ಕೋಲಾರದಲ್ಲಿ ರಾಹುಲ್ ಗಾಂಧಿ ಸೈಕಲ್ ಸವಾರಿ

ಕೋಲಾರ, ಮೇ 07: ಕೋಲಾರದ ಮಾಲೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ rally ಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೈಕಲ್ ಸವಾರಿ ಮಾಡಿ ಮತ ಯಾಚಿಸಿದರು.

ಮೇ 12 ರಂದು ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕೋಲಾರದಲ್ಲಿ ಅವರು ಪ್ರಚಾರ ನಡೆಸಿದರು. ಉರಿ ಬಿಸಿಲಿನಲ್ಲೂ ಸಾವಿರಾರು ಜನರ ನಡುವಲ್ಲಿ ಸೈಕಲ್ ಸವಾರಿ ಮಾಡಿದ ರಾಹುಲ್ ಗಾಂಧಿ ಅವರಿಗೆ ಅಭಿಮಾನಿಗಳು ಚಪ್ಪಾಳೆಯ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚಾಕ್ಸಿಯಂಥವರ ಜೇಬು ತುಂಬಲು ಮೋದಿ ಸರ್ಕಾರ ಬಡವರ ಅನ್ನಕ್ಕೆ ಕನ್ನಹಾಕುತ್ತಿದೆ" ಎಂದರು.

In Pics : ವೋಟಿಗಾಗಿ ಕೋಲಾರದಲ್ಲಿ ಎತ್ತಿನ ಬಂಡಿ ಏರಿದ ರಾಹುಲ್

"ಈ ಚುನಾವಣೆ ಕರ್ನಾಟಕದ ಜನರ ಚುನಾವಣೆ ಎಂದು ಮೋದಿ ಹೇಳಿದ್ದಾರೆ. ನಾವು ಅವರಲ್ಲಿ ಒಂದು ಮಾತು ಹೇಳುತ್ತೇನೆ. ರೈತರ ಪರ ಎನ್ನುವ ಮೋದೀಜಿ ಕಳೆದ ನಾಲ್ಕು ವರ್ಷಗಳಲ್ಲಿ ರೈತರ ಸಾಲಮನ್ನಾ ಮಾಡುವ ನಿರ್ಧಾರವನ್ನೇಕೆ ಕೈಗೊಂಡಿಲ್ಲ? ಅವರು ರೈತರಿಗಾಗಿ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ" ಎಂದು ಅವರು ಹರಿಹಾಯ್ದರು.

ಕೇಂದ್ರ ಬಿಜೆಪಿ ಸರ್ಕಾರ ಆಡಳಿತಾವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿರುವುದನ್ನು ಖಂಡಿಸಿದ ಅವರು ಸೈಕಲ್ ಮತ್ತು ಎತ್ತಿನ ಗಾಡಿಯಲ್ಲಿ ಸವಾರಿ ಮಾಡಿದರು.

ಕೇಂದ್ರ ಸರ್ಕಾರ ಜಿಎಸ್ಟಿ ಜಾರಿಗೆ ತಂದ ನಡೆ, ಇಂಧನ ಬೆಲೆ ಹೆಚ್ಚಳಗಳನ್ನು ರಾಹುಲ್ ಗಾಂಧಿಯವರು ಈ ಮೂಲಕ ಖಂಡಿಸಿದರು.

Karnataka Elections: Rahul Gandhi rides bicycle in Kolar

ಮೇ 4 ರಂದು ಗದಗ, ಕಲಬುರಗಿಯಲ್ಲಿ ಪ್ರಚಾರ ನಡೆಸಿದ್ದ ರಾಹುಲ್ ಗಾಂಧಿ ಎಂದಿನಂತೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+