• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್-ಟಿಎಂಸಿ ಮಧ್ಯೆ ಹೊತ್ತಿಕೊಂಡ ಬೆಂಕಿ! ಮಹಾಘಟಬಂಧನ್ ಢಮಾರ್?

|

ಕೋಲ್ಕತ್ತಾ, ಏಪ್ರಿಲ್ 13: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಗೆ ಡಾರ್ಜಲಿಂಗ್ ಜಿಲ್ಲಾಡಳಿತ ಅನುಮತಿಯನ್ನು ನಿರಾಕರಿಸಿರುವುದು ಕಾಂಗ್ರೆಸ್ ನಾಯಕರಲ್ಲಿ ಆಕ್ರೋಶ ಹುಟ್ಟಿಸಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದ್ದು ಕೀಳುಮಟ್ಟದ ತಂತ್ರ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದ್ದು, ಈ ಕ್ರಮ ಅಸಾಂವಿಧಾನಿಕ ಎಂದು ದೂರಿದೆ.

ಏಪ್ರಿಲ್ 14 ರಂದು ರಾಹುಲ್ ಗಾಂಧಿ ಅವರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಪ್ರಚಾರ ಸಭೆ ನಡೆಸಬೇಕಿತ್ತು. ಸಿಲಿಗುರಿಯಲ್ಲಿ ಇಳಿಯಬೇಕಿದ್ದ ಹೆಲಿಕಾಪ್ಟರ್ ಗೆ ಡಾರ್ಜಲಿಂಗ್ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. "ಕಾಂಗ್ರೆಸ್ ಬಗ್ಗೆ ತೃಣಮೂಲ ಕಾಂಗ್ರೆಸ್ ಗೆ ಭಯವಿರುವುದರಿಂದ ಅದು ಇಂಥ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ತಮ್ಮ ವಿರೋಧಿಗಳಿಗೆ ಪ್ರಚಾರಕ್ಕೂ ಅವಕಾಶ ನೀಡದಿರುವುದು ಮಮತಾ ಬ್ಯಾನರ್ಜಿ ಅವರ ಸರ್ವಾಧಿಕಾರಿ ನಡೆಗೆ ಸಾಕ್ಷಿ" ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ದೀದಿ ಹೆಲಿಕಾಪ್ಟರ್ ಅನ್ನು ತಡೆಹಿಡಿದ ಟಿಎಂಸಿ ನಡೆಯಿಂದಾಗಿ ಕಾಂಗ್ರೆಸ್-ಟಿಎಂಸಿ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿದ್ದು, ಇದು ಮಹಾಘಟಬಂಧನದ ಮೇಲೆ ಭಾರೀ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ. ಈಗಾಗಲೇ ಮಹಾಘಟಬಂಧನದಿಂದ ಬಹುಪಾಲು ನಾಯಕರು ದೂರವೇ ಉಳಿದಿದ್ದು, ಬಿಜೆಪಿಗೆ ಇದು ವರದಾನವಾದರೆ ಅಚ್ಚರಿಯಿಲ್ಲ.

ಇತ್ತೀಚೆಗಷ್ಟೇ ಕೋಲ್ಕತ್ತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜಿ ಅಧ್ಯಕ್ಷ ಅಮಿತ್ ಶಾ ಅವರ ಹೆಲಿಕಾಪ್ಟರ್ ಅನ್ನೂ ತಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
After Darjeeling district administration denied permission for landing Congress chief Rahul Gandhi's helicopter in Siliguri, Congress accused TMC and its chief Mamata Banerjee for “resorting to cheap” and “unconstitutional” methods against opponents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X