• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಧುವಿನಂತೆ ಉಡುಪು, 'ಕಚಾ ಬಾದಮ್' ಸಾಂಗು: ರಾನು ಮಂಡಲ್ ಹೊಸ ವಿಡಿಯೋ

|
Google Oneindia Kannada News

ಇಂಟರ್ನೆಟ್ ಸೆನ್ಸೇಷನ್ ರಾನು ಮಂಡಲ್ ವಧುವಿನಂತೆ ಸಿಂಗಾರಗೊಂಡ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ರಾನು ಮಂಡಲ್ ತಮ್ಮ ಅದ್ಬುತ ಕಂಠದಿಂದ ಮಾತ್ರ ಫೇಮಸ್ ಆಗಿಲ್ಲ. ಬದಲಿಗೆ ಬೇರೆ ಬೇರೆ ಕಾರಣಗಳಿಂದಲೂ ರಾನು ಮಂಡಲ್ ಫೇಮಸ್ ಆಗಿದ್ದಾರೆ. ಒಂದಲ್ಲಾ ಒಂದು ವಿಚಾರಕ್ಕೆ ಅವರ ವಿಡಿಯೋಗಳು ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅದೇ ರೀತಿ ಇತ್ತೀಚೆಗೆ ವಿಡಿಯೋವೊಂದು ವೈರಲ್ ಆಗಿದ್ದು ಇದರಲ್ಲಿ ರಾನು ಅವರು ಕೆಂಪು ಸೀರೆ ಮತ್ತು ಆಭರಣದಲ್ಲಿ ಬಂಗಾಳಿ ವಧುವಿನಂತೆ ಅಲಂಕಾರಗೊಂಡಿದ್ದಾರೆ. ಅಲ್ಲದೆ, ಅವರು ವೈರಲ್ ಬೆಂಗಾಲಿ ಹಾಡು 'ಕಚಾ ಬದಮ್' ಅನ್ನು ಹಾಡಿದ್ದಾರೆ. ಇದು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಭಾರೀ ವೈರಲ್ ಆಗಿದೆ.

ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಅವರ ಹಾಡು ಕೆಲವು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ವೇಗವಾಗಿ ಟ್ರೆಂಡ್ ಆಗಿತ್ತು. ಫೇಸ್‌ಬುಕ್‌ನಲ್ಲಿನ ಈ ವಿಡಿಯೊವು 9,000 ಕ್ಕೂ ಹೆಚ್ಚು ಲೈಕ್ಸ್ ಹೊಂದಿದೆ ಮತ್ತು 13 ಸಾವಿರಕ್ಕೂ ಹೆಚ್ಚು ಶೇರ್‌ಗಳನ್ನು ಹೊಂದಿದೆ. ವೈರಲ್ ವಿಡಿಯೊದಲ್ಲಿ ರಾನು ಮಂಡಲ್ ವಧುವಿನ ವೇಷದಲ್ಲಿ ಕಚಾ ಬಾದಮ್ ಹಾಡನ್ನು ಹಾಡಿದ್ದಾರೆ. ಈ ವಿಡಿಯೋವನ್ನು ಯಾರು ರೆಕಾರ್ಡ್ ಮಾಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಇದು ಆನ್‌ಲೈನ್‌ನಲ್ಲಿ ಹೆಚ್ಚಿನ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವಿಡಿಯೊವನ್ನು ಇಲ್ಲಿ ವೀಕ್ಷಿಸಿ:


ಜನವರಿಯಲ್ಲಿ ರಾನು ಮಂಡಲ್ ಕಚಾ ಬಾದಮ್ ಹಾಡುವ ಮತ್ತೊಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು. ಈ ವಿಡಿಯೋವನ್ನು ಕೆಲವರು ಕಾಮಿಡಿ ಮಾಡಿದ್ದಾರೆ. ರಾನು ಮಂಡಲ್ ಉಡುಪಿಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ.

Ranu Mondal dressed as a Bengali bride to sing Kacha Badam; video goes viral

ರಾನು ಮಂಡಲ್ ಯಾರು?

ವಯಸ್ಸಾದ ತಾಯಿ ರಾನು ಮಂಡಲ್ ಅವರನ್ನ ಸ್ವಂತ ಮಗಳು ಮನೆಯಿಂದ ಆಚೆ ತಳ್ಳಿದಳು. ಮನೆಯಿಂದ ಆಚೆ ಬಂದ ರಾನು ಮಂಡಲ್ ಹಾಡುಗಳನ್ನ ಹಾಡಿಕೊಂಡು ರೈಲ್ವೆ ಸ್ಟೇಷನ್ ಹಾಡು ಹಾಡಿ ಬಿಕ್ಷೆಯನ್ನ ಬೇಡುತ್ತ ಹೇಗೋ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು. 1972 ರ 'ಏಕ್ ಪ್ಯಾರ್ ಕಾ ನಗ್ಮಾ ಹೈ' ಹಾಡನ್ನು ಹಾಡುವ ವಿಡಿಯೊ ಆಗಸ್ಟ್ 2019 ರಲ್ಲಿ ವೈರಲ್ ಆಗಿ ರಾತ್ರೋರಾತ್ರಿ ಸ್ಟಾರ್ ಆದ ಮಹಿಳೆ ರಾನು ಮಂಡಲ್. ಪಶ್ಚಿಮದ ರಾಣಾಘಾಟ್ ರೈಲು ನಿಲ್ದಾಣದಲ್ಲಿ ಯುವ ಇಂಜಿನಿಯರ್ ಆಗಿರುವ ಅತೀಂದ್ರ ಚಕ್ರವರ್ತಿ ರಾನು ಮಂಡಲ್ ಅವರನ್ನು ಗುರುತಿಸಿದರು. ಈ ವೇಳೆ ರಾನು ಮಂಡಲ್ ಅದೃಷ್ಟ ಬದಲಾಗಿ ಅವರು ಹಾಡುತ್ತಿದ್ದ ಹಾಡುಗಳು ದೇಶದಾದ್ಯಂತ ವೈರಲ್ ಆಗಿವೆ. ಇನ್ನು ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯ ಅವರು ರಾನು ಮಂಡಲ್ ಅವರಿಗೆ ತನ್ನ ಸಿನಿಮಾದಲ್ಲಿ ಹಾಡನ್ನ ಹಾಡಲು ಅವಕಾಶ ಕೊಟ್ಟು ಆಕೆಯ ಜೀವನವನ್ನೇ ಬದಲಾಯಿಸಿದರು.

English summary
Ranu Mondal now sang Kacha Badam like a Bengali bride; Video Goes Viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X