ಮತದಾರರ ಬಗ್ಗೆ ಕೋಲಾರದಲ್ಲಿ ಎಂಟಿಬಿ ನೋವಿನ ನುಡಿ...

ಕೋಲಾರ, ಜನವರಿ 19: "ರಾಜಕೀಯ ಅನ್ನೋದು ಕಲಗಚ್ಚು ಆಗೋಗಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಮಹಾನ್ ಭ್ರಷ್ಟರು ಎಂದು ಹೇಳುತ್ತೇವೆ. ಆದರೆ ಈಗ ಮತದಾರರೂ ಭ್ರಷ್ಟರಾಗಿದ್ದಾರೆ. ಈ ಮಾತನ್ನು ನನ್ನ ಆತ್ಮಸಾಕ್ಷಿಯಿಂದ, ಬಹಳ ನೋವಿನಿಂದ ಹೇಳುತ್ತಿದ್ದೇನೆ" ಎಂದು ಕೋಲಾರದ ಮಾಲೂರಿನಲ್ಲಿ ನೋವಿನಿಂದ ಮಾತನಾಡಿದ್ದಾರೆ ಎಂಟಿಬಿ ನಾಗರಾಜ್.

"ನನ್ನ 40 ವರ್ಷದ ರಾಜಕಾರಣದಲ್ಲಿ ಸಾಕಷ್ಟು ಮಂತ್ರಿಗಳು, ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಈ ಸಮಾಜ ಭ್ರಷ್ಟಾಚಾರದಲ್ಲಿ ತುಂಬಿದೆ. ಅದ್ಯಾವ ದೇವರು ಯಾವ ರೀತಿ ಸುಧಾರಣೆ ಮಾಡುತ್ತಾನೆ ಎಂದು ನಾನು ಚಿಂತನೆ ಮಾಡುತ್ತಿದ್ದೇನೆ" ಎಂದು ಬೇಸರಗೊಂಡರು.

"ಮತದಾರರು ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಸ್ವಲ್ಪ ಕೊಟ್ಟವನಿಗೆ ಒಂದು ವೋಟು, ಹೆಚ್ಚು ಹಣ ಕೊಟ್ಟವನಿಗೆ ಒಂದು ವೋಟ್ ಕೊಟ್ಟಿದ್ದಾರೆ. ಹಾಗೆ ನೋಡಿದರೆ ಚುನಾವಣೆಯಲ್ಲಿ ಇನ್ನುಳಿದ ಇಬ್ಬರು ಅಭ್ಯರ್ಥಿಗಳಿಗಿಂತ ಹೆಚ್ಚು ನಾನು ಖರ್ಚು ಮಾಡಿದ್ದೇನೆ. ಆದರೆ ನನ್ನನ್ನು ಸೋಲಿಸಿದ್ರು, ಇನ್ನೊಂದು ಚುನಾವಣೆಯಲ್ಲಿ ಬೇಕಾದರೆ ಸೋಲಿಸಲಿ ಪರವಾಗಿಲ್ಲ" ಎಂದು ಹೇಳಿದ್ದಾರೆ.

Voters Are Becoming Corrupt Said Mtb Nagaraj In Maluru

"ನಾನು ಸರಿಯಾಗಿ ತೆರಿಗೆ ಕಟ್ಟಿದ್ದರೂ ನನ್ನ ಮೇಲೆ ಮೂರು ಬಾರಿ ರೈಡ್ ಮಾಡಿದ್ದಾರೆ. ಸ್ವಿಸ್ ಬ್ಯಾಂಕಿನಲ್ಲಿ ಬಡವರು ಹಣ ಇಟ್ಟಿಲ್ಲ, ರಾಜಕಾರಣಿಗಳು ಅಧಿಕಾರಿಗಳು ಹಣ ಇಟ್ಟಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಆಗುವವರೆಗೂ ಬಡವರು ಬಡವರಾಗಿಯೇ ಉಳಿಯುತ್ತಾರೆ, ಶ್ರೀಮಂತರು ಶ್ರೀಮಂತರಾಗಿ ಇರುತ್ತಾರೆ" ಎಂದು ನೋವಿನಿಂದ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+