• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯದಲ್ಲಿ ಹೆಚ್ಚಿದ ಕೊರೊನಾ; ಸರ್ಕಾರದ ಮುಂದೆ ಎಚ್ ಡಿಕೆ ಇಟ್ಟ ಪ್ರಶ್ನೆಗಳು

By ಕೋಲಾರ ಪ್ರತಿನಿಧಿ
|

ಕೋಲಾರ, ಮೇ 01: "ಲಾಕ್ ಡೌನ್ ನಲ್ಲಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಲು ಅವಕಾಶವಿಲ್ಲ. ಹೀಗಿದ್ದಾಗ ಸತ್ತ ವ್ಯಕ್ತಿಯ ಕೊರೊನಾ ತಪಾಸಣೆ ಮಾಡದೆ ಹೇಗೆ ಮಂಡ್ಯಕ್ಕೆ ತಂದರು? ಮಹಾರಾಷ್ಟ್ರದಿಂದ ಇಲ್ಲಿಗೆ ತರಲು ಅವಕಾಶ ಕೊಟ್ಟವರು ಯಾರು" ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ.

   ಪೊಲೀಸರು ಮಾಡುತ್ತಿರೋ ಕೆಲಸಕ್ಕೆ ನಮ್ಮದೊಂದು ಚಿಕ್ಕ ಸಲಾಂ | Oneindia Kannada

   ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿಗೆ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಜನತಾ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಂಡ್ಯದಲ್ಲಿ ಇದ್ದಕ್ಕಿದ್ದಂತೆ ಎಂಟು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದರ ಕುರಿತು ಮಾತನಾಡಿದರು.

    ಡಿಸಿ ಗಮನಕ್ಕೆ ಬಂದಿಲ್ಲವಾ ಎಂದು ಗುಡುಗಿದ ಎಚ್ ಡಿಕೆ

   ಡಿಸಿ ಗಮನಕ್ಕೆ ಬಂದಿಲ್ಲವಾ ಎಂದು ಗುಡುಗಿದ ಎಚ್ ಡಿಕೆ

   ಲಾಕ್ ಡೌನ್ ನಲ್ಲಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಲು ಅವಕಾಶವಿಲ್ಲ. ಹೀಗಿದ್ದಾಗ ಸತ್ತ ವ್ಯಕ್ತಿಯ ಕೊರೊನಾ ತಪಾಸಣೆ ಮಾಡದೆ ಹೇಗೆ ಮಂಡ್ಯಗೆ ತಂದರು ಎಂದು ಪ್ರಶ್ನಿಸಿದರು ಎಚ್ ಡಿ ಕುಮಾರಸ್ವಾಮಿ. ಮಂಡ್ಯದಲ್ಲಿ 8 ಜನರಿಗೆ ಪಾಸಿಟಿವ್ ಬಂದಿದೆ. ಇವೆಲ್ಲಾ ಜಿಲ್ಲಾಧಿಕಾರಿಗಳ ಗಮನಕ್ಕೆ ಬರಲಿಲ್ವಾ? ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು ಎಂದು ಕಿಡಿಕಾರಿದ್ದಾರೆ.

   ರಾಮನಗರಕ್ಕೆ ಕೈದಿಗಳ ಸ್ಥಳಾಂತರ; ಎಡಿಜಿಪಿ ಅಲೋಕ್ ಮೋಹನ್ ಮೇಲೆ ಎಚ್ ಡಿಕೆ ಆರೋಪ

   "ಜನರ ಜೀವದ ಜೊತೆ ಚೆಲ್ಲಾಟ ಬೇಡ"

   ಮೇ.3ರ ಬಳಿಕ ಲಾಕ್ ಡೌನ್ ಮುಂದುವರಿಸುವ ಕುರಿತು ಅಭಿಪ್ರಾಯ ಹಂಚಿಕೊಂಡ ಕುಮಾರಸ್ವಾಮಿ, "ಲಾಕ್ ಡೌನ್ ಮುಂದುವರಿಸುವ ಅನಿವಾರ್ಯತೆ ಇದೆ. ಸರ್ಕಾರ ಖಜಾನೆ ತುಂಬಿಸಿಕೊಳ್ಳಲು ರಿಯಾಯಿತಿ ನೀಡಿದರೆ ಡ್ಯಾಮೇಜ್ ಆಗುತ್ತೆ ಅಂತ ಹಲವಾರು ಜನರು ಹೇಳಿದ್ದಾರೆ. ಮೇ 18ನೇ ತಾರೀಖಿನ ಒಳಗೆ ಇಡೀ ದೇಶದಲ್ಲಿ 38 ಸಾವಿರ ಜನ ಸಾಯುತ್ತಾರೆ ಅನ್ನೋ ಮಾಹಿತಿ ಇದೆ. ಜನರ ಜೀವದ ಜೊತೆ ಚೆಲ್ಲಾಟವಾಡದೆ ಸರ್ಕಾರ ತೀರ್ಮಾನ ಮಾಡಬೇಕು" ಎಂದು ಹೇಳಿದ್ದಾರೆ.

    ಸಿಎಂ ಕಚೇರಿಯಲ್ಲಿ ದುಂದುವೆಚ್ಚ ಎಂದ ಎಚ್ ಡಿಕೆ

   ಸಿಎಂ ಕಚೇರಿಯಲ್ಲಿ ದುಂದುವೆಚ್ಚ ಎಂದ ಎಚ್ ಡಿಕೆ

   ಈಗಾಗಲೇ ಕೆಲ ಚಟುವಟಿಕೆಗಳಿಗೆ ರಿಲ್ಯಾಕ್ ನೀಡಲಾಗಿದೆ. ಮುಂದೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮ ವಹಿಸಬೇಕು. ನನ್ನ ಸರ್ಕಾರದಲ್ಲಿ ಬಿಡುಗಡೆ ಮಾಡಿದ ಹಣದಲ್ಲಿ ಈಗ ಕೆಲಸ ನಡಿಯುತ್ತಿದೆ. ಸಿಎಂ ಕಚೇರಿಯಲ್ಲಿ ದುಂದು ವೆಚ್ಚ ನಡೆಯುತ್ತಿದೆ. ಸಿಎಂ ಕಚೇರಿಯಲ್ಲಿ ಸಲಹೆಗಾರರಿಗೆ ನೀಡಿದ ಹಣ ಇಡೀ ದೇಶಕ್ಕೆ ಹಂಚಬಹುದಾಗಿದೆ. ಬೇರೆ ರಾಜ್ಯಗಳಲ್ಲಿ ಸರ್ಕಾರ ನೀಡುತ್ತಿರುವ ಪ್ಯಾಕೇಜ್ ಗಳ ಮಾಹಿತಿ ತರಿಸಿಕೊಳ್ಳಲಿ. 9 ಸಾವಿರ ಕೋಟಿ ಹಣವನ್ನು ಎಫ್ ಡಿ ನಲ್ಲಿ ಸರ್ಕಾರ ಇಟ್ಟುಕೊಂಡಿದೆ, ಅದನ್ನು ಉಪಯೋಸಿಕೊಳ್ಳಲಿ ಎಂದು ಹೇಳಿದರು.

   ರಾಮನಗರಕ್ಕೆ ಕೊರೊನಾ ಲಗ್ಗೆ ಇಡಲು ಸರ್ಕಾರವೇ ಕಾರಣ ಎಂದ ಎಚ್ ಡಿಕೆ

   "ಲಾಕ್ ಡೌನ್ ಮೇಲಿನ ಕಾಳಜಿ ರೈತರ ಮೇಲೇಕಿಲ್ಲ"

   "ನಾವು ಬೀದಿಗೆ ಇಳಿದು ಪ್ರತಿಭಟನೆ ಮಾಡುವ ಸಮಯ ಇದಲ್ಲ. ರಾಜಕಾರಣ ಮಾಡುವ ಸಮಯವಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಕೊರೊನಾ ಓಡಿಸಬೇಕಾಗಿದೆ. ಆದರೆ ಲಾಕ್ ಡೌನ್ ಮೇಲಿರುವ ಕಾಳಜಿ ಸರ್ಕಾರಕ್ಕೆ ರೈತರ ಮೇಲೆ ಏಕಿಲ್ಲ. ಜನ ಸಾಮಾನ್ಯರ ನೋವನ್ನು ಸರಿಪಡಿಸುವಲ್ಲಿ ಸರ್ಕಾರ ವಿಫಲವಾಗಿದೆ" ಎಂದು ದೂರಿದರು.

   English summary
   HD Kumaraswamy questioned government about increasing cases of Coronavirus in mandya
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X