ವಿಧಾನಸಭೆಯಲ್ಲಿ ಮಾರಾಮಾರಿ: ಸುವೇಂದು ಅಧಿಕಾರಿ ಸೇರಿ 5 ಬಿಜೆಪಿ ಶಾಸಕರು ಅಮಾನತು
ಕೋಲ್ಕತ್ತಾ ಮಾರ್ಚ್ 28: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಅಧಿವೇಶನ ಆರಂಭವಾದಾಗಿನಿಂದ ನಿರಂತರವಾಗಿ ಗದ್ದಲದ ವರದಿಗಳು ಬರುತ್ತಲೇ ಇವೆ. ಇದೀಗ ಜಗಳದ ವರೆಗೂ ತಲುಪಿದೆ. ವಿಧಾನಸಭೆಯೊಳಗೆ ಬಿಜೆಪಿ ಮತ್ತು ಟಿಎಂಸಿ ಶಾಸಕರ ನಡುವೆ ಘರ್ಷಣೆ ನಡೆದಿದ್ದು, ನಂತರ ಎರಡೂ ಪಕ್ಷಗಳ ಶಾಸಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾಹಿತಿ ಪ್ರಕಾರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಮನೋಜ್ ತಿಗ್ಗಾ ಮತ್ತು ಟಿಎಂಸಿ ಶಾಸಕ ಅಸಿತ್ ಮಜುಂದಾರ್ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯ ನಂತರ ಸುವೇಂದು ಅಧಿಕಾರಿ ಸೇರಿದಂತೆ 5 ಬಿಜೆಪಿ ಶಾಸಕರನ್ನು ಮುಂದಿನ ಸೂಚನೆಯವರೆಗೆ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ.
ವಿಧಾನಸಭೆಯ ಕೊನೆಯ ದಿನ ಮಾರಾಮಾರಿ
ವಿಧಾನಸಭೆಯಲ್ಲಿ ಹಲವು ವಿಷಯಗಳ ಕುರಿತು ವಿರೋಧ ಪಕ್ಷ ನಿರಂತರ ಪ್ರತಿಭಟನೆ ನಡೆಸುತ್ತಿದೆ. ಹೀಗಿರುವಾಗ ಅಧಿವೇಶನದ ಕೊನೆಯ ದಿನವಾದ ಸೋಮವಾರ ಬಿರ್ಭೂಮ್ ಹತ್ಯಾಕಾಂಡದ ವಿಷಯ ಬಿಸಿ ಮುಟ್ಟಿತು. ಬಿಜೆಪಿ ಶಾಸಕ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಿಧಾನಸಭೆಯೊಳಗೆ ಗದ್ದಲ ಸೃಷ್ಟಿಸಿದರು. ಸದನದ ಬಾವಿಗಿಳಿದ ಘೋಷಣೆಗಳನ್ನು ಕೂಗತೊಡಗಿದರು. ಬಿಜೆಪಿ ಶಾಸಕರನ್ನು ಕಂಡ ಟಿಎಂಸಿ ಶಾಸಕರೂ ವಾಗ್ವಾದಕ್ಕೆ ಮುಂದಾಗಿದ್ದು, ಬಳಿಕ ಉಭಯ ಪಕ್ಷಗಳ ಶಾಸಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಬಿರ್ಭೂಮ್ ಹಿಂಸಾಚಾರ ಪ್ರಕರಣ: ವಿಧಾನಸಭೆಯಲ್ಲಿ ಕೋಲಾಹಲ
ಮತ್ತೊಂದೆಡೆ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಶುಭೇಂದು ಅಧಿಕಾರಿ ಮಾತನಾಡಿ, ಪ್ರತಿಪಕ್ಷಗಳು ಕನಿಷ್ಠ ಕೊನೆಯ ದಿನದಂದು ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚೆಗೆ ಒತ್ತಾಯಿಸಿದರು. ಆದರೆ ಸರ್ಕಾರ ನಿರಾಕರಿಸಿತು. ನಮ್ಮ 8-10 ಶಾಸಕರೊಂದಿಗೆ ಜಗಳ ಮಾಡಲು ಕೋಲ್ಕತ್ತಾ ಪೊಲೀಸ್ ಸಿಬ್ಬಂದಿಯನ್ನು ಸಿವಿಲ್ ಡ್ರೆಸ್‌ನಲ್ಲಿ ಕರೆತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅನಾರುಲ್ ಹುಸೇನ್ ಸೃಷ್ಟಿಸಿದ ರಾಮ್‌ಪುರಹಟ್ ಘಟನೆಯಲ್ಲಿ ಅದೇ ಪರಿಸ್ಥಿತಿಯನ್ನು ಟಿಎಂಸಿ ಶಾಸಕರು ಮತ್ತು ಅವರ ಪೊಲೀಸರು ಸೃಷ್ಟಿಸಿದ್ದಾರೆ ಎಂದು ಅವರು ಹೇಳಿದರು. ಅದರ ವಿರುದ್ಧ ಇಂದು ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ಮದ್ಯಸ್ಥಿತಿಕೆ ಅಗತ್ಯವಿದೆ. ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸ್ಪೀಕರ್‌ಗೆ ನನ್ನ ದೂರನ್ನು ನೀಡುತ್ತೇನೆ.

ಟಿಎಂಸಿ ಶಾಸಕರ ಮೇಲೆ ಆರೋಪ
ಇದಕ್ಕೂ ಮೊದಲು ಹಲ್ಲೆಯ ಆರೋಪದ ನಂತರ ಬಿಜೆಪಿ ಶಾಸಕರು ವಿಧಾನಸಭೆಯಿಂದ ಹೊರಬಂದು ಮಮತಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಬಿರ್ಭೂಮ್ ವಿಷಯದ ಬಗ್ಗೆ ಚರ್ಚೆಗೆ ನಾವು ಬಯಸುತ್ತೇವೆ ಎಂದು ಬಿಜೆಪಿ ಹೇಳಿದೆ. ಅದರ ನಂತರ ಟಿಎಂಸಿ ಶಾಸಕರು ಗದ್ದಲ ನಡೆಸಿ ಅವರನ್ನು ಥಳಿಸಿದರು. ಬಿಜೆಪಿ ಶಾಸಕ ಮನೋಜ್ ತಿಗ್ಗಾ ಅವರು ಟಿಎಂಸಿ ಶಾಸಕರು ತನಗೆ ಥಳಿಸಿದ್ದಾರೆ ಮತ್ತು ಅವರ ಅಂಗಿಯನ್ನು ಹರಿದಿದ್ದಾರೆ ಎಂದು ಆರೋಪಿಸಿದ್ದಾರೆ.
BJP-TMC members clash in West Bengal Assembly today over #BirbhumViolence as BJP demanded a discussion over the brutal massacre. pic.twitter.com/K8QvyGSfYs
— Aditya Raj Kaul (@AdityaRajKaul) March 28, 2022
ಬಿರ್ಭೂಮ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸದನದ ವೇಳೆ ಸುವೆಂದು ಅಧಿಕಾರಿ ಸೇರಿದಂತೆ 5 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಲಾಗಿದೆ. ಟಿಎಂಸಿ ಮತ್ತು ಬಿಜೆಪಿ ಶಾಸಕರ ನಡುವಿನ ಘರ್ಷಣೆ ಹಿನ್ನೆಲೆಯಲ್ಲಿ ಸುವೇಂದು ಅಧಿಕಾರಿ ಸೇರಿದಂತೆ 5 ಬಿಜೆಪಿ ಶಾಸಕರನ್ನು ಮುಂದಿನ ಸೂಚನೆ ಬರುವವರೆಗೆ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ.












Click it and Unblock the Notifications