3 ತಿಂಗಳ ಅನುಭವದ ಹಮ್ರೋ ಪಾರ್ಟಿಗೆ ಡಾರ್ಜಿಲಿಂಗ್‌ನಲ್ಲಿ ಭರ್ಜರಿ ಜಯ
ಕೋಲ್ಕತ್ತಾ ಮಾರ್ಚ್ 3: ಇತ್ತೀಚಿಗೆ ಡಾರ್ಜಿಲಿಂಗ್ ಪಾಲಿಕೆಗೆ ನಡೆದ ಅತ್ಯಂತ ತೀವ್ರ ಪೈಪೋಟಿಯಿಂದ ಕೂಡಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಸದಾಗಿ ಎಂಟ್ರಿಯಾದ ಹಮ್ರೋ ಪಕ್ಷ ಬುಧವಾರ (ಮಾರ್ಚ್ 2) ಉತ್ತರ ಬಂಗಾಳದ ಬೆಟ್ಟಗಳಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಕಳೆದ ವರ್ಷ ನವೆಂಬರ್ 25 ರಂದು ಕೇವಲ ಮೂರು ತಿಂಗಳ ಹಿಂದೆ ಸ್ಥಾಪಿತವಾದ ಹಮ್ರೋ ಪಾರ್ಟಿ ಬುಧವಾರ ಡಾರ್ಜಿಲಿಂಗ್ ಪುರಸಭೆಯಲ್ಲಿ 32 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದ 108 ನಾಗರಿಕ ಸಂಸ್ಥೆಗಳಲ್ಲಿ ತೃಣಮೂಲ ಕಾಂಗ್ರೆಸ್ ದೊಡ್ದಪಕ್ಷಗಳನ್ನು ಸೋಲಿಸಿದೆ.
ಡಾರ್ಜಿಲಿಂಗ್‌ನಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ತನ್ನ ಛಾಪು ಮೂಡಿಸಲು ವಿಫಲವಾಗಿರುವ ಪಶ್ಚಿಮ ಬಂಗಾಳದ ಆಡಳಿತ ಪಕ್ಷ ಟಿಎಂಸಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ರಾಜಕೀಯ ಎದುರಾಳಿಗಳಿಗೆ ಈ ಗೆಲುವು ಆಘಾತವನ್ನುಂಟು ಮಾಡಿದೆ. ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸಿ ಎದುರಾಳಿ ಪಕ್ಷಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಉತ್ತರ ಬಂಗಾಳದ ಬೆಟ್ಟಗಳಲ್ಲಿ ಶೀಘ್ರದಲ್ಲೇ ನಡೆಯಲಿರುವ ಸ್ವಾಯತ್ತ ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದ (ಜಿಟಿಎ) ಮುಂಬರುವ ಚುನಾವಣೆಗಳಿಗೆ ಈ ಫಲಿತಾಂಶಗಳು ಹೊಸ ಬದಲಾವಣೆಯನ್ನೇ ಸೃಷ್ಟಿ ಮಾಡಿದೆ. ಐತಿಹಾಸಿಕವಾಗಿ, ಡಾರ್ಜಿಲಿಂಗ್‌ನಲ್ಲಿ ಹಿಡಿತ ಹೊಂದಿರುವ ಪಕ್ಷದ ರಾಜಕೀಯವಾಗಿ ಉತ್ತರ ಬಂಗಾಳವನ್ನೂ ಚಿಂತೆಗೀಡು ಮಾಡಿದೆ.

ಡಾರ್ಜಿಲಿಂಗ್ ಪುರಸಭೆಯನ್ನು ಗೆದ್ದ ಹ್ಯಾಮ್ರೋ ಪಾರ್ಟಿ
ಕೇವಲ ಮೂರು ತಿಂಗಳಲ್ಲಿ ಡಾರ್ಜಿಲಿಂಗ್‌ನ ಹ್ಯಾಮ್ರೋ ಪಾರ್ಟಿ ಉತ್ತಮ ಸಾಧನೆ ಮಾಡಿತು. ಹೊಸಬರಾದ ಅಜಯ್ ಎಡ್ವರ್ಡ್ ತಂಡದ ಮುಂದೆ ಬಿಮಲ್ ಗುರುಂಗ್, ಅನೀತ್ ಥಾಪಾ ಮತ್ತು ಬಿನೋಯ್ ತಮಾಂಗ್‌ರಂತಹ ಬಲಾಢ್ಯರು ಸೋತಿದ್ದಾರೆ. ಭರ್ಜರಿ ಜಯ ಗಳಿಸುವ ಮೂಲಕ ಹಮ್ರೋ ಪಾರ್ಟಿ ಡಾರ್ಜಿಲಿಂಗ್ ಪುರಸಭೆಯನ್ನು ವಶಪಡಿಸಿಕೊಂಡಿದೆ. ನಿರೀಕ್ಷೆಗೂ ಮೀರಿ ಹಮ್ರೋ ಪಕ್ಷ ಯಶಸ್ಸಿನ ಉತ್ತುಂಗವನ್ನು ತಲುಪಿದೆ.
ಅಜಯ್ ಎಡ್ವರ್ಡ್ಸ್ ನವೆಂಬರ್ 2021 ರಲ್ಲಿ ಪಕ್ಷವನ್ನು ಸ್ಥಾಪಿಸಿದರು ಮತ್ತು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ನವೆಂಬರ್ ಅಂತ್ಯದಲ್ಲಿ ಅವರು ಪರ್ವತಗಳಲ್ಲಿ ತಮ್ಮ ಹಮ್ರೋ ಪಾರ್ಟಿ ವಾಕ್ ಅನ್ನು ಪ್ರಾರಂಭಿಸಿದರು. ಮತ್ತು ಪಕ್ಷದ ಉದ್ಘಾಟನೆಯ ನಂತರ ಅಜಯ್ ಎಡ್ವರ್ಡ್ಸ್ ಮೊದಲ ಸುತ್ತಿನ ಮತದಾನದಲ್ಲಿ ಸ್ಪರ್ಧಿಸುವ ಮೂಲಕ ಯಶಸ್ಸನ್ನು ಸಾಧಿಸಿದರು. ಈ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.
ಡಾರ್ಜಿಲಿಂಗ್ ಮುನ್ಸಿಪಾಲಿಟಿಯಲ್ಲಿ ಹಮ್ರೋ ಪಕ್ಷದ ಉದಯ ಈ ಬಾರಿ ಡಾರ್ಜಿಲಿಂಗ್ ಪುರಸಭೆಯು ಗೂರ್ಖಾ ಜನಮುಕ್ತ ಮೋರ್ಚಾ, ಗೂರ್ಖಾ ಪ್ರಜಾತಾಂತ್ರಿಕ್ ಮೋರ್ಚಾ, ಜಿಎನ್‌ಎಲ್‌ಎಫ್‌ನೊಂದಿಗೆ ಹೋರಾಡಿದೆ. ತಳಸಮುದಾಯದವರು ಕೂಡ ಈ ಹೋರಾಟಕ್ಕೆ ಇಳಿಯಲು ಬಯಸಿದ್ದರು. ಇದರಲ್ಲಿ ಬಿಜೆಪಿಯೂ ಇತ್ತು. ಆದರೆ ಜಿಎನ್‌ಎಲ್‌ಎಫ್ ಯನ್ನು ಒಡೆದು ಹ್ಯಾಮ್ರೋ ಪಾರ್ಟಿ ಜಯ ಸಾಧಿಸುವುದೆಂದು ಎಂದು ಯಾರೂ ಭಾವಿಸಿರಲಿಲ್ಲ.ಇದು ರಾಜಕೀಯ ತಜ್ಞರ ಅಚ್ಚರಿಗೆ ಕಾರಣವಾಗಿದೆ.

ಯಾರು ಗೆದ್ದಿದ್ದಾರೆ?
ಅನಿತ್ ಥಾಪರ್ ಗೂರ್ಖಾ ಪ್ರಜಾತಾಂತ್ರಿಕ ಮೋರ್ಚಾ 6 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಬಿಮಲ್ ಗುರುಂಗ್ ಅವರ ಗೂರ್ಖಾ ಜನಮುಕ್ತಿ ಮೋರ್ಚಾ ನಾಲ್ಕು ವಾರ್ಡ್‌ಗಳಲ್ಲಿ ಗೆದ್ದಿದೆ. ತೃಣಮೂಲ 2 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಈ ಪುರಸಭೆಯಲ್ಲಿ ಬಿಜೆಪಿಗೆ ಯಾವುದೇ ಸ್ಥಾನ ಸಿಕ್ಕಿಲ್ಲ. GNLFO ಇಲ್ಲಿ ಯಾವುದೇ ಸೀಟುಗಳನ್ನು ಪಡೆದಿಲ್ಲ.
ಹೊಸದಾಗಿ ರೂಪುಗೊಂಡ ಹಮ್ರೋ ಪಾರ್ಟಿಯಲ್ಲಿ ಗುಡ್ಡಗಾಡು ಜನರ ಮನಸ್ಸನ್ನು ಗೆದ್ದಿದೆ. ಈ ಮಟ್ಟದ ಜನರ ವಿಶ್ವಾಸ ಡಾರ್ಜಿಲಿಂಗ್ ಪುರಸಭೆಯಲ್ಲಿ ಹ್ಯಾಮ್ರೋ ಪಕ್ಷದ ಗೆಲುವು ಗುಡ್ಡಗಾಡು ರಾಜಕೀಯದಲ್ಲಿ ಹೊಸ ಅಚ್ಚರಿಗಳನ್ನು ತಂದಿದೆ.

ಗುಡ್ದಗಾಡಿನ ರಾಜಕೀಯದಲ್ಲಿ ಹೊಸ ಬದಲಾವಣೆ
ಗ್ಲೆನಾರಿಸ್ ಬಾಸ್ ಅಜಯ್ ಎಡ್ವರ್ಡ್ಸ್ ರಾಜಕೀಯದಲ್ಲಿ ಹೊಸ ಪಕ್ಷವನ್ನು ರಚಿಸಲು GNLF ಅನ್ನು ತೊರೆದರು. ಅವರು ನವೆಂಬರ್ ಅಂತ್ಯದಲ್ಲಿ ಹೊಸ ತಂಡದ ಹೆಸರು ಮತ್ತು ಲೋಗೋವನ್ನು ಅನಾವರಣಗೊಳಿಸಿದರು. ಗುಡ್ದಗಾಡಿನಲ್ಲಿ ಅಜಯ್ ಪರಿಚಿತ ಮುಖ. ವ್ಯವಹಾರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಎಡ್ವರ್ಡ್ಸ್. ಅವರು ಜಿಎನ್‌ಎಲ್‌ಎಫ್‌ನ ಡಾರ್ಜಿಲಿಂಗ್ ಶಾಖೆಯ ಅಧ್ಯಕ್ಷರೂ ಆಗಿದ್ದರು. ಪಕ್ಷದ ಅಧ್ಯಕ್ಷ ಮನ್ ಘಿಸಿಂಗ್ ಅವರೊಂದಿಗಿನ ಭಿನ್ನಾಭಿಪ್ರಾಯದ ನಂತರ ಅವರು ಪಕ್ಷವನ್ನು ತೊರೆದರು. ಹೊಸ ಪಕ್ಷದ ಮಹತ್ವ ಅರಿತ ಅವರು ಗುಡ್ಡಗಾಡು ರಾಜಕಾರಣದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಅಜಯ್ ಎಡ್ವರ್ಡ್ಸ್ ಅವರ ಈ ಯಶಸ್ಸು ಗುಡ್ಡಗಾಡು ರಾಜಕೀಯದಲ್ಲಿ ಹೊಸ ಸಮೀಕರಣವನ್ನು ತರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ಬಿಮಲ್ ಗುರುಂಗ್, ಬಿನೋಯ್ ತಮಾಂಗ್, ಅನೀತ್ ಥಾಪಾ, ಅಜಯ್ ಜಿ ಎಡ್ಸಿಂಗ್ ಕೇಂದ್ರಬಿಂದುವಾಗಲಿರುವ ಬೆಟ್ಟದ ರಾಜಕೀಯ ಅಜಯ್ ಎಡ್ವರ್ಡ್ಸ್ ಸುತ್ತ ಸುತ್ತಲಿದೆ. ಡಾರ್ಜಿಲಿಂಗ್‌ನಲ್ಲಿ, ಅಜಯ್ ಅವರ ಹೊಸ ಪಕ್ಷದೊಂದಿಗೆ ತೃಣಮೂಲ ಅಥವಾ ಬಿಜೆಪಿ ಯಾವ ಸಮೀಕರಣವನ್ನು ಹೊಂದಿದೆ ಎಂಬುದನ್ನು ಲೆಕ್ಕಾಚಾರ ಮಾಡಲು ತಜ್ಞರು ಪ್ರಯತ್ನಿಸುತ್ತಿದ್ದಾರೆ.

ಮಿಶ್ರ ಅಭ್ಯರ್ಥಿಗಳು ಕಣದಲ್ಲಿ
ಶಿಕ್ಷಕರು, ಕಾರ್ಯಕರ್ತರು, ಪ್ರವಾಸಿ ಮಾರ್ಗದರ್ಶಿಗಳು, ತಾಯಂದಿರು, ಟ್ಯಾಕ್ಸಿ ಡ್ರೈವರ್, ಮನೆಯಲ್ಲಿಯೇ ಇರುವ ತಂದೆ ಮತ್ತು ಕೆಲವು ನಿರುದ್ಯೋಗಿ ಸ್ಥಳೀಯ ನಿವಾಸಿಗಳು ಸೇರಿದಂತೆ ಮಿಶ್ರ ಅಭ್ಯರ್ಥಿಗಳನ್ನು ಡಾರ್ಜಿಲಿಂಗ್‌ನ ಎಲ್ಲಾ 32 ವಾರ್ಡ್‌ಗಳಲ್ಲಿ (ಅವರಲ್ಲಿ 19 ಮಹಿಳೆಯರು) ಹ್ಯಾಮ್ರೊ ಪಕ್ಷವು ಕಣಕ್ಕಿಳಿಸಿದೆ. ಇದು ಸ್ಥಳೀಯ ಸಂಸ್ಥೆಯ ನಿಯಂತ್ರಣವನ್ನು ಕಸಿದುಕೊಂಡಿದೆ.
ಜೊತೆಗೆ ಈ ಪಕ್ಷ ನಿರೀಕ್ಷೆಗೂ ಮೀರಿ ಇದು ಜಿಜೆಎಂನ ಬಿಮಲ್ ಗುರುಂಗ್ ಮತ್ತು ಭಾರತೀಯ ಗೂರ್ಖಾ ಪ್ರಜಾತಾಂತ್ರಿಕ್ ಮೋರ್ಚಾದ (ಬಿಜಿಪಿಎಂ) ಅನಿತ್ ಥಾಪಾ ಅವರಂತಹ ದೊಡ್ಡ ನಾಯಕರನ್ನು ಚುನಾವಣೆಯಲ್ಲಿ ಮಕಾಡೆ ಮಲಗಿಸಿದೆ. ಆದಾಗ್ಯೂ, ಹ್ಯಾಮ್ರೋ ಪಕ್ಷದ ಮುಖ್ಯಸ್ಥ ಅಜೋಯ್ ಎಡ್ವರ್ಡ್ಸ್ ಸ್ವತಃ ವಾರ್ಡ್ 22 ರಿಂದ ಸೋಲನ್ನು ಅನುಭವಿಸಿದ್ದಾರೆ.
ಹೈ-ವೋಲ್ಟೇಜ್ ಪ್ರಚಾರ ನಂತರ ಶಾಂತಿಯುತವಾಗಿ ಮತದಾನ ನಡೆಯಿತು. ಶೇ 53.79 ರಷ್ಟು ಕಡಿಮೆ ಮತದಾನ ನಡೆದಿದೆ. ಡಾರ್ಜಿಲಿಂಗ್‌ನ ಬಿಜೆಪಿ ಸಂಸದ ರಾಜು ಬಿಸ್ತಾ ಮತ್ತು ಶಾಸಕ ನೀರಜ್ ಜಿಂಬಾ ಮತದಾರರ ವಿಶ್ವಾಸವನ್ನು ಗಳಿಸಲು ಮನೆ ಮನೆಗೆ ತೆರಳುತ್ತಿರುವುದು ಕಂಡುಬಂದರೆ, ಗುರುಂಗ್, ಥಾಪಾ ಮತ್ತು ಎಡ್ವರ್ಡ್ಸ್ ಅವರಂತಹ ಗುಡ್ಡಗಾಡು ನಾಯಕರು ತಮ್ಮ ವಾಕಿಂಗ್ ಬೂಟುಗಳನ್ನು ಹಾಕಿ ಪ್ರಚಾರ ಮಾಡಿದರು. ಸಾರ್ವಜನಿಕ ಬೆಂಬಲವನ್ನು ಪಡೆಯಲು ಯಾವುದೇ ಮನೆಯನ್ನೂ ಅವರು ಬಿಡಲಿಲ್ಲ. ಎಡ್ವರ್ಡ್ಸ್ ಅನಾರೋಗ್ಯಕ್ಕೆ ಒಳಗಾಗಿ ಪ್ರಚಾರದ ಕೊನೆಯ ಹಂತದಲ್ಲಿ ವಿಶ್ರಾಂತಿ ಪಡೆಯಬೇಕಾಯಿತು. ಇದೆಲ್ಲದರ ನಡುವೆ ತೀವ್ರ ಪೈಪೋಟಿಯಿಂದ ಹಮ್ರೋ ಪಕ್ಷ ಭರ್ಜರಿ ಜಯ ಗಳಿಸಿದೆ.












Click it and Unblock the Notifications