ಕೊಲ್ಕತ್ತ ಗಲಭೆಯಲ್ಲಿ ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ, ತುರ್ತು ಸಭೆ ಕರೆದ ಮಮತಾ
ಕೊಲ್ಕತ್ತ, ಜೂನ್ 20: ಕೊಲ್ಕತ್ತದ ಭಟ್ಪರಾದಲ್ಲಿ ಗುರುವಾರ ಬೆಳಗ್ಗೆ ನಡೆದ ಎರಡು ಗುಂಪುಗಳ ನಡುವೆ ಗಲಭೆಯಲ್ಲಿ ಓರ್ವ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತುರ್ತು ಸಭೆ ಕರೆದಿದ್ದಾರೆ.
17 ವರ್ಷದ ಬಾಲಕ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ. ಪಾನಿಪುರಿ ವ್ಯಾಪಾರಿ ರಾಮ್‌ಬಾಬು ಶಾ ಮೃತಪಟ್ಟಿದ್ದು, ಇನ್ನು ನಾಲ್ವರ ಸ್ಥಿತಿ ಗಂಭೀರವಾಗಿದೆ.
ಕಚ್ಚಾ ಬಾಂಬ್ ದಾಳಿ ನಡೆಸಿದ್ದು ಅದರ ಜೊತೆಗೆ ಗುಂಡಿನ ದಾಳಿ ಕೂಡ ನಡೆಸಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದರು.

ಸ್ಥಳೀಯ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆಗೂ ಕೆಲವು ಸಮಯಗಳ ಮೊದಲು ಈ ಘಟನೆ ನಡೆದಿದೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಘಟನೆ ಒಂದಾದಮೇಲೊಂದು ಗಲಭೆ ನಡೆಯುತ್ತಲೇ ಇದೆ.
ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮೇ 19 ರ ಬಳಿಕ ಈ ಪ್ರದೇಶದಲ್ಲಿ ಗಲಭೆ ನಡೆಯುತ್ತಲೇ ಇದೆ.












Click it and Unblock the Notifications