ಇದು ಆರಂಭ, ಮುಂದಿನ ಬಜೆಟ್ ಗೆ ಕಾಯಿರಿ! ದೀದಿ ನಾಡಲ್ಲಿ ಮೋದಿ ಮೋಡಿ!

ಕೋಲ್ಕತ್ತಾ, ಫೆಬ್ರವರಿ 02: "ಇದು ಈಗ ಆರಂಭ ಅಷ್ಟೆ. ಲೋಕಸಭಾ ಚುನಾವಣೆಯ ನಂತರ ನಾವು ಮಂಡಿಸುವ ಮತ್ತೊಂದು ಬಜೆಟ್ ಯುವಕರು, ರೈತರು ಮತ್ತು ಸಮಾಜದ ಎಲ್ಲ ರಂಗದ ಜನರಿಗೆ ಬೋನಸ್ ನೀಡಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪಶ್ಚಿಮ ಬಂಗಾಳದ ಠಾಕೂರ್ ನಗರದಲ್ಲಿ ನಡೆದ ಸಮಾವೇಶದಲ್ಲಿ ಶನಿವಾರ ಮೋದಿ ಮಾತನಾಡುತ್ತಿದ್ದರು. 2019 ರ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೋದಿಯವರು ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ.

"ಬಿಜೆಪಿ ಶುಕ್ರವಾರ ಮಂಡಿಸಿದ ಬಜೆಟ್ ಆರಂಭವಷ್ಟೆ. ಲೋಕಸಭಾ ಚುನಾವಣೆಯ ನಂತರ ನಾವು ಮತ್ತೆ ಅಧಿಕಾರಕ್ಕೆ ಬಂದು, ಮತ್ತೆ ಬಜೆಟ್ ಮಂಡಿಸುತ್ತೇವೆ. ಅದು ಯುವಕರು, ರೈತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರಿಗೂ ಸಹಾಯಕವಾಗಲಿದೆ." ಎಂದು ಅವರು ಹೇಳಿದರು.

Lok Sabha elections: Modi addresses rally in West Bengal

ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉಲ್ಲೇಖಿಸಿದ ಮೋದಿ, 'ಸಮಾವೇಶಕ್ಕೆ ಇಷ್ಟೊದು ಜನಸಾಗರವೇ ಹರಿದುಬಂದಿದ್ದು, ಮಮತಾ ದೀದಿ ಅವರಿಗೆ ಭಯ ಮೂಡಿಸಿರಬೇಕು' ವ್ಯಂಗ್ಯವಾಡಿದರು.

ಪಶ್ಚಿಮ ಬಂಗಾಳದ ಒಟ್ಟು 42 ಕ್ಷೇತ್ರಗಳಲ್ಲಿ 22 ಕ್ಷೇತ್ರಗಳನ್ನು ಗೆಲ್ಲುವ ಯೋಜನೆಯನ್ನು ಬಿಜೆಪಿ ಹಾಕಿಕೊಂಡಿದೆ. 2014 ರಲ್ಲಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 22 ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿರುವ ಹಿನ್ನೆಲೆಯಲ್ಲಿ ಮೋದಿ, ಅಮಿತ್ ಶಾ ಮುಂತಾದ ಗಣ್ಯರು ಪಶ್ಚಿಮ ಬಂಗಾಳದಲ್ಲಿ ಅಡಿಗಡಿಗೆ ಸಮಾವೇಶ ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+