• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಂಗಾಳಕ್ಕೆ ಉತ್ತಮ ರಾಜಕಾರಣ ಬೇಕು: ಮಮತಾ ಬ್ಯಾನರ್ಜಿ ಸಹೋದರ

|

ಕೋಲ್ಕತಾ, ಜನವರಿ 13: ಪಶ್ಚಿಮ ಬಂಗಾಳದಲ್ಲಿ ವಂಶಪಾರಂಪರ್ಯದ ಆಡಳಿತ ಅಂತ್ಯಗೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಅವರ ಸ್ವಂತ ಸಹೋದರ ಕಾರ್ತಿಕ್ ಬ್ಯಾನರ್ಜಿ ಹೇಳಿದ್ದಾರೆ. ಜನರ ಜೀವನಮಟ್ಟವನ್ನು ಸುಧಾರಿಸುವುದರ ಬಗ್ಗೆ ಮಾತನಾಡುವ ರಾಜಕಾರಣಿಗಳನ್ನು ಕಂಡು ರೋಸಿ ಹೋಗಿರುವುದಾಗಿ ಹೇಳಿರುವ ಅವರು, ರಾಜಕಾರಣಿಗಳು ತಮ್ಮ ಸ್ವಂತ ಕುಟುಂಬದ ಸದಸ್ಯರ ಜೀವನವನ್ನು ಮಾತ್ರವೇ ಸುಧಾರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಶೀಘ್ರದಲ್ಲಿಯೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ರಾಜ್ಯದಲ್ಲಿ ತೀವ್ರ ರಾಜಕೀಯ ಸಂಚಲನ ಉಂಟಾಗುತ್ತಿದೆ. ಕಾರ್ತಿಕ್ ಬ್ಯಾನರ್ಜಿ ಅವರು ಸಹೋದರಿಯ ವಿರುದ್ಧವೇ ಸ್ಪರ್ಧಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಅಭಿವೃದ್ಧಿ ಮಂಡಳಿಯಿಂದ ಸುವೇಂದು ಅಧಿಕಾರಿ ತಂದೆ ತೆಗೆದುಹಾಕಿದ ಟಿಎಂಸಿ

'ನಾನು ಸಾಮಾನ್ಯವಾಗಿ ರಾಜಕೀಯದಲ್ಲಿನ ಬೂಟಾಟಿಕೆಯ ವಿರುದ್ಧ ಮಾತನಾಡುತ್ತಿದ್ದೇನೆ. ರಾಜಕಾರಣವು ಜನರ ಬಗ್ಗೆ, ಅವರ ಜೀವನ ಉತ್ತಮಗೊಳಿಸುವುದರ ಬಗ್ಗೆ ಇರಬೇಕು. ನಮ್ಮ ಸಾಧು ಸಂತರ ಸಲಹೆಗಳನ್ನು ಸಾರ್ವಜನಿಕ ಸೇವೆಯಲ್ಲಿ ಇರುವವರು ಮರೆಯಬಾರದು. ಅವರು ಜನರ ಬಗ್ಗೆ ಮೊದಲು ಆಲೋಚಿಸಬೇಕು. ಬಳಿಕ ತಮ್ಮ ಕುಟುಂಬದ ಬಗ್ಗೆ ಗಮನ ಹರಿಸಬೇಕು' ಎಂದು ತಮ್ಮ ಟೀಕೆಯು ಮಮತಾ ಬ್ಯಾನರ್ಜಿ ಅವರನ್ನು ಕುರಿತಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವುದಾಗಿ 'ಇಂಡಿಯಾ ಟುಡೆ' ವರದಿ ಮಾಡಿದೆ.

ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಅಲೋಚನೆಯಿದೆಯೇ ಅಥವಾ ಬಿಜೆಪಿಯಿಂದ ಆಹ್ವಾನಸ ಬಂದಿದ್ದು 2021ರ ಚುನಾವಣೆಯಲ್ಲಿ ಕುಟುಂಬದ ವಿರುದ್ಧ ಶತ್ರು ಪಾಳೆಯದಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, 'ಭವಿಷ್ಯದಲ್ಲಿ ಏನಾಗಲಿದೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಮಾಡಲು ಬಯಸುವವರೆಗೂ ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ' ಎಂದು ಹೇಳಿದ್ದಾರೆ.

ಪಶ್ಟಿಮ ಬಂಗಾಳ: ಯುವಕರನ್ನು ಸೆಳೆಯುವ ಬಿಜೆಪಿ ಯೋಜನೆ ಉಲ್ಪಾ-ಪಲ್ಟಾ!

ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಲು ಮಮತಾ ಬ್ಯಾನರ್ಜಿ ತೀವ್ರ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

English summary
West Bengal CM Mamata Banerjee's brother Kartik Banerjee said in an interview with India Today, Bengal need better politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X