ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಲೂರಿನಲ್ಲಿ ಎಂಟು ದೇಸಿ ಗೋ ತಳಿಗಳ ವಿಶೇಷ ಆಶ್ರಮ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಫೆಬ್ರವರಿ 13 : ನಶಿಸಿ ಹೋಗುತ್ತಿರುವ ದೇಸಿ ಗೋ ತಳಿಗಳನ್ನು ಸಂರಕ್ಷಣೆ ಮಾಡುತ್ತಿರುವ ಆಶ್ರಮ, ಆ ಆಶ್ರಮದಲ್ಲಿ ವಿವಿಧ ದೇಸಿ ಗೋ ತಳಿಗಳು ಆಶ್ರಯ ಪಡೆದಿವೆ. ಇದೇ ಗೋವುಗಳಿಂದ ತಯಾರಾಗುವ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆ, ಇಷ್ಟಕ್ಕೂ ಯಾವುದು ಆ ಆಶ್ರಮ, ಯಾವು ಆ ದೇಸಿ ಗೋ ತಳಿಗಳು ಅನ್ನೋದಕ್ಕೆ ಈ ವರದಿ ಓದಿ...

ಹೀಗೆ ಸುಂದರ ಪ್ರಕೃತಿಯಲ್ಲಿ ಮೇವನ್ನು ಸವಿಯುತ್ತಾ, ವಿವಿಧ ರೀತಿಯ ದೇಸಿ ಕಾಮಧೇನುಗಳು. ಇನ್ನೊಂದೆಡೆ ಇದೇ ಕಾಮಧೇನುಗಳ ತ್ಯಾಜ್ಯದಿಂದ ದೇಸಿ ಉತ್ಪನ್ನಗಳು ತಯಾರಾಗುತ್ತವೆ. ಇವೆಲ್ಲಾ ಕಂಡುಬರುವುದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಯಶವಂತಪುರ ಗ್ರಾಮದ ಬಳಿ.

ಸೂಕ್ಷ್ಮಕಲೆಯಲ್ಲಿ ಗಿನ್ನಿಸ್ ದಾಖಲೆ; ಇದು ಕೋಲಾರದ ಪ್ರತಿಭೆಯ ಅಸಾಧಾರಣ ಕಲೆಸೂಕ್ಷ್ಮಕಲೆಯಲ್ಲಿ ಗಿನ್ನಿಸ್ ದಾಖಲೆ; ಇದು ಕೋಲಾರದ ಪ್ರತಿಭೆಯ ಅಸಾಧಾರಣ ಕಲೆ

ಹೌದು. ದೇಸಿ ತಳಿಗಳನ್ನು ಸಂರಕ್ಷಿಸಿ ಪೋಷಿಸುವ ನಿಟ್ಟಿನಲ್ಲಿ ರಾಮಚಂದ್ರಪುರ ಆಶ್ರಮದ ರಾಘವೇಶ್ವರ ಭಾರತೀ ಸ್ವಾಮಿಗಳು ದೇಸಿ ಗೋವುಗಳ ಸಾಕಾಣಿಕೆಗಾಗಿ ಆಶ್ರಮವೊಂದನ್ನು ನಿರ್ಮಿಸಿ, ವಿವಿಧ ತಳಿಯ ದೇಸಿ ಗೋವುಗಳನ್ನ ಸಾಕಲಾಗುತ್ತಿದೆ.

ತಿರುಪತಿ ತಿಮ್ಮಪ್ಪನ ಅಭಿಷೇಕಕ್ಕೆ ಇಲ್ಲಿನ ಹಾಲು ಬಳಕೆ

ತಿರುಪತಿ ತಿಮ್ಮಪ್ಪನ ಅಭಿಷೇಕಕ್ಕೆ ಇಲ್ಲಿನ ಹಾಲು ಬಳಕೆ

ಇವುಗಳಲ್ಲಿ ಮಲೆನಾಡ ಗಿಡ್ಡ ಎಂಬ ದೇಸಿ ತಳಿ ಪ್ರಮುಖವಾಗಿದ್ದು, ಮಲೆನಾಡು ಗಿಡ್ಡದ ಹಾಲನ್ನು ತಿರುಪತಿ ತಿಮ್ಮಪ್ಪನ ಅಭಿಷೇಕಕ್ಕೆ ಬಳಸುವುದರಿಂದ ಇಲ್ಲಿ ಸಾಕಲಾಗಿದ್ದ ಎರಡು ಮಲೆನಾಡ ಗಿಡ್ಡ ಗೋವುಗಳನ್ನು ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲಿ ಬಿಡಲಾಗಿದೆ.

ಇನ್ನು ದೇಶದಾದ್ಯಂತ ಸುಮಾರು 150 ದೇಸಿ ತಳಿಗಳಲ್ಲಿ 37 ದೇಸಿ ತಳಿಗಳು ಬದುಕುಳಿದಿದ್ದು, ಅವುಗಳಲ್ಲಿ ಎಂಟು ತಳಿಗಳನ್ನು ಈ ಆಶ್ರಮದಲ್ಲಿ ಸಂರಕ್ಷಣೆ ಮಾಡಲಾಗುತ್ತಿದೆ.

ನಶಿಸಿ ಹೋಗುತ್ತಿರುವ ದೇಸಿ ತಳಿಗಳ ಸಂರಕ್ಷಣೆ

ನಶಿಸಿ ಹೋಗುತ್ತಿರುವ ದೇಸಿ ತಳಿಗಳ ಸಂರಕ್ಷಣೆ

ಇನ್ನು ಮಿಲ್ಕ್ ಸಿಟಿ ಎಂದೇ ಹೆಸರಾಗಿರುವ ಕೋಲಾರ ಜಿಲ್ಲೆಯಲ್ಲಿ ಬಹುತೇಕ ಹೆಚ್ಚು ಹೈಬ್ರೀಡ್ ಹಸುಗಳನ್ನು ಸಾಕಾಣಿಕೆ ಮಾಡುತ್ತಾರೆ. ಕಾರಣ ಹೆಚ್ಚಿನ ಹಾಲು ಉತ್ಪಾದನೆಗಾಗಿ, ಆದರೆ ಈ ಆಶ್ರಮದಲ್ಲಿ ಮಾತ್ರ ಬರೀ ದೇಸಿ ಗೋವುಗಳನ್ನಷ್ಟೇ ಸಾಕಾಣಿಕೆ ಮಾಡುತ್ತಾರೆ.

ದೇಶದಲ್ಲಿ ನಶಿಸಿ ಹೋಗುತ್ತಿರುವ ದೇಶಿ ಗೋ ತಳಿಗಳನ್ನು ಸಂರಕ್ಷಣೆ ಮಾಡಲು ರಾಮಚಂದ್ರ ಆಶ್ರಮ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲೂ ದೇಶದ ಎಲ್ಲ ತಳಿಗಳ ಜೊತೆಗೆ ರಾಜ್ಯದ ತಳಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪೋಷಿಸಲು ಉದ್ದೇಶಿಸಿದೆ.

ಕೋಲಾರ ವಕೀಲ ಶಿವಣ್ಣನ ಕೈಹಿಡಿಯಿತು ಈ ಸಾವಯವ ಕೃಷಿಕೋಲಾರ ವಕೀಲ ಶಿವಣ್ಣನ ಕೈಹಿಡಿಯಿತು ಈ ಸಾವಯವ ಕೃಷಿ

ಗೋ ಮೂತ್ರದಲ್ಲಿ ಔಷಧಿ ಉತ್ಪನ್ನ ತಯಾರಿಕೆ

ಗೋ ಮೂತ್ರದಲ್ಲಿ ಔಷಧಿ ಉತ್ಪನ್ನ ತಯಾರಿಕೆ

ಇನ್ನು ಗೋ ಸಾಕಾಣಿಕೆಗಾಗಿ ಹತ್ತು ಎಕರೆ ಜಾಗವನ್ನು ಮೀಸಲಿಟ್ಟಿದ್ದು ಅಲ್ಲೇ ಅವುಗಳಿಗೆ ಆಹಾರವನ್ನು ಬೆಳೆಯಲಾಗುತ್ತದೆ. ಇಲ್ಲಿ ಗೋವುಗಳ ತ್ಯಾಜ್ಯವನ್ನು ಸಂಸ್ಕರಣೆ ಮಾಡಿ, ರಾಸಾಯನ ಮುಕ್ತ ಔಷಧಿಗಳನ್ನು ತಯಾರಿಸಲಾಗುತ್ತಿದ್ದು, ಗೋ ಮೂತ್ರ ಉತ್ಪನ್ನಗಳಿಗೆ ರಾಜ್ಯ ಹೊರರಾಜ್ಯಗಳಿಂದ ಎಲ್ಲಿಲ್ಲದ ಬೇಡಿಕೆ ಇದೆ.

ಕ್ಯಾನ್ಸರ್, ಚರ್ಮ ರೋಗ, ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಇಲ್ಲಿ ತಯಾರು ಮಾಡುವ ಗೋ ಮೂತ್ರದ ಉತ್ಪನ್ನಗಳು ರಾಮಬಾಣವಾಗಿವೆ. ಜೊತೆಗೆ ಇಲ್ಲಿ ಮಲೆನಾಡ ಗಿಡ್ಡ ತಳಿಯ ಸಂಶೋಧನಾ ಕೇಂದ್ರವನ್ನು ಆರಂಭವಾಗಿದ್ದು, ಮುಂದೆ ಮತ್ತಷ್ಟು ಗೋ ತಳಿಗಳ ಬಗ್ಗೆ ಸಂಶೋಧನೆಗಳು ನಡೆಯಲಿದೆ.

ಅಮವಾಸ್ಯೆ ದಿನ ಭಕ್ತರಿಂದ ಗೋ ಪೂಜೆ

ಅಮವಾಸ್ಯೆ ದಿನ ಭಕ್ತರಿಂದ ಗೋ ಪೂಜೆ

ಅಲ್ಲದೆ ಪ್ರತಿ ಅಮಾವಾಸ್ಯೆ ದಿನ ಇಲ್ಲಿಗೆ ಸಾವಿರಾರು ಭಕ್ತರು ಬಂದು ಈ ದೇಸಿ ಗೋವುಗಳಿಗೆ ಪೂಜೆ ಮಾಡಿ ಹೋಗುತ್ತಾರೆ, ದೇಸಿ ಗೋವುಗಳಿಗೆ ಪೂಜೆ ಸಲ್ಲಿಸುವುದರಿಂದ ಸಂಕಷ್ಟಗಳು ದೂರವಾಗುತ್ತವೆ ಎನ್ನುವ ಪ್ರತೀತಿಯೂ ಸಹ ಇಲ್ಲಿದೆ.

ಒಟ್ಟಾರೆ ಕಣ್ಮರೆಯಾಗುತ್ತಿರುವ ದೇಶಿ ತಳಿಗಳನ್ನು ಸಂರಕ್ಷಿಸಿ, ಉಳಿಸುವ ಜೊತೆಗೆ ಇಂಗ್ಲೀಷ್ ಔಷಧಿಗಳಿಗೆ ಸೆಡ್ಡು ಹೊಡೆದು ಗೋ ಮೂತ್ರದಿಂದ ವಿವಿಧ ಉತ್ಪನ್ನಗಳನ್ನು ತಯಾರು ಮಾಡುವುದರ ಜೊತೆಗೆ ಸನಾತನ ಸಂಸ್ಕೃತಿಯನ್ನು ಮತ್ತೊಮ್ಮೆ ದೇಶದಲ್ಲಿ ಪರಿಚಯಿಸಲು ಆಶ್ರಮ ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

English summary
Raghaveshwara Bharathi swamiji of Ramachandrapura Ashrama, Built Desi Cow Breeding near Yaswantpur village of Malur taluk in Kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X