ನೀತಿ ಆಯೋಗದ ಸಭೆಗೆ ಬರೊಲ್ಲ: ಮೋದಿಗೆ ದೀದಿ ಪತ್ರ

ಕೋಲ್ಕತಾ, ಜೂನ್ 7: ಇದೇ ತಿಂಗಳು ನಡೆಯಲಿರುವ ನೀತಿ ಆಯೋಗದ ಸಭೆಗೆ ತಾವು ಹಾಜರಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಮತಾ ಬ್ಯಾನರ್ಜಿ, ಜೂನ್ 15ರಂದು ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ನೀತಿ ಆಯೋಗಕ್ಕೆ ಯಾವುದೇ ಆರ್ಥಿಕ ಅಧಿಕಾರವಿಲ್ಲ. ಅಲ್ಲದೆ ಅದಕ್ಕೆ ರಾಜ್ಯಗಳ ಯೋಜನೆಗಳನ್ನು ಬೆಂಬಲಿಸುವ ಅಧಿಕಾರವೂ ಇಲ್ಲ. ಹೀಗಿರುವಾಗ ಯಾವುದೇ ಆರ್ಥಿಕ ಅಧಿಕಾರ ಹೊಂದಿಲ್ಲದ ಸಂಸ್ಥೆಯ ಸಭೆಗೆ ಹಾಜರಾಗುವುದರಿಂದ ನನಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Mamata Banerjee letter to Narendra Modi will not attend the Niti Aayoga meeting

ಈ ಹಿಂದೆಯೂ ಮಮತಾ ಬ್ಯಾನರ್ಜಿ ಅವರು ನೀತಿ ಆಯೋಗದ ಸಭೆಗಳಿಗೆ ಗೈರು ಹಾಜರಾಗಿದ್ದರು. ಯೋಜನಾ ಆಯೋಗವನ್ನು ರದ್ದುಗೊಳಿಸಿ ಹೊಸ ಸ್ವರೂಪದ ನೀತಿ ಆಯೋಗ ರಚಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಅವರು ಸಭೆಗಳನ್ನು ಬಹಿಷ್ಕರಿಸಿದ್ದರು.

ಶಕ್ತುಯುತ ಸಹಕಾರದ ಗಣತಂತ್ರಕ್ಕಾಗಿ ಅಂತರ್ ರಾಜ್ಯ ಸಮಿತಿಯನ್ನು ರಚಿಸುವಂತೆ ಮಮತಾ ಬ್ಯಾನರ್ಜಿ ಸಲಹೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+