• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿಗೆ ಒಂದೇ ಒಂದು ಅವಕಾಶ ಕೊಟ್ಟು ನೋಡಿ; ಬಂಗಾಳ ಜನರಿಗೆ ಅಮಿತ್ ಶಾ ಮನವಿ

|

ಕೋಲ್ಕತ್ತಾ, ಫೆಬ್ರವರಿ 18: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗೆ ತಯಾರಿ ನಡೆಸುತ್ತಿರುವ ಬಿಜೆಪಿ, ರಾಜ್ಯದಲ್ಲಿ ಪರಿವರ್ತನಾ ಯಾತ್ರೆ ಕೈಗೊಂಡಿದೆ.

ಚುನಾವಣಾ ಪ್ರಚಾರದ ಸಲುವಾಗಿ ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಮ್ಮಿಕೊಂಡಿದ್ದು, ಗುರುವಾರ ಪರಿವರ್ತನಾ ಯಾತ್ರೆ ನಡೆಸುವ ಮೂಲಕ ಜನರನ್ನು ಓಲೈಕೆಗೆ ಮುಂದಾಗಿದ್ದಾರೆ. ತಮ್ಮ ಬಲವಾದ ಎದುರಾಳಿ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಬಂಗಾಳದ ಜನರಿಗೆ ಹಲವು ಭರವಸೆಗಳನ್ನೂ ನೀಡಿದ್ದಾರೆ. ಚಿನ್ನದ ಬಂಗಾಳ ಮಾಡುವ ಘೋಷಣೆಯನ್ನು ಮತ್ತೆ ಪುನರುಚ್ಚರಿಸಿದ್ದಾರೆ. ಮುಂದೆ ಓದಿ...

 ಒಂದೇ ಒಂದು ಅವಕಾಶ ಕೊಡಿ; ಅಮಿತ್ ಶಾ ಮನವಿ

ಒಂದೇ ಒಂದು ಅವಕಾಶ ಕೊಡಿ; ಅಮಿತ್ ಶಾ ಮನವಿ

ರಾಜ್ಯದಲ್ಲಿ ಕೋಮು ಗಲಭೆ ಹಾಗೂ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಹರಿಹಾಯ್ದಿರುವ ಅಮಿತ್ ಶಾ, "ಬಿಜೆಪಿಗೆ ಮತ ನೀಡಿ. ಬಂಗಾಳವನ್ನು "ಸೋನಾರ್ ಬಂಗ್ಲಾ" ಮಾಡುತ್ತೇವೆ ಎಂದು ಪುನರುಚ್ಚರಿಸಿದ್ದಾರೆ. ಕಮ್ಯುನಿಸ್ಟ್‌ಗಳಿಗೆ ಹಾಗೂ ಕಾಂಗ್ರೆಸ್‌ನವರಿಗೆ ಅವಕಾಶ ಕೊಟ್ಟಿದ್ದೀರಿ. ಮಮತಾ ಬ್ಯಾನರ್ಜಿಗೆ ಅವಕಾಶ ಕೊಟ್ಟಿದ್ದೀರಿ. ಬಂಗಾಳವನ್ನು ಚಿನ್ನದ ಬಂಗಾಳ ಮಾಡಲು ಮೋದಿಯವರಿಗೆ ಒಂದೇ ಒಂದು ಅವಕಾಶ ನೀಡಿ ನೋಡಿ ಎಂದು ಕಾಕದ್ವೀಪದ್ ನಲ್ಲಿ ಮೆರವಣಿಗೆಯನ್ನುದ್ದೇಶಿಸಿ ಅಮಿತ್ ಶಾ ಜನರಿಗೆ ಮನವಿ ಮಾಡಿದರು.

ನಮ್ಮ ಆಟ ಈಗ ಶುರುವಾಗಿದೆ; ತೃಣಮೂಲ ಕಾಂಗ್ರೆಸ್‌ಗೆ ದಿಲೀಪ್ ಘೋಷ್ ಎಚ್ಚರಿಕೆ

 294 ಸೀಟುಗಳಿಗೆ ಚುನಾವಣೆ

294 ಸೀಟುಗಳಿಗೆ ಚುನಾವಣೆ

ಇದೇ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳ ವಿಧಾನಸಣೆ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಪ್ರಬಲ ಸ್ಪರ್ಧೆಯಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಎಡಪಕ್ಷ ಮೈತ್ರಿಯಲ್ಲಿ ಕಣಕ್ಕಿಳಿಯಲಿವೆ. 294 ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಟಿಎಂಸಿ ಹಾಗೂ ಬಿಜೆಪಿ ನಡುವೆ ಹಣಾಹಣಿ ಏರ್ಪಟ್ಟಿದೆ.

English summary
"Give one chance to PM Modi to make bengal "sonar Bangla" in five years, said amit shah addressing rally in west bengal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X