• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಕೋಲಾರದಲ್ಲಿ ಮಾನಸಿಕ ಅಸ್ವಸ್ಥನಿಗೆ ಅನ್ನ ಕೊಟ್ಟ ಪೊಲೀಸ್

|

ಕೋಲಾರ, ಮಾರ್ಚ್ 24: ಮಾನಸಿಕ ಅಸ್ವಸ್ಥನಿಗೆ ಅನ್ನ ಕೊಡುವ ಮೂಲಕ ಪೊಲೀಸರು ಮಾನವೀಯತೆ‌ ಮೆರೆದ ಘಟನೆ ಕೋಲಾರ ನಗರದ ಟಮಕ ಬಳಿ‌ ನಡೆದಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೋಲಾರ ನಗರದಲ್ಲಿ ‌ಕರ್ಫ್ಯೂ ಇದ್ದಿದ್ದರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅದರ ನಡುವೆಯೂ ಮಾನಸಿಕ ಅಸ್ವಸ್ಥನಿಗೆ ಆಹಾರ ನೀಡಿ ಪೊಲೀಸರು ಮಾನವೀಯತೆ ಮೆರೆದಿದ್ದು, ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ.

ತಿನ್ನಲು ‌ಅನ್ನ ನೀರಿಲ್ಲದೆ ಪರದಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಎಎಸ್ಐ ನಾಗರಾಜ್, ಅನ್ನ ನೀರು ನೀಡಿದರು. ಮುಂಜಾನೆಯಿಂದ ಲಾಕ್ ಡೌನ್ ನಿಯಮ ಮೀರಿ ರಸ್ತೆಯಲ್ಲಿ ‌ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು.

ಲಾಠಿ ಹಿಡಿದ ಪೊಲೀಸರನ್ನು ನೋಡಿದವರಿಗೆ ಈ ದೃಶ್ಯ ಪೊಲೀಸರ ಮತ್ತೊಂದು ಮುಖ ದರ್ಶನ ಮಾಡಿಸಿದ್ದು, ಪೊಲೀಸರಲ್ಲೂ ಮಾನವೀಯ ಹೃದಯ ಪ್ರದರ್ಶನವಾಗಿದೆ.

English summary
The humanity of the police is feeding the mentally ill and the video is viral everywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X