ಅಸ್ಸಾಂ ಉಗ್ರರ ದಾಳಿಯಲ್ಲಿ ಕೋಲಾರದ ಯೋಧ ಹುತಾತ್ಮ

Posted By:
Subscribe to Oneindia Kannada

ಕೋಲಾರ, ಆಗಸ್ಟ್ 06 : ಅಸ್ಸಾಂನಲ್ಲಿ ಶುಕ್ರವಾರ ಸಂಜೆ ನಡೆದ ಉಗ್ರರ ದಾಳಿಯಲ್ಲಿ ಕೋಲಾರ ಮೂಲದ ಯೋಧ ರಾಜೇಶ್ ಹುತಾತ್ಮರಾಗಿದ್ದಾರೆ. ಉಗ್ರರದಾಳಿಯಲ್ಲಿ 15 ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದರು.

ಕೋಲಾರ ತಾಲೂಕಿನ ಕಿತ್ತಂಡೂರು ಗ್ರಾಮದ ರಾಮಯ್ಯ ಮತ್ತು ರಾಮಕ್ಕ ದಂಪತಿಗಳ ತೃತೀಯ ಪುತ್ರ ರಾಜೇಶ್ ಹುತಾತ್ಮರಾದ ಯೋಧ. ಕಳೆದ ಮೂರು ವರ್ಷಗಳಿಂದ ರಾಜೇಶ್ ಅವರು ಗಡಿ ಭದ್ರತಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.[ಅಸ್ಸಾಮಿನಲ್ಲಿ ಉಗ್ರರ ಅಟ್ಟಹಾಸ, 15 ಸಾವು]

rajesh

ರಾಜೇಶ್ ಅವರು ಹುತಾತ್ಮರಾದ ಬಗ್ಗೆ ಕುಟುಂಬದವರಿಗೆ ಈಗಾಗಲೇ ಮಾಹಿತಿ ರವಾನೆಯಾಗಿದೆ. ಶನಿವಾರ ರಾತ್ರಿಯ ವೇಳೆಗೆ ಅವರ ಪಾರ್ಥೀವ ಶರೀರ ಕೋಲಾರಕ್ಕೆ ಆಗಮಿಸಲಿದ್ದು, ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.[ಸ್ವತಂತ್ರ ದಿನಾಚರಣೆ ದಿನ ಮೋದಿ ಜೀವಕ್ಕೆ ಕಂಟಕ]

ಅಸ್ಸಾಂನ ಕೊಕ್ರಜಾರಿನ ಮಾರುಕಟ್ಟೆ ಮೇಲೆ ಶುಕ್ರವಾರ ಸಂಜೆ ಉಗ್ರರ ದಾಳಿ ನಡೆದಿತ್ತು. ಮಾರುಕಟ್ಟೆ ಮೇಲೆ ಗ್ರೆನೇಡ್‌ಗಳನ್ನು ಎಸೆದ ಉಗ್ರರು, ಗುಂಡಿನ ದಾಳಿಯನ್ನು ನಡೆಸಿದ್ದರು. ಈ ದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದರು. ಒಬ್ಬ ಉಗ್ರನ್ನು ಯೋಧರು ಕೊಂದು ಹಾಕಿದ್ದರು. 20 ಜನರು ಗಾಯಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Karnataka soldier was one among those killed in the terror attack in Kokrajhar, Assam on August 5, 2016. The body of Rajesh (24) resident of Kittonduru taluk of Kolar district.
Please Wait while comments are loading...