ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ತಯಾರಿ; ಕುರುಡುಮಲೆ ದೇಗುಲದಲ್ಲಿ ಡಿಕೆಶಿ ವಿಶೇಷ ಪೂಜೆ!

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಫೆಬ್ರವರಿ 28: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿಯನ್ನು ಆರಂಭಿಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾರ್ಚ್ 1ರಂದು ಕುರುಡುಮಲೆ ಗಣೇಶನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿರುವ ದೇವಾಲಯದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಡಿ. ಕೆ. ಶಿವಕುಮಾರ್ ವಿಶೇಷ ಪೂಜೆಯನ್ನು ಮಾಡಲಿದ್ದಾರೆ.

ಪಕ್ಷದ ತೊರೆದ ಮುಖಂಡರಿಗೆ ಮತ್ತೆ ಆಹ್ವಾನ ನೀಡಿದ ಡಿಕೆ ಶಿವಕುಮಾರ್ಪಕ್ಷದ ತೊರೆದ ಮುಖಂಡರಿಗೆ ಮತ್ತೆ ಆಹ್ವಾನ ನೀಡಿದ ಡಿಕೆ ಶಿವಕುಮಾರ್

ಕುರುಡುಮಲೆ ಗಣೇಶನ ದೇಗುಲ ಕರ್ನಾಟಕದ ಮೂಡಲ ಬಾಗಿಲು ಎಂದು ಪ್ರಸಿದ್ಧಿ ಪಡೆದಿದೆ. ಬಹುತೇಕ ಎಲ್ಲಾ ರಾಜಕಾರಿಣಿಗಳು ಇಲ್ಲಿ ಪೂಜೆ ಸಲ್ಲಿಸಿ, ಚುನಾವಣೆ ಪ್ರಚಾರವನ್ನು ಆರಂಭಿಸುತ್ತಾರೆ.

 Kolar DK Shivakumar To Perform Special Pooja At Kurudumale Ganesha Temple

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಡಿ. ಕೆ. ಶಿವಕುಮಾರ್ ಪೂಜೆ ಸಲ್ಲಿಸಲಿದ್ದಾರೆ. ಕರ್ನಾಟಕ ಕಾಂಗ್ರೆಸ್ ಮಾರ್ಚ್ 3ರಿಂದ ಪಕ್ಷ ಸಂಘಟನೆಗೆ ಪಾದಯಾತ್ರೆ ಆರಂಭಿಸಲಿದೆ.

ಬಿಜೆಪಿಯು ಬ್ಲ್ಯಾಕ್‌ಮೇಲರ್ಸ್ ಜನತಾ ಪಕ್ಷ ಎಂದ ಡಿಕೆ ಶಿವಕುಮಾರ್ ಬಿಜೆಪಿಯು ಬ್ಲ್ಯಾಕ್‌ಮೇಲರ್ಸ್ ಜನತಾ ಪಕ್ಷ ಎಂದ ಡಿಕೆ ಶಿವಕುಮಾರ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕಾಂಗ್ರೆಸ್ ಮೊದಲ ಸಮಾವೇಶ ನಡೆಯಲಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವ ಎಲ್ಲಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಯಲಿದೆ.

ತಮಿಳುನಾಡು ಚುನಾವಣೆ: ಮತದಾನ, ಫಲಿತಾಂಶ ಯಾವಾಗ?ತಮಿಳುನಾಡು ಚುನಾವಣೆ: ಮತದಾನ, ಫಲಿತಾಂಶ ಯಾವಾಗ?

ಅಂದಹಾಗೆ 1999ರಲ್ಲಿ ಎಸ್. ಎಂ. ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕುರುಡುಮಲೆಯಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದ್ದರು. ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.

2013ರಲ್ಲೂ ಇದೇ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗಿತ್ತು ಬಳಿಕ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕುರುಡುಮಲೆ ಪೂಜೆ ಬಳಿಕ ಸಮೀಪದ ದರ್ಗಾದಲ್ಲೂ ಡಿ. ಕೆ. ಶಿವಕುಮಾರ್ ಪೂಜೆ ಸಲ್ಲಿಸಲಿದ್ದಾರೆ.

English summary
KPCC president D. K. Shivakumar to perform special pooja at Kurudumale Ganesha temple on March 1, 2021. Temple located at Mulbagal taluk of Kolar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X