ಪಟ್ಟು ಬಿಡದ ದೀದಿ: ಸುಪ್ರೀಂ ಕೋರ್ಟ್ ಮೊರೆಹೋದ ಸಿಬಿಐ
ಕೋಲ್ಕತ್ತಾ, ಫೆಬ್ರವರಿ 04: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಿಬಿಐ ನಡುವೆ ಉಂಟಾಗಿರುವ ವಿವಾದ ಪ್ರಕರಣ ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.
ಬಹುಕೋಟಿ ಶಾರದಾ ಸಮೂಹ ಸಂಸ್ಥೆ ಚಿಟ್ ಫಂಡ್ ಹಗರಣ ಹಾಗೂ ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಬಂಧಿಸಲು ಸಿಬಿಐ ಮುಂದಾಗಿತ್ತು.

ಆದರೆ ಸಿಬಿಐಯ ಈ ಕ್ರಮವನ್ನು ಖಂಡಿಸಿರುವ ದೀದಿ, 'ಸಂವಿಧಾನ ಉಳಿಸಿ' ಎಂದು ಕೋಲ್ಕತ್ತದ ಮೆಟ್ರೋ ಚಾನೆಲ್ ಬಳಿ ಧರಣಿ ಆರಂಭಿಸಿದ್ದಾರೆ. ರಾಜೀವ್ ಕುಮಾರ್ ಅವರನ್ನು ಬಂಧಿಸಲು ಅನುವು ಮಾಡಿಕೊಡದ ಮಮತಾ ಬ್ಯಾನರ್ಜಿ ಮತ್ತು ಕೋಲ್ಕತ್ತಾ ಪೊಲೀಸರ ನಡೆ ಖಂಡಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೊರೆಹೋಗಲಿದ್ದು, ಪ್ರಕರಣ ಬಿಗಡಾಯಿಸುವ ಎಲ್ಲಾ ಸೂಚನೆಗಳೂ ಕಂಡುಬರುತ್ತಿವೆ.
ದೇಶದಾದ್ಯಂತ ವಿಪಕ್ಷ ನಾಯಕರು ಸಿಬಿಐ ನಡೆಯನ್ನು ಖಂಡಿಸಿ, ಮಮತಾ ಬ್ಯಾನರ್ಜಿ ಅವರ ಬೆಂಬಲಕ್ಕೆ ನಿಂತಿದ್ದಾರೆ.












Click it and Unblock the Notifications