• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಕೊರೊನಾದಿಂದ ಕಾಪಾಡಿ; ಮಾಸ್ಕ್ ಮೇಲೆ ಬರಹ

|

ಕೋಲ್ಕತ್ತಾ, ಮಾರ್ಚ್ 05 : ಪ್ರಪಂಚದ ವಿವಿಧ ದೇಶಗಳಲ್ಲಿ ಕೊರೊನಾ ಸೋಂಕು ಆತಂಕ ಸೃಷ್ಟಿಸಿದೆ. ಇದುವರೆಗೂ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 3089ಕ್ಕೆ ಏರಿಕೆಯಾಗಿದೆ. ಭಾರತದಲ್ಲಿಯೂ ಕೊರೊನಾ ಭೀತಿ ಆವರಿಸಿದೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕೊರೊನಾದಿಂದ ನಮ್ಮನ್ನು ರಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಲಾಗಿದೆ. ಈ ಕುರಿತು ಬರಹವಿರುವ ಮಾಸ್ಕ್ ಎಲ್ಲಾ ಕಡೆ ವಿತರಣೆಯಾಗುತ್ತಿದೆ. ಸ್ಥಳೀಯ ಬಿಜೆಪಿ ನಾಯಕರೇ ಈ ರೀತಿಯ ಮಾಸ್ಕ್ ನೀಡುತ್ತಿದ್ದಾರೆ.

ಕೊರೊನಾ ವೈರಸ್ ಭಯದಿಂದ ಮೆಕ್ಕಾದಲ್ಲಿ ಪ್ರಾರ್ಥನೆಯೇ ಬಂದ್

'Save from Coronavirus infection Modi ji' ಎಂಬ ಬರಹವಿರುವ ಮಾಸ್ಕ್ ಕೋಲ್ಕತ್ತಾದಲ್ಲಿ ವಿತರಣೆ ಮಾಡಲಾಗುತ್ತಿದೆ. ಸ್ಥಳೀಯ ಬಿಜೆಪಿ ನಾಯಕರೇ ಈ ಬರಹವನ್ನು ಮಾಸ್ಕ್‌ಗಳ ಮೇಲೆ ಬರೆಸಿದ್ದಾರೆ.

ಕೊರೊನಾ ಕಂಟಕ: ಭಾರತದ ನಿರ್ಧಾರದಿಂದ ಯುರೋಪ್ ರಾಷ್ಟ್ರಗಳಲ್ಲಿ ಆತಂಕ

ಕೊರೊನಾ ಭೀತಿ ಹೆಚ್ಚಾದ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಮಾಸ್ಕ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ವಿವಿಧ ರಾಜ್ಯಗಳಲ್ಲಿ ಮಾಸ್ಕ್‌ಗಳ ಬೆಲೆ ದಿಢೀರ್ ಹೆಚ್ಚಳವಾಗಿದೆ. ಡೆಟಾಲ್ ಹ್ಯಾಂಡ್ ವಾಷ್ ಮಾರುಕಟ್ಟೆಯಲ್ಲಿ ಸಿಗುತ್ತಲೇ ಇಲ್ಲ.

ಹೈದರಾಬಾದ್‌ನಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ 50 ರಿಂದ 60 ರೂ. ಇದ್ದ ಮಾಸ್ಕ್ ದರಗಳು ಈಗ 100 ರಿಂದ 150 ರೂ.ಗೆ ತಲುಪಿದೆ. ಹೆಚ್ಚು ಹಣ ನೀಡುತ್ತೇವೆ ಎಂದರೂ ಕೆಲವು ಕಡೆ ಮಾಸ್ಕ್‌ಗಳು ಸಿಗುತ್ತಿಲ್ಲ. ಹ್ಯಾಂಡ್ ವಾಷ್ ಮತ್ತು ಮಾಸ್ಕ್‌ಗಳಿಗಾಗಿ ಮೆಡಿಕಲ್ ಶಾಪ್ ಓನರ್‌ಗಳು ಬೇಡಿಕೆ ಸಲ್ಲಿಸುತ್ತಲೇ ಇದ್ದಾರೆ.

English summary
In a West Bengal Kolkata local BJP leaders distributed masks with Save from Coronavirus infection Modi ji printed on them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X