಬ್ಬಿಸಿದ್ದರು.

English summary
Mamata Banerjee lead Trinamool Congress upset with West Bengal governor Jagdeep Dhankhar after his tweet on union government package announcement. Party asked him to contest next state assembly polls on BJP ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X