ಕೋಲಾರ ಜಿಲ್ಲೆಯಲ್ಲಿ ಈಗ ಮಹಿಳಾ ಅಧಿಕಾರಿಗಳದ್ದೇ ದರ್ಬಾರ್!
ಕೋಲಾರ, ಅಕ್ಟೋಬರ್ 13: ಮಹಿಳಾ ಮೀಸಲಾತಿ, ಸಬಲೀಕರಣ, ಸಮಾನತೆ ಬಗ್ಗೆ ಮಾತನಾಡುವವರು ಒಮ್ಮೆ ಕೋಲಾರದ ಕಡೆ ತಿರುಗಿ ನೋಡಿದರೆ ಒಳ್ಳೆಯದು.ಚಿಕ್ಕಮಗಳೂರಿನಿಂದ ಕೋಲಾರಕ್ಕೆ ಹೊಸದಾಗಿ ಸತ್ಯವತಿ ಅವರು ಜಿಲ್ಲಾಧಿಕಾರಿಯಾಗಿ ಇತ್ತೀಚೆಗೆ ವರ್ಗಾವಣೆಯಾಗಿದ್ದು ತಿಳಿದಿರಬಹುದು.
ಕೋಲಾರ ಜಿಲ್ಲಾಧಿಕಾರಿಯಾಗಿ ಸತ್ಯವತಿ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ, ಜಿಲ್ಲೆಯ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ಅಧಿಕಾರಲ್ಲಿರುವ ಸಂತಸದ ಸುದ್ದಿ ಬಂದಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಯಾಗಿ ಕಾವೇರಿ, ಜಿಲ್ಲಾ ಯೋಜನಾ ನಿರ್ದೇಶಕರಾಗಿ ರೇಣುಕಾ, ಅಬಕಾರಿ ಜಿಲ್ಲಾ ಅಧಿಕಾರಿಯಾಗಿ ಸುಮಿತಾ ಅವರು ಕೆಲಸ ಮಾಡುತ್ತಿದ್ದಾರೆ.
ಇನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿ ಮಹಾಲಕ್ಷ್ಮಿ ನೇರಳೆ ಸೇರಿದಂತೆ 8 ಮಂದಿ ಮಹಿಳಾ ನ್ಯಾಯಾಧೀಶರಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಗೀತಾ, ಉಪಾಧ್ಯಕ್ಷರಾಗಿ ಯಶೋಧ, ನಗರಸಭೆ ಅಧ್ಯಕ್ಷರಾಗಿ ಮಹಾಲಕ್ಷ್ಮಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಪ್ರಮೀಳಾ ಜಿಲ್ಲೆಯಾಗಿ ಕೋಲಾರ ಮಾರ್ಪಟ್ಟಿರುವುದು ಖುಷಿ ವಿಷಯ.












Click it and Unblock the Notifications