ದೀದಿ ನಿಮ್ಮ ಟಿಎಂಸಿಯ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಮೋದಿ ಬಾಂಬ್

Recommended Video

      ಇದು ಇಲ್ಲಿ ಹೈದರಾಬಾದ್ ಕೊನೇ ಪಂದ್ಯ..!

      ಸೆರಾಂಪೊರ್, ಏಪ್ರಿಲ್ 29: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

      ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಸುಮಾರು 40 ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅವರು ಟಿಎಂಸಿ ತೊರೆದು ಬಿಜೆಪಿಯನ್ನು ಸೇರಿಕೊಳ್ಳಲಿದ್ದಾರೆ ಎಂದು ಮೋದಿ ಹೇಳಿದರು.

      ಲೋಕಸಭಾ ಚುನಾವಣೆ ವಿಶೇಷ ಪುಟ

      ಪಶ್ಚಿಮ ಬಂಗಾಳದ ಸೆರಾಂಪೊರ್‌ನಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದ ಮೋದಿ ಅವರು 'ದೀದಿ' ಮಮತಾ ಬ್ಯಾನರ್ಜಿ ಅವರಲ್ಲಿ ನಡುಕ ಹುಟ್ಟಿಸಿದ್ದಾರೆ. ನಾಲ್ಕನೆಯ ಹಂತದ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಅವರು ಈ ಬಾಂಬ್ ಸಿಡಿಸಿದರು.

      ಬಿಜೆಪಿಯ ದಿಗ್ವಿಜಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ಮೇ 23ರ ಮತ ಎಣಿಕೆಯ ದಿನದಂದು ಎಲ್ಲೆಡೆ ಬಿಜೆಪಿ ಇರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

      'ನಿಮ್ಮ ಎಂಎಲ್‌ಎ ಗಳು ನಿಮ್ಮನ್ನು ಎಸೆದು ಬಿಟ್ಟುಬರುತ್ತಾರೆ. ಇದು ಏಕೆಂದರೆ ನೀವು ಅವರ ನಂಬಿಕೆಗೆ ಮೋಸ ಮಾಡಿದ್ದೀರಿ. ಇದು ನಿಮಗೆ ಇನ್ನು ಸಂಕಷ್ಟವಾಗಿ ಪರಿಣಮಿಸಲಿದೆ ಮಮತಾ ದೀದಿ' ಎಂದು ಹೇಳಿದರು.

      Array

      40 ಶಾಸಕರು ಸಂಪರ್ಕದಲ್ಲಿದ್ದಾರೆ

      'ದೀದಿ, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗ ಎಲ್ಲಡೆ ಕಮಲ ಅರಳುತ್ತದೆ. ಮತ್ತು ನಿಮ್ಮ ಶಾಸಕರು ನಿಮ್ಮನ್ನು ಬಿಟ್ಟು ಬರುತ್ತಾರೆ. ಇಂದಿಗೂ, ದೀದಿ, ನಿಮ್ಮ 40 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ' ಎಂದು ಮೋದಿ ತಿಳಿಸಿದರು.

      ದೆಹಲಿ ದೂರ ಇದೆ ದೀದಿ

      ದೆಹಲಿ ದೂರ ಇದೆ ದೀದಿ

      ಮುಷ್ಟಿಯಷ್ಟು ಸೀಟುಗಳನ್ನಿಟ್ಟುಕೊಂಡು 'ದೀದಿ' ನೀವು ದೆಹಲಿಯನ್ನು ತಲುಪಲು ಸಾಧ್ಯವಿಲ್ಲ. ದೆಹಲಿ ತುಂಬಾ ದೂರವಿದೆ. ತಮ್ಮ ಸೋದರಳಿಯನನ್ನು ಪಶ್ಚಿಮ ಬಂಗಾಳದಲ್ಲಿ ಬೆಳೆಸಲು ಮಮತಾ ಬಯಸಿದ್ದಾರೆ ಎಂದು ಮೋದಿ ಟೀಕಿಸಿದರು.

      ಜನತೆ ನಿರ್ಧಾರ ಮಾಡಿದ್ದಾರೆ.

      ಜನತೆ ನಿರ್ಧಾರ ಮಾಡಿದ್ದಾರೆ.

      ನೀವು, ನಿಮ್ಮ ಕಾರ್ಯಕರ್ತರು ಮತ್ತು ನಿಮ್ಮ ಗುಂಡಾಗಳು ಎಷ್ಟು ಬೇಕಾದರೂ ಹಿಂಸಾಚಾರ ನಡೆಸಲಿ. ಆದರೆ, ಪಶ್ಚಿಮ ಬಂಗಾಳದ ಜನತೆ ತಮ್ಮ ನಿರ್ಧಾರವನ್ನು ಕೈಗೊಂಡಿದ್ದಾರೆ. ಟಿಎಂಸಿಯನ್ನು ರಾಜ್ಯದಲ್ಲಿ ಸೋಲಿಸಲಿದ್ದಾರೆ ಎಂದು ಮೋದಿ ಹೇಳಿದರು.

      ಮತ ಹಾಕಲು ಬಿಡುತ್ತಿಲ್ಲ

      ಪಶ್ಚಿಮ ಬಂಗಾಳದಲ್ಲಿ ದೀದಿ ಎಲ್ಲ ಮಿತಿಗಳನ್ನೂ ದಾಟಿದ್ದಾರೆ. ಜನರು ಮತ ಹಾಕುವುದನ್ನು ತಡೆಯಲು ಟಿಎಂಸಿಯ ಗೂಂಡಾಗಳು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಪ್ರಚಾರ ಮಾಡಲು ಅವರು ಬಿಡುತ್ತಿಲ್ಲ ಎಂದು ಆರೋಪಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+