ಬೇಕಿದ್ದರೆ ಮೊಹರಂ ಮೆರವಣಿಗೆ ಸಮಯ ಬದಲಿಸಿ ಎಂದಿದ್ದೆ: ಯೋಗಿ ಆದಿತ್ಯನಾಥ್
ಬರಸಾತ್, ಮೇ 15: ಪಶ್ಚಿಮ ಬಂಗಾಳದ ಬರಸಾತ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಅಮಿತ್ ಶಾ ಅವರ ರೋಡ್ ಶೋ ವೇಳೆ ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಿರುವ ಅವರು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿದರು.
ಕಳೆದ ವರ್ಷ ಪಶ್ಚಿಮ ಬಂಗಾಳ ಸರ್ಕಾರ ರಾಜ್ಯದಲ್ಲಿ ದುರ್ಗಾ ಪೂಜೆಗೆ ನಿಷೇಧ ಹೇರಿತ್ತು. ಇಡೀ ದೇಶದಲ್ಲಿ ದುರ್ಗಾ ಪೂಜೆ ಮತ್ತು ಮೊಹರಂ ಒಂದೇ ಕಾಲಕ್ಕೆ ಬಂದಿತ್ತು. ಎರಡೂ ದಿನಗಳು ಒಂದೇ ಬಾರಿಗೆ ಬಂದಿದ್ದರಿಂದ ಪಶ್ಚಿಮ ಬಂಗಾಳ ಸರ್ಕಾರ ದುರ್ಗಾಪೂಜೆ ಆಚರಣೆಯನ್ನು ನಿರ್ಬಂಧಿಸಿತ್ತು ಎಂದು ಟೀಕಿಸಿದರು.

ಉತ್ತರ ಪ್ರದೇಶ ಸೇರಿದಂತೆ ದೇಶದೆಲ್ಲಡೆ ಏಕಕಾಲಕ್ಕೆ ದುರ್ಗಾಪೂಜೆ ಮತ್ತು ಮೊಹರಂ ನಡೆದಿತ್ತು. ಪೂಜೆಯ ಸಮಯವನ್ನು ಬದಲಾಯಿಸಬೇಕೇ? ಉತ್ತರ ಪ್ರದೇಶದ ಅಧಿಕಾರಿಗಳು ನನ್ನ ಬಳಿ ಕೇಳಿದ್ದರು. ಅದಕ್ಕೆ, ಪೂಜೆಯ ಸಮಯ ಬದಲಾಗುವುದಿಲ್ಲ. ಸಮಯ ಬದಲಿಸಬೇಕು ಎಂದು ಬಯಸಿದ್ದರೆ, ಮೊಹರಂ ಮೆರವಣಿಗೆಯ ಸಮಯವನ್ನು ಬದಲಿಸಿ ಎಂದು ಸೂಚಿಸಿದ್ದೆ ಎಂದು ಹೇಳಿದರು.
UP CM Yogi Adityanath in Barasat, West Bengal: In whole country, Durga puja & Muharram fell on same day, in UP officers asked me, should we change timing of puja? I said, timing of the puja won't be changed, if you want to change timing, change the timing of Muharram procession. pic.twitter.com/diXyfvZ3n9
— ANI (@ANI) 15 May 2019
ನನ್ನ ರಾಜ್ಯದಲ್ಲಿ ಯಾವುದೇ ಹಿಂಸಾಚಾರ ನಡೆದಿರಲಿಲ್ಲ. ಏಕೆಂದರೆ ಈ ಬಗ್ಗೆ ಜನರಿಗೆ ಮೊದಲೇ ಎಚ್ಚರಿಕೆ ನೀಡಿದ್ದೆ. ಪಶ್ಚಿಮ ಬಂಗಾಳ ಕೂಡ ಏಕೆ ಇದನ್ನು ಮಾಡಿರಲಿಲ್ಲ. ಇಲ್ಲಿ ಟಿಎಂಸಿ ತೀರಾ ಪ್ರಜಾಭುತ್ವಕ್ಕೆ ವಿರುದ್ಧವಾಗಿ ವರ್ತಿಸಿತ್ತು ಎಂದು ಆರೋಪಿಸಿದರು.
ಮೇ 23ರ ಬಳಿಕ ಪಶ್ಚಿಮ ಬಂಗಾಳದಲ್ಲಿ ಒಂದು ರಾಷ್ಟ್ರೀಯವಾದಿ ಸರ್ಕಾರ ರಚನೆಯಾಗಲಿದೆ ಮತ್ತು ಆಡಳಿತ ನಡೆಸಲಿದೆ ಎಂದು ಖಚಿತವಾಗಿ ಹೇಳುತ್ತೇನೆ ಎಂದರು.












Click it and Unblock the Notifications