ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾ

|
Google Oneindia Kannada News

Recommended Video

loksabha opinion polls 2019 : ಪಶ್ಚಿಮ ಬಂಗಾಳದಲ್ಲಿ ಹೆಚ್ಚಲಿದೆ ಬಿಜೆಪಿ ಹವಾ..!

ನವದೆಹಲಿ, ನವೆಂಬರ್ 16: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಕಷ್ಟು ಸುಧಾರಣೆ ಕಂಡುಕೊಳ್ಳಲಿದೆ. ಆದರೆ, ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದ ದಿಗ್ವಿಜಯ ಸಾಧಿಸುವುದು ಅದಕ್ಕೆ ಕಷ್ಟವಾಗಲಿದೆ.

ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮೋದಿ ಮತ್ತು ಮಮತಾ ಜಿದ್ದಾಜಿದ್ದಿಯಲ್ಲಿ ಮಮತಾ ಅವರೇ ಮೇಲುಗೈ ಸಾಧಿಸಲಿದ್ದಾರೆ ಎಂದು ಇಂಡಿಯಾ ಟಿವಿ-ಸಿಎನ್ಎಕ್ಸ್ ನಡೆಸಿದ ಸಹಭಾಗಿತ್ವದ ಸಮೀಕ್ಷೆ ತಿಳಿಸಿದೆ.

ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆ: ಮೋದಿ ಮತ್ತೆ ಪ್ರಧಾನಿ?ಇಂಡಿಯಾ ಟಿವಿ-ಸಿಎನ್ ಎಕ್ಸ್ ಸಮೀಕ್ಷೆ: ಮೋದಿ ಮತ್ತೆ ಪ್ರಧಾನಿ?

ಪಶ್ಚಿಮ ಬಂಗಾಳದ 42 ಲೋಕಸಭೆ ಕ್ಷೇತ್ರಗಳ ಪೈಕಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಮತಾ ಅವರ ತೃಣಮೂಲ ಕಾಂಗ್ರೆಸ್ 27 ಸೀಟುಗಳಲ್ಲಿ ಜಯಭೇರಿ ಭಾರಿಸಲಿದೆ. ಕಳೆದ ಬಾರಿ ಎರಡು ಸೀಟುಗಳನ್ನು ಪಡೆದುಕೊಂಡಿದ್ದ ಬಿಜೆಪಿ, ಈ ಬಾರಿ ಇನ್ನೂ ಆರು ಹೆಚ್ಚಿನ ಸೀಟುಗಳನ್ನು ಪಡೆದುಕೊಂಡು ಎಂಟಕ್ಕೇರುವ ಮೂಲಕ ಎಡಪಂಥೀಯ ವಿಚಾರಧಾರೆ ಹೆಚ್ಚಿರುವ ನೆಲದಲ್ಲಿ ತನ್ನ ಪ್ರಾಬಲ್ಯ ಸ್ಥಾಪನೆಯ ಹೆಜ್ಜೆ ಗುರುತುಗಳನ್ನು ಮೂಡಿಸಲಿದೆ.

India tv-cnx opinion poll survey west bengal mamata banerjee bjp congress left front lok sabha

ದಶಕಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿದ್ದ ಎಡಪಕ್ಷ 5 ಸೀಟುಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಒಂದೆರಡು ಸ್ಥಾನಗಳನ್ನಷ್ಟೇ ಪಡೆದುಕೊಳ್ಳಲಿದೆ.

ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ : ಒರಿಸ್ಸಾದಲ್ಲಿ ಬಿಜೆಡಿನೇ ಕಿಂಗ್ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ : ಒರಿಸ್ಸಾದಲ್ಲಿ ಬಿಜೆಡಿನೇ ಕಿಂಗ್

ಮತಹಂಚಿಕೆಯಲ್ಲಿ ಟಿಎಂಸಿಯ ಮತಗಳಿಗೆ ಪ್ರಮಾಣ ಕುಸಿಯಲಿದ್ದು, ಶೇ 36.2ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ. 2014ರ ಚುನಾವಣೆಯಲ್ಲಿ ಅದು ಶೇ 39.79ರಷ್ಟು ಮತಗಳನ್ನು ಗಳಿಸಿತ್ತು. 2014ರಲ್ಲಿ 17.02ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ, 2019ರಲ್ಲಿ ಶೇ 27.77ರಷ್ಟು ಮತಗಳನ್ನು ಗಳಿಸಲಿದೆ.

ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಕುಸಿಯಲಿದೆ ಬಿಜೆಪಿ ಬಲಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಕುಸಿಯಲಿದೆ ಬಿಜೆಪಿ ಬಲ

2014ರ ಚುನಾವಣೆಯಲ್ಲಿ ಟಿಎಂಸಿ 34 ಸೀಟುಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿ ಎರಡು, ಎಡಪಕ್ಷ ಎರಡು ಮತ್ತು ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದವು.

English summary
TMC leader, Chief Minister Mamata Banerjee will dominate against BJP in the Lok Sabha election 2019, the India Tv-CNX opinion poll said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X