ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಭಿಷೇಕ್ ಮರು ನೇಮಕ
ಕೋಲ್ಕತ್ತಾ, ಫೆಬ್ರವರಿ 18: ಅಭಿಷೇಕ್ ಬ್ಯಾನರ್ಜಿ ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮರು ನೇಮಕಗೊಂಡಿದ್ದಾರೆ.
ತೃಣ ಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಶುಕ್ರವಾರ ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಿದ್ದು, ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮರು ನೇಮಕ ಮಾಡಿದ್ದಾರೆ. ಹಿರಿಯ ಮುಖಂಡ ಯಶವಂತ ಸಿನ್ಹಾ ಅವರನ್ನು ಅದರ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಟಿಎಂಸಿ ಯುವ ನಾಯಕರ ನಡುವೆ ಹೆಚ್ಚುತ್ತಿರುವ ಆಂತರಿಕ ಕಲಹದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಕಳೆದ ವಾರ ಹಿಂದಿನ ರಾಷ್ಟ್ರೀಯ ಪದಾಧಿಕಾರಿಗಳ ಸಮಿತಿ ಮತ್ತು ಅದರೊಂದಿಗೆ ಬಂದ ಖಾತೆಗಳನ್ನು ವಿಸರ್ಜಿಸಿದ್ದರು. ನಂತರ ಅವರು 20 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದರು. ಅದರಲ್ಲಿ ತಮ್ಮ ಪಕ್ಷದ ಅನುಭವಿಗಳಿಗೆ ಸ್ಥಾನ ನೀಡಿದ್ದರು

ಆಂತರಿಕ ಭಿನ್ನಾಭಿಪ್ರಾಯದ ಚರ್ಚೆಯ ಹೊರತಾಗಿಯೂ ನಾಲ್ಕು ಪ್ರಮುಖ ಪಟ್ಟಣಗಳಿಗೆ ಮುನ್ಸಿಪಲ್ ಚುನಾವಣೆಗಳಲ್ಲಿ ಪಕ್ಷವು ಜಯ ಗಳಿಸಿದ ದಿನಗಳ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ಸಭೆ ನಡೆಯಿತು.ಇತರರ ಪೈಕಿ, ಟಿಎಂಸಿ ಸಚಿವ ಅರೂಪ್ ಬಿಸ್ವಾಸ್ ಅವರನ್ನು ಖಜಾಂಚಿಯನ್ನಾಗಿ ನೇಮಕ ಮಾಡಲಾಗಿದೆ ಮತ್ತು ಕೊಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರಿಗೆ ಸಮನ್ವಯದ ಉಸ್ತುವಾರಿ ವಹಿಸಲಾಗಿದೆ.
ಕಳೆದ ವಾರ ಪಕ್ಷದ ಹಿರಿಯರು ಹಾಗೂ ಯುವ ಮುಖಂಡರ ನಡುವೆ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ರಾಷ್ಟ್ರೀಯ ಪದಾಧಿಕಾರಿಗಳ ಸಮಿತಿಯನ್ನು ಮಮತಾ ಬ್ಯಾನರ್ಜಿ ವಜಾಗೊಳಿಸಿದ್ದರು. ನಂತರ ಪಕ್ಷದ ಮುಖಂಡರನ್ನೊಳಗೊಂಡಂತೆ 20 ಸದಸ್ಯ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದರು.
ಟಿಎಂಸಿ ಹಿರಿಯ ಮುಖಂಡ ಸುಬ್ರಾತಾ ಬಕ್ಷಿ ಮತ್ತು ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ಕೂಡಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಟಿಎಂಸಿ ಸಚಿವ ಅರೂಪ್ ಬಿಸ್ವಾಸ್ ಅವರನ್ನು ಖಜಾಂಚಿಯಾಗಿ, ಕೊಲ್ಕತ್ತಾ ಮೇಯರ್ ಪರ್ಹದ್ ಹಕೀಂ ಅವರಿಗೆ ಸಮನ್ವಯತೆಯ ಹೊಣೆ ನೀಡಿದ್ದಾರೆ.












Click it and Unblock the Notifications