ಮೋದಿ ದೇಹ ಅಡಿಯಿಂದ ಮುಡಿಯವರೆಗೂ ರಕ್ತಮಯವಾಗಿದೆ: ದೀದಿ

Recommended Video

      ನರೇಂದ್ರ ಮೋದಿ, ಮಮತಾ ಬ್ಯಾನರ್ಜಿ ನಡುವೆ ನಡೀತಿದೆ ವಾಕ್ಸಮರ

      ಕೋಲ್ಕತ್ತಾ, ಮೇ 07: "ಪ್ರಧಾನಿ ನರೇಂದ್ರ ಮೋದಿ ಅವರ ದೇಹ ಅಡಿಯಿಂದ ಮುಡಿಯವರೆಗೂ ರಕ್ತದಿಂದಲೇ ನೆಂದಿದೆ" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಕಳೆದ ಕೆಲ ದಿನಗಳಿಂದ ಉಭಯ ನಾಯಕರ ನಡುವೆ ನಿರಂತರವಾಗಿ ಮಾತಿನ ಚಕಮಕಿ ನಡೆಯುತ್ತಿದ್ದು, ಸೋಮವಾರ ಪಶ್ಚಿಮ ಬಂಗಾಳದಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಮೋದಿ, 'ಮಮತಾ ಬ್ಯಾನರ್ಜಿ ಅವರು ಮೂರು 'T' ತಿಂದ ಹೆಸರಾದವರು. ಒಂದು 'ತೃಣಮೂಲ', ಎರಡು 'ತೋಲಬಾಜಿ'(ಸುಲಿಗೆ), ಮೂರು 'ಟ್ಯಾಕ್ಸ್' ಎಂದು ಮೋದಿ ಮಮತಾ ಬ್ಯಾನರ್ಜಿ ಅವರನ್ನು ಅಣಕಿಸಿದ್ದರು.

      ಆದರೆ ಮೋದಿಯವರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡುವಲ್ಲಿ ಮುಂದಾದ ದೀದಿ, ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.

      PM Modi drenched in blood says, Mamata Banerjee

      "ಈ ದೇಶಕ್ಕಾಗಿ ಪ್ರಾಣ ತೆತ್ತವರಿಗೆ ಗೌರವ ನೀಡುವುದು ನಿಮಗೆ ಗೊತ್ತಿಲ್ಲ. ರಾಜೀವ್ ಗಾಂಧಿ ಅವರನ್ನು ನೀವು ಭ್ರಷ್ಟ ಪ್ರಧಾನಿ ಎಂದಿರಿ. ಈಗ ನನ್ನನ್ನು 'ತೋಲಬಾಜಿ' ಎಂದು ಕರೆದಿದ್ದೀರಿ. ನಾನು ತೋಲಬಾಜಿಯಾದರೆ ನೀವು ಯಾರು? ನೀವು ಯಾರು ಹೇಳಿ? ನಿಮ್ಮ ಇಡೀ ದೇಹವೂ-ಅಡಿಯಿಂದ ಮುಡಿಯವರೆಗೆ ರಕ್ತಮಯವಾಗಿದೆ. ಜನರ ರಕ್ತದಿಂದ ನಿಮ್ಮ ದೇಹ ತೊಯ್ದಿದೆ. ನಿಮಗೆ ಗೊತ್ತಿರುವುದು ಕೇವಲ ಧಂಗೆ, ಧಂಗೆ ಮತ್ತು ಧಂಗೆ" ಎಂದು ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆದ 2002 ರ ಗೋಧ್ರಾ ಗಲಭೆಯನ್ನು ದೀದಿ ಸ್ಮರಿಸಿದ್ದಾರೆ.

      "ಮಮತಾ ಬ್ಯಾನರ್ಜಿ ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರನ್ನು ಬಂಧಿಸುತ್ತಾರೆ. ನಾನೂ ಜೈ ಶ್ರೀರಾಮ್ ಎಂದು ಮಂತ್ರ ಪಠಿಸುತ್ತೇನೆ. ತಾಕತ್ತಿದ್ದರೆ ನನ್ನ ಬಂಧಿಸಿ" ಎಂದು ಪ್ರಧಾನಿ ಮೋದಿ ಬ್ಯಾನರ್ಜಿ ಅವರಿಗೆ ಸವಾಲೆಸೆದಿದ್ದರು.

      ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ದೀದಿ, "ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ಸಾಲದು, ನಿಮ್ಮ ಬಳಿ ರಾಮಮಂದಿರ ನಿರ್ಮಿಸುವ ತಾಕತ್ತು ಇಲ್ಲವಲ್ಲ!" ಎಂದು ಲೇವಡಿ ಮಾಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+