ಮಮತಾ ಬ್ಯಾನರ್ಜಿ ತಲೆಗೆ 1 ಕೋಟಿ ರೂ. ಶಾಕಿಂಗ್ ಪತ್ರಕ್ಕೆ TMCಯಲ್ಲಿ ನಡುಕ

Recommended Video

      ಮಮತಾ ಬ್ಯಾನರ್ಜಿರನ್ನು ಜೀವಂತವಾಗಿ ಅಥವಾ ನಿರ್ಜೀವವಾಗಿ ಹಿಡಿದುಕೊಟ್ಟವರಿಗೆ 1 ಕೋಟಿ ರೂ. | Oneindia Kannada

      ಕೋಲ್ಕತ್ತಾ, ಜೂನ್ 10: "ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಜೀವಂತವಾಗಿ ಅಥವಾ ನಿರ್ಜೀವವಾಗಿ ಹಿಡಿದುಕೊಟ್ಟವರಿಗೆ 1 ಕೋಟಿ ರೂ ಬಹುಮಾನ ನೀಡಲಾಗುವುದು" ಎಂಬ ಒಕ್ಕಣೆಯ ಆಘಾತಕಾರಿ ಪತ್ರವೊಂದು ತೃಣಮೂಲ ಕಾಂಗ್ರೆಸ್ ಕಚೇರಿ ಸೇರಿದ್ದು, ಈ ಕುರಿತು ಪಕ್ಷಾಧ್ಯಕ್ಷೆ ಅಪರೂಪ ಪೊದ್ದರ್ ಕಳವಳ ವ್ಯಕ್ತಪಡಿಸಿದ್ದಾರೆ.

      ಈ ಪತ್ರವನ್ನು ಈಗಾಗಲೇ ಸೆರಾಂಪುರ ಪೊಲೀಸ್ ಠಾಣೆಗೆ ಕಳಿಸಲಾಗಿದ್ದು, ರಾಜೀವ್ ಕಿಲ್ಲಾ ಎಂಬುವವರ ಸಹಿ ಪತ್ರದ ಮೇಲಿದೆ. ಪತ್ರದಲ್ಲಿ ಮೂರು ಫೋನ್ ನಂಬರ್ ಗಳಿದ್ದು, ಬರೆದವರ ವಿಳಾಸವನ್ನೂ ಉಲ್ಲೇಖಿಸಲಾಗಿದೆ!

      "ಮಮತಾ ಬ್ಯಾನರ್ಜಿ ಒಬ್ಬ ರಾಕ್ಷಸಿ, ಅವರೊಬ್ಬ ಜಿಹಾದಿ. ಅವರ ಬಗ್ಗೆ ಯಾರಾದರೂ ಮಾಹಿತಿ ನೀದಿದರೆ, ಅವರನ್ನು ಜೀವಂತ ಅಥವಾ ನಿರ್ಜೀವವಾಗಿ ಹಿಡಿದುಕೊಟ್ಟವರಿಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗುವುದು" ಎಂದು ಈ ಪತ್ರದಲ್ಲಿ ಬರೆಯಲಾಗಿದೆ.

      Rs 1 Crore for capture Mamata Banerjee: a shocking letter creates tension

      ಲೋಕಸಭೆ ಚುನಾವಣೆಗೆ ಮುನ್ನ ಮತ್ತು ಫಲಿತಾಂಶದ ನಂತರ ಮಮತಾ ಬ್ಯಾನರ್ಜಿ ಅವರು ನಿರಂತರವಾಗಿ ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿವಾದಾತ್ಮಕ ಹೇಳಿಕೆ ನೀಡುತ್ತ ಬಂದಿದ್ದು, 'ನಮ್ಮ ತಂಟೆಗೆ ಬಂದವರನ್ನು ಮುಗಿಸಿಬಿಡುತ್ತೇವೆ' ಎಂದು ಅಬ್ಬರಿಸಿದ್ದರು. ಜೊತೆಗೆ ಇತ್ತೀಚೆಗೆ ನಡೆಯಬೇಕಿದ್ದ ಬಿಜೆಪಿ ವಿಜಯ ಯಾತ್ರೆಗೆ ನಿಷೇಧ ಒಡ್ಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+