ಶಾರದಾ ಚಿಟ್ ಫಂಡ್ ಹಗರಣದಲ್ಲಿ ನಳಿನಿ ಚಿದಂಬರಂ ವಿರುದ್ಧ ಸಿಬಿಐ ಚಾರ್ಜ್ ಶೀಟ್

ಕೋಲ್ಕತ್ತಾ, ಜನವರಿ 11: ಶಾರದಾ ಗ್ರೂಪ್ ಆಫ್ ಕಂಪನಿಯ ಚಿಟ್ ಪಂಡ್ ಹಗರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪತ್ನಿ ನಳಿನಿ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿದೆ. 1.4 ಕೋಟಿ ರುಪಾಯಿ ಹಣ ಪಡೆದ ಆರೋಪ ನಳಿನಿ ಚಿದಂಬರಂ ವಿರುದ್ಧ ಮಾಡಲಾಗಿದೆ.

ಶಾರದಾ ಗ್ರೂಪ್ ನ ಮಾಲೀಕರಾಡ ಸುದಿಪ್ತ ಸೇನ್ ಮತ್ತು ಇತರ ಆರೋಪಿಗಳ ಜತೆ ಸೇರಿ ವಂಚನೆ ಹಾಗೂ ಹಣ ದುರುಪಯೋಗದ ಕ್ರಿಮಿನನ್ ಸಂಚು ರೂಪಿಸಿದ ಆರೋಪವನ್ನು ಮಾಡಲಾಗಿದೆ ಎಂದು ಸಿಬಿಐ ವಕ್ತಾರರಾಆದ ಅಬಿಷೇಕ್ ದಯಾಳ್ ಮಾಹಿತಿ ನೀಡಿದ್ದಾರೆ.

ಕೇಂದ್ರದ ಮಾಜಿ ಸಚಿವರಾದ ಮಾತಂಗ್ ಸಿನ್ಹಾರ ಪತ್ನಿ ಮನೋರಂಜನಾ ಸಿನ್ಹಾ ಅವರು ಸುದಿಪ್ತ ಸೇನ್ ರನ್ನು ನಳಿನಿ ಚಿದಂಬರಂಗೆ ಪರಿಚಯಿಸಿದ್ದರು. ಸೆಬಿ, ಆರ್ ಒಸಿ ಮತ್ತಿತರ ಸಂಸ್ಥೆಗಳಿಂದ ನಡೆಯುವ ತನಿಖೆ ಸಂಭಾಳಿಸುವಂತೆ ನಳಿನಿ ಅವರಿಗೆ 2010-12ರಲ್ಲಿ 1.4 ಕೋಟಿ ನೀಡಲಾಗಿದೆ ಎಂದು ಸಿಬಿಐ ಆರೋಪ ಮಾಡಿದೆ.

CBI filed charge sheet against Nalini Chidambaram on Sarada chit fund scam

ಈ ಚಾರ್ಜ್ ಶೀಟ್ ಅನ್ನು ಕೋಲ್ಕತ್ತಾದ ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ದಾಖಲಿಸಿದೆ. ಆಕರ್ಷಕ ಬಡ್ಡಿ ನೀಡುವ ಆಶೆ ತೋರಿಸಿ, ಶಾರದಾ ಗ್ರೂಪ್ ಜನರಿಂದ 2500 ಕೋಟಿ ರುಪಾಯಿ ಸಂಗ್ರಹ ಮಾಡಿತ್ತು. ಅದನ್ನು ವಾಪಸ್ ಮಾಡಿರಲಿಲ್ಲ. ಜನರ ಹಣವನ್ನು ಹಿಂತಿರುಗಿಸಲಾಗದೆ 2013ರಲ್ಲಿ ಕಂಪನಿಯ ಕಾರ್ಯಾಚರಣೆಯನ್ನೇ ನಿಲ್ಲಿಸಿತ್ತು.

ಅಂದಹಾಗೆ, 2014ರಲ್ಲಿ ಸುಪ್ರೀಂ ಕೋರ್ಟ್ ನಿಂದ ಈ ಹಗರಣವನ್ನು ಸಿಬಿಐಗೆ ವಹಿಸಿದ ಮೇಲೆ ಸಲ್ಲಿಕೆ ಆಗುತ್ತಿರುವ ಆರನೇ ಚಾರ್ಜ್ ಶೀಟ್ ಇದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+