ಅಪಹೃತ ಆಂಧ್ರಪ್ರದೇಶದ ಬಾರ್ ಮಾಲೀಕ ಕರ್ನಾಟಕದಲ್ಲಿ ಪತ್ತೆ!

ಕೋಲಾರ, ಸೆಪ್ಟೆಂಬರ್ 18: ಆಂಧ್ರದ ಬಾರ್ ಮಾಲೀಕನನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿ ಹಣ, ಒಡವೆಗಳನ್ನು ದೋಚಿ ಕೋಲಾರದಲ್ಲಿ ಬಿಸಾಡಿ ಹೋಗಿರುವ ಘಟನೆ ಮಂಗಳವಾರ ನಡೆದಿದೆ.

ಆಂಧ್ರದ ಚಿತ್ತೂರು ಜಿಲ್ಲೆಯ ಬಲಜಪಲ್ಲಿ ಗ್ರಾಮದ ಸೀತಪ್ಪ ಅವರನ್ನು ಅಪಹರಣಗೊಳಿಸಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಬಳಿ ಅವರನ್ನು ರಸ್ತೆಯಲ್ಲಿ ಬಿಸಾಡಿ ಹೋಗಿರುವ ಘಟನೆ ಇದಾಗಿದೆ. ಅವರ ಬಳಿ ಇದ್ದ ಹಣ, ಚಿನ್ನದ ಒಡವೆಗಳನ್ನು ದೋಚಿದ್ದಾರೆ.ಹಲ್ಲೆಗೊಳಗಾದ ಬಾರ್ ಮಾಲೀಕ ಟೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಲ್ಲೆಗೊಳಗಾದ ಸೀತಪ್ಪ ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರಾತ್ರಿ ಬಾರ್ ಬಾಗಿಲು ಹಾಕಿಕೊಂಡು ಮನೆಗೆ ಹಿಂದಿರುಗುವಾಗ ಐವರು ಅಪರಿಚಿತರ ತಂಡದಿಂದ ಅಪಹರಣ ನಡೆದಿದೆ.

Kidnapped Andhra Pradesh business man found in Karnataka

ಬಾರ್ ಮಾಲೀಕನ ಬಳಿ ಇದ್ದ 3.5 ಲಕ್ಷ ರೂ ಹಣ ಮತ್ತು ಮೈಮೇಲಿದ್ದ ಒಡವೆಗಳನ್ನು ದರೇಡೆ ಮಾಡಿದ್ದಾರೆ, ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+