ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪರ ಮತದಾರರಿಗೆ ಕಿರುಕುಳ ನೀಡುತ್ತಿರುವ ಸಿಆರ್‌ಪಿಎಫ್: ಮಮತಾ ಆರೋಪ

|
Google Oneindia Kannada News

ಕೋಲ್ಕತಾ, ಏಪ್ರಿಲ್ 7: ರಾಜ್ಯದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಬಿಜೆಪಿಯ ಪರವಾಗಿ ಗದ್ದಲಗಳನ್ನು ಸೃಷ್ಟಿಸಿ, ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿದೆ ಮತ್ತು ಮತದಾರರಿಗೆ ಕಿರುಕುಳ ನೀಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಕೂಚ್ ಬಿಹಾರ್ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಮಮತಾ, 'ಮತ ಚಲಾಯಿಸಲು ಸಾರ್ವಜನಿಕರಿಗೆ ಅವಕಾಶ ನೀಡಬೇಕು. ಅವರು ಮತಗಟ್ಟೆಗಳಿಗೆ ಬಾರದಂತೆ ಸಿಆರ್‌ಪಿಎಫ್ ತಡೆಯಬಾರದು. ಸಿಆರ್‌ಪಿಎಫ್ ಸಿಬ್ಬಂದಿ ನೈಜ ಯೋಧರು. ಅವರನ್ನು ನಾನು ಗೌರವಿಸುತ್ತೇನೆ. ಆದರೆ ಗದ್ದಲಗಳನ್ನು ಸೃಷ್ಟಿಸುವ, ಮಹಿಳೆಯರ ಮೇಲೆ ದಾಳಿ ನಡೆಸುವ ಮತ್ತು ಬಿಜೆಪಿ ಪರವಾಗಿ ಜನರಿಗೆ ಕಿರುಕುಳ ನೀಡುವವರನ್ನು ನಾನು ಗೌರವಿಸುವುದಿಲ್ಲ' ಎಂದು ಹೇಳಿದ್ದಾರೆ.

ನಂದಿಗ್ರಾಮ್ ಕ್ಷೇತ್ರದಲ್ಲಿ ದೀದಿ ಸೋಲಿನ ಬಗ್ಗೆ ಪ್ರಧಾನಿ ಭವಿಷ್ಯನಂದಿಗ್ರಾಮ್ ಕ್ಷೇತ್ರದಲ್ಲಿ ದೀದಿ ಸೋಲಿನ ಬಗ್ಗೆ ಪ್ರಧಾನಿ ಭವಿಷ್ಯ

ಮಂಗಳವಾರ ನಡೆದ ಮೂರನೇ ಹಂತದ ಚುನಾವಣೆಯ ವೇಳೆ ಅರಂಬಾಗ್‌ನ ಟಿಎಂಸಿ ಅಭ್ಯರ್ಥಿ ಸುಜಾತಾ ಮೊಂಡಲ್ ಅವರ ಮೇಲೆ ಇಟ್ಟಿಗೆ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆದ ಘಟನೆಯನ್ನು ಮಮತಾ ಪ್ರಸ್ತಾಪಿಸಿದರು.

'ನಿನ್ನೆ ಅವರು ಅರಂಬಾಗ್‌ನಲ್ಲಿ ಅನೇಕ ದೌರ್ಜನ್ಯಗಳನ್ನು ಎಸಗಿದ್ದರು. ಬಿದಿರಿನ ದೊಣ್ಣೆಗಳಿಂದ ಸುಜಾತಾ ಮೊಂಡಲ್ ಅವರ ಮೇಲೆ ದಾಳಿ ನಡೆಸಿದ್ದರು. ಅವರು ಕರ್ತವ್ಯದಲ್ಲಿದ್ದ ಅಧಿಕಾರಿಯ ತಲೆಗೆ ಹೊಡೆದಿದ್ದರು. ಗೋಘಟ್‌ನ ಅಭ್ಯರ್ಥಿಯ ಮೇಲೆ ಜನರು ಹಲ್ಲೆ ನಡೆಸಿದ್ದರು. ಅಲ್ಲದೆ ನಮ್ಮ ಬೂತ್ ಅಧ್ಯಕ್ಷರನ್ನು ಕೊಂದಿದ್ದರು' ಎಂದು ಮಮತಾ ಆರೋಪಿಸಿದ್ದಾರೆ.

Mamata Banerjee Alleges CRPF Harassing Voters In West Bengal At BJPs Behest

'ನಾನು ನಿಮ್ಮನ್ನು ವಿರೋಧಿಸುತ್ತೇನೆ. ನಾನು ಗುಂಡಿನಿಂದ ಜನರನ್ನು ಕೊಲ್ಲಲಾಗುವುದಿಲ್ಲ. ನಾನು ಬಾಂಬ್‌ಗಳನ್ನು ಎಸೆಯುವುದಿಲ್ಲ. ಆದರೆ ಒಂದು ಮತವೂ ನನಗೆ ಬಹಳ ಅಮೂಲ್ಯ ಎಂದು ಹೇಳುತ್ತೇನೆ. ನೀವು ನಮಗೆ ಮತಗಳನ್ನು ನೀಡಬೇಕು' ಎಂದಿದ್ದಾರೆ.

English summary
West Bengal Assembly Election 2021: CM Mamata Banerjee alleges CRPF harassing voters, creating nuisance at BJP's behest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X