ಬೆಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಶವವಾಗಿ ಪತ್ತೆ, ಆತ್ಮಹತ್ಯೆ ಶಂಕೆ
ಕೋಲ್ಕತಾ, ಮೆ 15: ಬೆಂಗಾಳಿ ನಟಿ ಪಲ್ಲವಿ ಡೇ ಅವರು ಕೋಲ್ಕತ್ತಾದ ಗರ್ಫಾ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಭಾನುವಾರ ಬೆಳಗ್ಗೆ ಆಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.. ಪಲ್ಲವಿ ಅವರ ಸಾವಿಗೆ ಅವರ ಸಹೋದ್ಯೋಗಿಗಳು ಮತ್ತು ಅವರ ಅಭಿಮಾನಿಗಳನ್ನು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಸ್ಥಳೀಯ ಪೊಲೀಸರು ಸ್ಥಳೀಯರ ಹೇಳಿಕೆ ದಾಖಲಿಸಿಕೊಂಡಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆಕೆ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.
'ಮೊನ್ ಮನೆ ನಾ' ಸಿನಿಮಾದಲ್ಲೂ ಕಾಣಿಸಿಕೊಂಡಿದ್ದ ಅನಮಿತ್ರ ಬಟಬ್ಯಾಳ್ ಪ್ರತಿಕ್ರಿಯಿಸಿ,. ಎರಡು ದಿನಗಳ ಹಿಂದೆ ಪಲ್ಲವಿಯ ಶೂಟಿಂಗ್‌ಗೆ ಬಂದಿದ್ದರು. ಈಗ ಇಲ್ಲ ಎಂದರೆ, ನಂಬಲು ಸಾಧ್ಯವಾಗುತ್ತಿಲ್ಲ, ನಿಜಕ್ಕೂ ಇದು ಆಘಾತಕಾರಿ ಸುದ್ದಿ ಎಂದಿದ್ದಾರೆ. ಮೇ 12 ರಂದು, ಟಿವಿ ಶೋ ಚಿತ್ರೀಕರಣದಲ್ಲಿ ಪಲ್ಲವಿ ಜೊತೆ ಅನಮಿತ್ರ ಪಾಲ್ಗೊಂಡಿದ್ದರು.
ಆಕೆ ನನ್ನ ಒಳ್ಳೆಯ ಸ್ನೇಹಿತೆಯಾಗಿದ್ದಳು, ಸರಸ್ವತಿರ್ ಪ್ರೇಮ್ ಅವರ ಮೊದಲ ಟಿವಿ ಸರಣಿ, ಮತ್ತು ಅನಮಿತ್ರ ಜೊತೆ ಮೊದಲ ಬಾರಿಗೆ ನಾಯಕಿಯಾಗಿದ್ದರು. 202ರಲ್ಲಿ ಇದೇ ಸಮಯಕ್ಕೆ ಈ ಸರಣಿ ಆರಂಭವಾಗಿತ್ತು. ಆತ್ಮೀಯರನ್ನು ಭೇಟಿಯಾದ ತಕ್ಷಣ ಆಕೆ ಧಾವಿಸಿ ತಬ್ಬಿಕೊಳ್ಳುತ್ತಿದ್ದಳು. ಎಲ್ಲರ ಅಚ್ಚು ಮೆಚ್ಚಿನ ಹುಡುಗಿಯಾಗಿದ್ದಳು ಎಂದು ಅನಮಿತ್ರ ಸ್ಮರಿಸಿದ್ದಾರೆ.

ಟಿವಿ ಸರಣಿ ರೇಶಮ್ ಜಾನ್ಪಿಯಲ್ಲಿ ನಟಿಸಿದ ನಂತರ ಪಲ್ಲವಿ ಜನಪ್ರಿಯ ಹೆಚ್ಚಾಯಿತು. ಸೀನ್ ಬ್ಯಾನರ್ಜಿ ಮುಖ್ಯ ಭೂಮಿಕೆಯಲ್ಲಿದ್ದ 'ಅಮಿ ಸಿರಾರ್ ಬೇಗಂ' ಎಂಬ ಟಿವಿ ಸರಣಿಯಲ್ಲಿ ಪಲ್ಲವಿ ಪಾತ್ರವಹಿಸಿದ್ದರು. ಐತಿಹಾಸಿಕ ಕಥಾನಕದಲ್ಲಿ ಕೆಲ ಎಪಿಸೋಡು ಕಾಣಿಸಿಕೊಂಡರೂ ಸೀನ್ ಹಾಗೂ ಪಲ್ಲವಿ ಜೋಡಿ ಜನಪ್ರಿಯ ಗಳಿಸಿತ್ತು. ನಟಿ ಪ್ರಸ್ತುತ 'ಮೊನ್ ಮನೆ ನಾ' ಕಾರ್ಯಕ್ರಮದಲ್ಲಿ ಪ್ರಧಾನ ಭೂಮಿಕೆಯಲ್ಲಿ ಆಕೆ ನಟಿಸುತ್ತಿದ್ದರು, ಇದರಲ್ಲಿ ಸಾಮ್ ಭಟ್ಟಾಚಾರ್ಯ ಮತ್ತು ಅಂಜನಾ ನೆಗಟಿವ್ ಪಾತ್ರದಲ್ಲಿ ನಟಿಸಿದ್ದಾರೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications