ನಾನು ಒಕ್ಕಲಿಗರ ವಿರೋಧಿ ಎಂದು ಸುಳ್ಳು ಆರೋಪ: ಕೋಲಾರ ಸಂಸದ
ಕೋಲಾರ, ಜೂನ್ 10: ಒಕ್ಕಲಿಗ ಸಮಾಜಕ್ಕೆ ನಾನು ಶತ್ರು ಅಲ್ಲ, ಬಿಜೆಪಿ ಜಿಲ್ಲಾ ಅಧ್ಯಕ್ಷರನ್ನಾಗಿ ಒಕ್ಕಲಿಗ ಸಮುದಾಯದವರನ್ನು ಮಾಡಲು ಫೈಟ್ ಮಾಡಿದವನು ನಾನೇ, ನಾನು ಒಕ್ಕಲಿಗರ ವಿರೊಧಿಯಲ್ಲ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಹೇಳಿದರು.
Recommended Video
ಒಕ್ಕಲಿಗರು ನನಗೆ ವೋಟ್ ಗಳನ್ನು ಹಾಕಿಲ್ಲ ಎಂದು ಒಕ್ಕಲಿಗ ಮುಖಂಡರ ವಿರುದ್ಧ ಸಂಸದ ಎಸ್.ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ಸ್ಥಳೀಯ ಪತ್ರಿಕೆಯಲ್ಲಿ ವರದಿ ಪ್ರಸಾರದ ಹಿನ್ನೆಲೆಯಲ್ಲಿ, ಸಂಸದ ಎಸ್.ಮುನಿಸ್ವಾಮಿ ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನನ್ನ ವೈಯಕ್ತಿಕ ತೇಜೋವಧೆಗಾಗಿ ಕೆಲ ಕಿಡಿಗೇಡಿಗಳು ನನ್ನ ವಿರುದ್ಧ ಜಾತಿ ನಿಂದನೆಯ ಆರೋಪ ಮಾಡಿದ್ದಾರೆ, ಕಳೆದ ಒಂದು ವರ್ಷದಿಂದ ನಾನು ಯಾವುದೇ ರೀತಿಯ ಜಾತಿ, ಧರ್ಮದ ಬಗ್ಗೆ ನಾನು ಮಾತನಾಡಿಲ್ಲ, ಕೋಲಾರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಚುನಾವಣೆಯಲ್ಲಿ ಗೆದ್ದಾಗನಿಂದಲೂ ಹಗಲು-ರಾತ್ರಿ ಮನೆ ಮಗನಾಗಿ ದುಡಿಯುತ್ತಿದ್ದು, ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇನೆ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲವೆಂದರು.
ಬಿಜೆಪಿ ಒಕ್ಕಲಿಗ ಮುಖಂಡ ಮಾಗೇರಿ ನಾರಾಯಣಸ್ವಾಮಿ ಮಾಹಿತಿಯಿಂದ ಸ್ಥಳೀಯ ಪತ್ರಿಕೆ ವರದಿ ಮಾಡಿದೆ, ಆ ವರದಿ ಸತ್ಯಕ್ಕೆ ದೂರವಾದ ವಿಷಯ, ನಾನು ಕೋಲಾರದ ಮನೆ ಮಗ, ಒಂದು ಜಾತಿಗೆ ಮಾತ್ರವಲ್ಲದೆ ಎಲ್ಲರ ಮನೆ ಮಗ ನಾನು ಎಂದು ತಿಳಿಸಿದರು.
ಮಾಗೇರಿ ನಾರಾಯಣಸ್ವಾಮಿ ಇತ್ತೀಚಿಗೆ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ತಮಗೆ ನೀಡಬೇಕೆಂದು ಮನವಿ ಮಾಡಿದ್ದರು,
ಅಧ್ಯಕ್ಷ ಸ್ಥಾನ ಕೈ ತಪ್ಪುವ ಆತಂಕದಲ್ಲಿ ವಿಪಕ್ಷದವರ ಜೊತೆ ಸೇರಿ ನನ್ನ ವಿರುದ್ಧ ಜಾತಿ ನಿಂದನೆ ಆರೋಪ ಮಾಡಿದ್ದಾರೆಂದು ಅಸಮಾಧಾನ ಹೊರಹಾಕಿದರು.












Click it and Unblock the Notifications