ಕೊವಿಡ್ ವಾರಿಯರ್ಸ್‌ಗೆ 10 ಲಕ್ಷ ಆರೋಗ್ಯ ವಿಮೆ ಘೋಷಿಸಿದ ದೀದಿ

ಕೊಲ್ಕತ್ತಾ, ಮೇ 3: ಕೊರೊನಾ ವೈರಸ್‌ ತಡೆಗಟ್ಟುವ ಉದ್ದೇಶದಿಂದ ಕೆಲಸ ಮಾಡುತ್ತಿರುವ ಕೊವಿಡ್ ವಾರಿಯರ್ಸ್‌ಗೆ ಪಶ್ಚಿಮ ಬಂಗಾಳ ಸರ್ಕಾರ 10 ಲಕ್ಷ ರೂಪಾಯಿವರೆಗೂ ಆರೋಗ್ಯ ವಿಮೆ ಘೋಷಿಸಿದೆ.

''ಕೊರೊನಾ ವಾರಿಯರ್‌ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 10 ಲಕ್ಷವರೆಗೂ ಆರೋಗ್ಯ ವಿಮೆ ನೀಡಲು ನಮ್ಮ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ'' ಎಂದು ಭಾನುವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ವಿಶೇಷ ಅಂದ್ರೆ ಈ ಯೋಜನೆಯಲ್ಲಿ ಪತ್ರಕರ್ತರು ಒಳಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Bangla Govt Announced 10 Lakh Health insurance For COVID 19 Workers

''ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಅದರ ಕರ್ತವ್ಯಗಳನ್ನು ನಿರ್ಭಯವಾಗಿ ನಿರ್ವಹಿಸಬೇಕು. ಸಮಾಜಕ್ಕೆ ಪತ್ರಕರ್ತರು ನೀಡಿದ ಕೊಡುಗೆಯನ್ನು ನಾವು ಗೌರವಿಸುತ್ತೇವೆ. ನಮ್ಮ ಸರ್ಕಾರ ಬಾಂಗ್ಲಾ ಪತ್ರಕರ್ತರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ಹೊಂದಿದೆ'' ಪತ್ರಿಕಾ ಸ್ವಾತಂತ್ರ್ಯ ದಿನದ ವಿಶೇಷವಾಗಿ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳ ಈವರೆಗೂ 922 ಸೋಂಕಿತರನ್ನು ಹೊಂದಿದೆ. ಅದರಲ್ಲಿ 723 ಪ್ರಕರಣಗಳು ಸಕ್ರಿಯವಾಗಿದೆ. 151 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 48 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+