ಮಮತಾಗೆ ಪ್ರಧಾನಿ ಆಗುವ ಅವಕಾಶಗಳಿವೆ ಎಂದ ಬಿಜೆಪಿ ನಾಯಕ

ಕೋಲ್ಕತ್ತಾ, ಜನವರಿ 6: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಿ ಆಗುವ ಅವಕಾಶಗಳಿವೆ. ಬೆಂಗಾಲಿಯೊಬ್ಬರು ಮೊದಲ ಬಾರಿಗೆ ದೇಶದ ಪ್ರಧಾನಿ ಆಗುವ ಅವಕಾಶ ಅವರಿಗೆ ಇದೆ ಎಂದು ಹೇಳಿಕೆ ಬಂದಿದೆ. ಆದರೆ ಇದನ್ನು ಹೇಳಿರುವವರು ಪಶ್ಚಿಮ ಬಂಗಾಲದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್.

ಪಶ್ಚಿಮ ಬಂಗಾಲದಲ್ಲಿ ಭಾರೀ ತಿಕ್ಕಾಟ ನಡೆಸುತ್ತಿರುವ ಬಿಜೆಪಿಗೆ ಅದೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನೀಡಿದ ಹೇಳಿಕೆ ಆಘಾತ ನೀಡದಂತಾಗಿದೆ. "ಅವರು ಆರೋಗ್ಯವಾಗಿರಬೇಕು. ಹಾಗಿದ್ದರೆ ಮಾತ್ರ ಅವರು ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ಅವರು ಆರೋಗ್ಯವಾಗಿಯೇ ಇದ್ದರೆ ಬೆಂಗಾಲಿಯೊಬ್ಬರು ಪಶ್ಚಿಮ ಬಂಗಾಲದಿಂದ ದೇಶಕ್ಕೆ ಪ್ರಧಾನಿ ಆಗುವ ಅವಕಾಶ ಇರುತ್ತದೆ" ಎಂದು ಘೋಷ್ ಅವರು ಮಮತಾ ಜನ್ಮದಿನಕ್ಕೆ ಶುಭಾಶಯ ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಉತ್ತಮ ಆರೋಗ್ಯ ಹಾಗೂ ಜೀವನದಲ್ಲಿ ಯಶಸ್ಸು ದೊರೆಯಲು ಆ ದೇವರನ್ನು ಪ್ರಾರ್ಥಿಸುತ್ತೇನೆ. ಏಕೆಂದರೆ ನಮ್ಮ ರಾಜ್ಯದ ಹಣೆಬರಹವು ಮಮತಾ ಅವರ ಯಶಸ್ಸಿನ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.

If any Bengali has chance to be Indias PM, Its Mamata: State BJP chief

ಬಂಗಾಲದ ಬಿಜೆಪಿ ಘಟಕದಿಂದ ಯಾರಾದರೂ ಪ್ರಧಾನಿ ಆಗಬಹುದಾ ಎಂಬ ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಿದ ಘೋಷ್, ಮಮತಾ ಬ್ಯಾನರ್ಜಿ ಅವರು ಸ್ಪರ್ಧೆಯಲ್ಲಿ ಮುಂದಿದ್ದಾರೆ. ಅವರ ನಂತರ ಖಂಡಿತವಾಗಿಯೂ ಬಂಗಾಲದಿಂದ ಒಬ್ಬರು ಪ್ರಧಾನಿ ಆಗ್ತಾರೆ. ಆದರೆ ಅವರಿಗೆ ಮೊದಲ ಅವಕಾಶ. ಜ್ಯೋತಿ ಬಸುಗೆ ಪಕ್ಷ ಒಪ್ಪದ ಕಾರಣಕ್ಕೆ ಅವರನ್ನು ಪ್ರಧಾನಿಯಾಗಿ ನೋಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಪ್ರಣಬ್ ಮುಖರ್ಜಿ ಅವರು ದೇಶಕ್ಕೆ ರಾಷ್ಟ್ರಪತಿಯಾದ ಮೊದಲ ಬೆಂಗಾಲಿ. ಇದೀಗ ಬೆಂಗಾಲಿಯೊಬ್ಬರು ಪ್ರಧಾನಮಂತ್ರಿ ಆಗುವ ಸಮಯ ಎಂದು ಘೋಷ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+