ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಿಷನ್ ಶಕ್ತಿ' ಘೋಷಣೆ ಬಗ್ಗೆ ಮಮತಾ ಬ್ಯಾನರ್ಜಿ ಕಿಡಿಕಿಡಿ

|
Google Oneindia Kannada News

ಕೋಲ್ಕತಾ, ಮಾರ್ಚ್ 27 : ಚುನಾವಣೆ ಸಮಯದಲ್ಲಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ, ಉಪಗ್ರಹ ಧ್ವಂಸ ಕ್ಷಿಪಣಿಯ ಸಾಮರ್ಥ್ಯ ತೋರುವ ಮೂಲಕ ಮತ್ತೊಂದು ಇತಿಮಿತಿಯಿಲ್ಲದ ನಾಟಕ ಬಿಜೆಪಿ ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಿಷನ್ ಶಕ್ತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿದ ನಂತರ ಪ್ರತಿಕ್ರಿಯಿಸಿರುವ ಮಮತಾ ಅವರು, ಚುನಾವಣೆ ಸಮಯದಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಕ್ಷಿಪಣಿಯ ಶಕ್ತಿ ಸಾಮರ್ಥ್ಯದ ಬಗ್ಗೆ ಪ್ರಕಟಿಸುವ ಅಗತ್ಯವೇನಿತ್ತು? ಅವರು ಅಲ್ಲೇನು ಕೆಲಸ ಮಾಡುತ್ತಾರಾ? ಅವರು ಬಾಹ್ಯಾಕಾಶಕ್ಕೆ ಹೋಗುತ್ತಾರಾ? ಎಂದು ಪ್ರಶ್ನಿಸಿದರು.

ಮೋದಿ ಭಾಷಣ LIVE: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಮೋದಿ ಭಾಷಣ LIVE: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು

ಇದನ್ನು ಡಿಆರ್‌ಡಿಓ ವಿಜ್ಞಾನಿಗಳೇ ಪ್ರಕಟಿಸಬೇಕಾಗಿತ್ತು, ಈ ಶ್ರೇಯ ಸಲ್ಲಬೇಕಾಗಿರುವುದು ಆ ವಿಜ್ಞಾನಿಗಳಿಗೆ. ಆದರೆ, ನರೇಂದ್ರ ಮೋದಿಯವರು ಮಾಡಿರುವುದು ರಾಜಕೀಯ ಘೋಷಣೆ. ಕೇವಲ ಒಂದು ಉಪಗ್ರಹವನ್ನು ಮಾತ್ರ ನಾಶ ಮಾಡಲಾಗಿದೆ. ಅದು ಸುಮಾರು ವರ್ಷಗಳಿಂದ ಅಲ್ಲಿಯೇ ಇದೆ. ಅದನ್ನು ನಾಶ ಮಾಡುವ ಅಗತ್ಯವೂ ಇರಲಿಲ್ಲ. ಅದನ್ನು ಯಾವಾಗ ಮಾಡಬೇಕಿತ್ತು ಎಂದು ನಿರ್ಧರಿಸಬೇಕಿದ್ದವರು ವಿಜ್ಞಾನಿಗಳು. ನಾನು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದು ದೀದಿ ಅಬ್ಬರಿಸಿದ್ದಾರೆ.

ಸಂಸ್ಕೃತದಲ್ಲಿ ಮಂತ್ರ ಹೇಳೋಣ ಬನ್ನಿ: ಮೋದಿ, ಅಮಿತ್ ಶಾಗೆ ಮಮತಾ ಸವಾಲು ಸಂಸ್ಕೃತದಲ್ಲಿ ಮಂತ್ರ ಹೇಳೋಣ ಬನ್ನಿ: ಮೋದಿ, ಅಮಿತ್ ಶಾಗೆ ಮಮತಾ ಸವಾಲು

ಅಂತಿಮ ದಿನಾಂಕ ಮುಗಿದುಹೋಗಿರುವ ಕೇಂದ್ರ ಸರಕಾರ ಎಸ್ಯಾಟ್ ಕ್ಷಿಪಣಿಯ ಬಗ್ಗೆ ಘೋಷಿಸುವ ಅಗತ್ಯವೇ ಇರಲಿಲ್ಲ. ಬಿಜೆಪಿಯ ಮುಳುಗುತ್ತಿರುವ ಹಡಗನ್ನು ಮೇಲೆತ್ತಲು ಈ ಕೆಲಸವನ್ನು ಮಾಡಲೇಬೇಕಿತ್ತು. ಆದರೆ ಹೀಗೆ ಮಾಡುವ ಮೂಲಕ ಬಿಜೆಪಿ ಚುನಾವಣಾ ನೀತಿ ಸಂಹಿತೆಯನ್ನು ಗಾಳಿಗೆ ತೂರಿದೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ಮಾಡಿದರು.

Mission Shakti, a political announcement : Mamata Banerjee

ಭಾರತದ ಈ ಯೋಜನೆಗಳು ವಿಶ್ವ ದರ್ಜೆಯವಾಗಿವೆ. ನಾವು ನಮ್ಮ ಡಿಆರ್ ಡಿಓ ಮತ್ತಿತರ ಸಂಶೋಧನಾ ವಿಜ್ಞಾನಿಗಳ ಬಗ್ಗೆ ಯಾವತ್ತಿಗೂ ಹೆಮ್ಮೆಯಿಂದಿರುತ್ತೇವೆ. ಹಲವಾರು ವರ್ಷಗಳಿಂದ ಸಂಶೋಧನೆ, ಬಾಹ್ಯಾಕಾಶ ಮ್ಯಾನೇಜ್ಮೆಂಟ್ ಮತ್ತು ಡೆವಲಪ್ಮೆಂಟ್ ನಡೆಯುತ್ತಲೇ ಇದೆ. ನಿಜವಾಗಿಯೂ ಅರ್ಹರಾಗಿರುವ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ನಾವು ಶ್ರೇಯ ನೀಡಬೇಕು ಎಂದು ಮಮತಾ ಬ್ಯಾನರ್ಜಿ ಅವರು ಟ್ವೀಟ್ ಮಾಡಿದ್ದಾರೆ.

English summary
Mission Shakti, a political announcement, says Trinmool Congress leader Mamata Banerjee. She said she will complain to election commission for violating code of conduct during Lok Sabha Elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X