• search
 • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

''ಗೂಂಡಾರಾಜ್ ಬೆಂಬಲಿಸುವ ಪೊಲೀಸರು ಬೂಟು ನೆಕ್ಕಲಿ''

|

ಕೋಲ್ಕತಾ, ನ. 25: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ರಾಜು ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗೂಂಡಾರಾಜ್ ಹತ್ತಿಕ್ಕುವ ಬದಲು ಬೆಂಬಲ ನೀಡುತ್ತಿರುವ ಪೊಲೀಸ್ ಇಲಾಖೆಗೆ ತಕ್ಕಶಾಸ್ತಿ ಮಾಡಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ ಎಂದರು.

ದುರ್ಗಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಜು ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಈ ದಿನಗಳಲ್ಲಿ ಏನೇನು ನಡೆಯುತ್ತಿದೆ ಎಂಬುದು ನೋಡಿ, ರಾಜ್ಯದಲ್ಲೆಡೆ ಗೂಂಡಾರಾಜ್ ಇದ್ದರೂ ಪೊಲೀಸರು ಜನ ಸಾಮಾನ್ಯರಿಗೆ ಯಾವುದೇ ನೆರವು ನೀಡುತ್ತಿಲ್ಲ. ಗೂಂಡಾ ರಾಜ್ ಬೆಂಬಲಿಸುವ ಅಸಮರ್ಥ ಪೊಲೀಸರಿಗೆ ಏನು ಮಾಡಬೇಕು, ನಾವಾದರೆ ಅವರಿಗೆ ಬೂಟು ನೆಕ್ಕುವಂತೆ ಮಾಡುತ್ತೇವೆ. ತಲೆ ತಗ್ಗಿಸಿ ಕರ್ತವ್ಯ ನಿಭಾಯಿಸುವ ಪಾಠ ಕಲಿಸುತ್ತೇವೆ ಎಂದಿದ್ದಾರೆ.

ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದ್ದಂತಾಗಿದೆ. ಪೊಲೀಸ್ ಇಲಾಖೆ ಇದ್ದು ಸತ್ತಹಾಗೆ ವರ್ತಿಸುತ್ತಿದೆ. ಅರಾಜಕತೆ ತಾಂಡವವಾಡುತ್ತಿದೆ. ಕಾನೂನು ಸುವವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಕೂಡಾ ಛಾಟಿ ಬೀಸಿದರು.

   Rohit Sharma ಹಾಗು Ishant Sharma ಟೆಸ್ಟ್ ಸರಣಿಯಿಂದಲೂ ವಾಪಾಸ್ | Oneindia Kannada

   ಬೆಂಗಾಳದ ಉಸ್ತುವಾರಿಯಾಗಿರುವ ವಿಜಯ್ ವರ್ಗಿಯಾ ಅವರು ಮಾತನಾಡಿ, ದೇಶಕ್ಕೆ ಒಂದು ಕಾನೂನು ಅನ್ವಯವಾದರೆ, ಇಲ್ಲಿ ಟಿಎಂಸಿ ಕಾನೂನು ಮಾತ್ರ ಜಾರಿಯಲ್ಲಿದೆ. ಮಹಿಳಾ ಸಿಎಂ ಹೊಂದಿದ್ದರೂ ಮಹಿಳೆಯರಿಗೆ ಯಾವುದೇ ಭದ್ರತೆ ಒದಗಿಸುತ್ತಿಲ್ಲ ಎಂಬುದು ದುರಂತ ಎಂದರು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಮಹಿಳೆಯರ ವಿರುದ್ಧ ದೌರ್ಜನ್ಯದಲ್ಲಿ ಬೆಂಗಾಳ ಮುಂದಿದೆ, ಕಾನೂನು ಮತ್ತು ಸುವ್ಯವಸ್ಥೆ ಬದಲಾಗಬೇಕಾದರೆ, ಸರ್ಕಾರ ಮೊದಲಿಗೆ ಬದಲಾಗಬೇಕು ಎಂದು ಹೇಳಿದರು.

   English summary
   West Bengal BJP leader Raju Banerjee in his attack on the Bengal government said the police force in the state do not extend any help to check the ‘Gunda Raj’ and if BJP comes to power, the party will make the police lick boots.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X