• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಬಂಗಾಳ; ಎರಡನೇ ಹಂತದ ಚುನಾವಣೆಗೆ ಮುನ್ನ ಮತ್ತೆ ಸ್ಫೋಟಕ ಪತ್ತೆ

|

ಕೋಲ್ಕತ್ತಾ, ಮಾರ್ಚ್ 29: ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆಗೆ ಕೆಲವೇ ದಿನಗಳಿರುವಾಗ ಮತ್ತೆ ಸೋಮವಾರ ನರೇಂದ್ರಪುರದಲ್ಲಿ 56 ಕಚ್ಚಾ ಸ್ಫೋಟಕಗಳು ಪತ್ತೆಯಾಗಿವೆ. ಎಲ್ಲಾ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿರುವುದಾಗಿ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ದಿನ ಕಚ್ಚಾ ಬಾಂಬ್ ‌ಗಳು ಪತ್ತೆಯಾಗಿವೆ. ಕಾಂತಿಪೊಟಾ, ಖೀದಾಹದಲ್ಲಿ ಸೋಮವಾರ ನರೇಂದ್ರಪುರ ಪೊಲೀಸರ ತಂಡ ಬಿದಿರು ಮೆಳೆಗಳ ನಡುವೆ ಇಟ್ಟಿದ್ದ ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಾಂಬ್‌ಗಳ ಉತ್ಪಾದನೆ, ಸಾಗಣೆ ಹಾಗೂ ಅಕ್ರಮ ಬಳಕೆಗೆ ಸಂಬಂಧಿಸಿದಂತೆ ಕೆಲವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚುನಾವಣೆಯ ಹಿಂದಿನ ದಿನ ಟಿಎಂಸಿ ಕಚೇರಿಯಲ್ಲಿ ಸ್ಫೋಟ: ಮೂವರಿಗೆ ಗಾಯ

ಚುನಾವಣೆಗೆ ಮುನ್ನಾ ದಿನ, ಅಂದರೆ ಶುಕ್ರವಾರ 22 ಕಚ್ಚಾ ಬಾಂಬ್‌ಗಳು ದೊರೆತಿದ್ದವು. ಬಂಕುರಾದ ಟಿಎಂಸಿ ಕಚೇರಿಯಲ್ಲಿ ಸ್ಫೋಟ ಸಂಭವಿಸಿ ಮೂವರು ಗಾಯಗೊಂಡಿದ್ದರು. ಶನಿವಾರ 26 ಬಾಂಬ್‌ಗಳು ಪತ್ತೆಯಾಗಿದ್ದು, ಇಂದು 56 ಬಾಂಬ್‌ಗಳು ಸಿಕ್ಕಿವೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ.

ರಾಜ್ಯದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ ನಡೆದಿದೆ. ಮೊದಲ ಹಂತದಲ್ಲಿ ಶೇ.84.13ರಷ್ಟು ಮತದಾನ ನಡೆದಿದೆ. ಏಪ್ರಿಲ್ 29ರವರೆಗೆ ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಚುನಾವಣೆಗೆ ಮುನ್ನವೇ ರಾಜ್ಯದಲ್ಲಿ ಅಹಿತಕರ ಘಟನೆಗಳು ವರದಿಯಾಗುತ್ತಿದ್ದು, ಚುನಾವಣಾ ಆಯೋಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ವಹಿಸಿದೆ. ಇದಾಗ್ಯೂ ಅಲ್ಲಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.

English summary
Days ahead of the second phase of election, 56 live crude bombs have been recovered from West Bengal's Narendrapur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X