ನರಸಾಪುರ ಐಫೋನ್ ಕಾರ್ಖಾನೆ ಧ್ವಂಸ: 'ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ'

ಕೋಲಾರ, ಡಿ 12: ಜಿಲ್ಲೆಯ ನರಸಾಪುರ ಬಳಿಯಿರುವ ವಿಸ್ಟ್ರಾನ್ ಐಫೋನ್ ತಯಾರಿಕಾ ಘಟಕದಲ್ಲಿ ನಡೆದ ದಾಂಧಲೆಯನ್ನು ಮಾಲೂರು ಕೆಐಎಡಿಬಿ ಪ್ರದೇಶ ಕೈಗಾರಿಕಾ ಸಂಘ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘದ ಅಧ್ಯಕ್ಷರಾದ ಶ್ರೀಪ್ರಕಾಶ, ಸರಕಾರ ಕೂಡಲೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ಈ ರೀತಿಯಿದೆ, "ಐ ಪೋನ್‍ಗಳನ್ನು ತಯಾರಿಸುವ ನೂತನ ವಿಸ್ಟ್ರಾನ್ ಕಾರ್ಖಾನೆಯ ಪ್ರಬುದ್ಧ ಕಾರ್ಮಿಕರು ಇಂದು ಮುಂಜಾನೆ ನಡೆಸಿರುವ ದಾಂಧಲೆ ಹಾಗೂ ಆಸ್ತಿಪಾಸ್ತಿಯ ನಾಶ ನಿಜಕ್ಕೂ ಅತ್ಯಂತ ಖಂಡನೀಯ. ತಮ್ಮ ಯಾವುದೇ ಕುಂದುಕೂರತೆಗಳ ಪರಿಹಾರಕ್ಕೆ ಆಡಳಿತ ವರ್ಗದೂಡನೆ ಸಂಧಾನ, ಸರ್ಕಾರ ಅಥವಾ ನ್ಯಾಯಾಲಗಳ ಮೂರೆ ಹೂಗುವ ಮಾರ್ಗಗಳನ್ನು ಅನುಸರಿಸುವುದನ್ನು ಬಿಟ್ಟು, ಕಾನೂನನ್ನು ತಮ್ಮ ಕೈಗೇ ತೆಗೆದುಕೂಂಡು ಹಿಂಸಾಚಾರಕ್ಕೆ ಇಳಿದಿರುವುದು ಬಹಳ ವಿಷಾದಕರ".

ಈಗಾಗಲೆ ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೃಹತ್ ಉದ್ಯಮ/ಉದ್ಯಮಿಗಳನ್ನು ಆಕರ್ಷಿಸಲು ಹಲವಾರು ಯೋಜನೆ ಮತ್ತು ಕಾರ್ಯಕ್ರಮಗಳನ್ನು ಹಾಕಿ, ಶ್ರಮ ಪಡುತ್ತಿರುವಾಗ, ಇಂತಹ ಘಟನೆಗಳು ನಮ್ಮ ಜಿಲ್ಲೆಯೇ ಏಕೆ, ರಾಷ್ಟದ ಕೈಗಾರಿಕಾ ನಕ್ಷೆಯಲ್ಲಿ ನಿಜಕ್ಕೂ ಒಂದು ದೂಡ್ಡ ಕಪ್ಪು ಚುಕ್ಕೆಯಾಗಲಿದೆ.

Violence At IPhone Production Plant At Narasapura Near Kolar: Malur KIADB Press Release

ವಿದೇಶಿ ಬಂಡವಾಳ ಹರಿದು ಬರಲು ಸರ್ಕಾರಗಳು ಮಾಡುತ್ತಿರುವ ಪ್ರಯತ್ನಕ್ಕೆ ಇದು ಕೂಡಲಿಪೆಟ್ಟು ಆಗಬಹುದು. ಆತ್ಮನಿರ್ಭರ ಭಾರತದ ಕನಸು ನೂಚ್ಚುನೂರಾಗುವ ಸಾಧ್ಯತೆಯೇ ಹೆಚ್ಚು.

ಕೈಗಾರಿಕಾ ವಲಯ ಕೋವಿಡ್-19ರಿಂದಾಗಿ ತೀವ್ರ ಆರ್ಥಿಕ ಸಂಕಷ್ಟ, ನಿರುದ್ಯೋಗದ ಹೆಚ್ಚಳ, ಮುಂತಾದ ಬಿಕ್ಕಟ್ಟಿನಿಂದ ಹೂರಬರಲು ಅತೀವ ಶ್ರಮಪಡುತ್ತಿರುವ ಈ ಕಾಲಘಟ್ಟದಲ್ಲಿ ಹಿಂಸಾಚಾರ, ಆಸ್ತಿಪಾಸ್ತಿನಾಶ, ಸಾರ್ವಜನಿಕರಿಗೆ ತೂಂದರೆ ಉಂಟುಮಾಡುವುದು ನಾಚಿಕೆಗೇಡಿನ ಸಂಗತಿ.

ಅದರಲ್ಲೂ ಪ್ರಬುದ್ಧರು ಇಂತಹ ಕೃತ್ಯದಲ್ಲಿ ತೂಡಗಿಸಿಕೂಳ್ಳುವುದು ಅತ್ಯಂತ ಖೇದನೀಯ. ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೂಂಡಂತೆ. ಸರ್ಕಾರ ಈ ಕೂಡಲೇ ಈ ಘಟನೆಯ ಸಂಪೂರ್ಣ ಹಾಗೂ ನಿಷ್ಪಕ್ಷವಾದ ತನಿಖೆ ನಡೆಸಬೇಕು. ಯಾರೆಲ್ಲಾ ಇದರಲ್ಲಿ ಷಾಮೀಲಾಗಿದ್ದಾರೆ ಅವರೆಲ್ಲರಿಗೂ ಕಠಿಣ ಶಿಕ್ಷೆಯಾಗುವಂತೆ ನೋಡಿಕೂಳ್ಳಬೇಕು.

ಕೈಗಾರಿಕೋದ್ಯಮಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಹಾಗಾದಲ್ಲಿ ಮಾತ್ರ ಈ ದುರದೃಷ್ಠಕರ ಘಟನಾವಳಿಯಿಂದ ಉಂಟಾಗಿರುವ ಕಳಂಕ ದೂರವಾದೀತು ಹಾಗೂ ನಿರ್ಭಯ ಕೈಗಾರಿಕೋದ್ಯಮದ ವಾತಾವರಣ ನೆಲೆ ನಿಲ್ಲಲು ಸಾಧ್ಯ. ಇಲ್ಲದೇ ಹೋದರೆ ಕೈಗಾರಿಕಾ ಬೆಳವಣಿಗೆ ಕುಂಟಿತವಾಗುವುದರ ಜೂತೆಗೆ, ನಿರುದ್ಯೋಗ ರುದ್ರತಾಂಡವವಾಡಲಿದೆ.

"ಮಾನ್ಯ ಪ್ರಧಾನ ಮಂತ್ರಿಗಳ "ಆತ್ಮನಿರ್ಭರ ಭಾರತ"ದ ಕರೆ ಬರೀ ಘೋಷಣೆಯಾಗೇ ಉಳಿಯಲಿದೆ. ಇದೂಂದು ನಮ್ಮ ಅಧಿಕಾರ ವರ್ಗಕ್ಕೆ ಎಚ್ಚರಿಕೆಯ ಘಂಟೆಯಾಗಲಿ"ಎಂದು ಮಾಲೂರು ಕೆಐಎಡಿಬಿ ಪ್ರದೇಶ ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀಪ್ರಕಾಶ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+