ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವರಮಳ್ಳೂರು: ಶ್ರೀಮಳ್ಳೂರಾಂಭ ದೇವಿಯ ಬ್ರಹ್ಮರಥೋತ್ಸವದ ವಿಶೇಷತೆ ಇಲ್ಲಿದೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಶಿಡ್ಲಘಟ್ಟ, ಡಿಸೆಂಬರ್‌, 09: ಪುರಾಣ ಪ್ರಸಿದ್ದ ದೇವರಮಳ್ಳೂರು ಗ್ರಾಮದ ಶ್ರೀಮಳ್ಳೂರಾಂಭ ದೇವಿಯ ಬ್ರಹ್ಮರಥೋತ್ಸವ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವಕ್ಕೆ ವಿವಿಧ ಕಡೆಯಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು. ತಾಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರೀಮಳ್ಳೂರಾಂಭ ದೇವಿಯ ಬ್ರಹ್ಮರಥೋತ್ಸವ ಅನಾದಿ ಕಾಲದಿಂದಲೂ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ. ಅಲಂಕೃತ ತೇರಿನಲ್ಲಿ ಮಳ್ಳೂರಾಂಭ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ರಥೋತ್ಸವಕ್ಕೆ ಮಹರ್ಷಿ ಆನಂದ್ ಗುರೂಜಿ ಚಾಲನೆ ನೀಡಿ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು. "ತಾಯಿ ಮಳ್ಳೂರಾಂಭ ದೇವಿಯ ಮಹಿಮೆ ಅಪಾರವಾದದ್ದು. ತಾಯಿಯ ಅನುಗ್ರಹದಿಂದಲೇ ಈ ಗ್ರಾಮದಲ್ಲಿ ಅಭಿವೃದ್ದಿ, ಸುಖ ಶಾಂತಿ, ನೆಮ್ಮದಿ ನೆಲೆಸಿದೆ". ಈ ಸ್ಥಳಕ್ಕೆ ಸಾವಿರಾರು ವರ್ಷಗಳ ಐತಿಹಾಸಿಕ ಇತಿಹಾಸ ಇದೆ. ಪುಣ್ಯ ಸ್ಥಳದಲ್ಲಿನ ದೇವರ ಕಾರ್ಯದಲ್ಲಿ ಭಾಗವಹಿಸಿದ ನಾವು ನೀವೆಲ್ಲರೂ ಧನ್ಯರು ಎಂದು ಹೇಳಿದರು.

JDS Pancharatna Rathayatra : ಜೆಡಿಎಸ್‌ನ ಪಂಚರತ್ನ ರಥ ಯಾತ್ರೆ ದಿನಾಂಕ ಘೋಷಣೆJDS Pancharatna Rathayatra : ಜೆಡಿಎಸ್‌ನ ಪಂಚರತ್ನ ರಥ ಯಾತ್ರೆ ದಿನಾಂಕ ಘೋಷಣೆ

ರಾಜ ಬೀದಿಯಲ್ಲಿ ಹರಿದ ತೇರು
ರಥೋತ್ಸವ ಹಿನ್ನೆಲೆ ತೇರನ್ನು ಊರಿನ ರಾಜ ಬೀದಿಯಲ್ಲಿ ಎಳೆಯಲಾಗಿದ್ದು, ಅಪಾರ ಪ್ರಮಾಣದಲ್ಲಿ ಸೇರಿದ ಭಕ್ತರು ಜಾತ್ರೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದ್ದರು. ದವಣ ಬಾಳೆ ಹಣ್ಣನ್ನು ತೇರಿನ ತುತ್ತ ತುದಿಯಲ್ಲಿನ ಕಳಸಕ್ಕೆ ಎಸೆದು ಇಷ್ಟಾರ್ಥಗಳು ಈಡೇರಲೆಂದು ಭಗವಂತನಲ್ಲಿ ಭಕ್ತರು ಪ್ರಾರ್ಥಿಸಿದರು. ಅಲ್ಲದೆ ಅಲ್ಲಿ ನೆರೆದಿದ್ದ ಭಕ್ತರಿಗೆ ಹೆಸರು ಬೇಳೆ ಪಾನಕವನ್ನು ವಿತರಿಸಲಾಯಿತು.

Devaramalluru: Here see special of Srimallurambha Devi Brahmarathotsava

ಪರಿಷೆಯಲ್ಲಿ ಗಮನ ಸೆಳೆದ ಮಳಿಗೆಗಳು
ಪರಿಷೆ ಅಂಗವಾಗಿ ಬರಗು ಬತಾಸು, ಮಕ್ಕಳ ಆಟಿಕೆ, ಹೆಂಗೆಳೆಯರ ಅಲಂಕಾರಿ ವಸ್ತುಗಳ ಹತ್ತಾರು ಅಂಗಡಿಗಳನ್ನು ಹಾಕಿದ್ದು ಗಮನ ಸೆಳೆದಿದೆ. ಇದರಿಂದ ವ್ಯಾಪಾರ ವಹಿವಾಟು ಜೋರಾಗಿದ್ದು, ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಅಲ್ಲದೆ ನೆರೆದಿದ್ದ ಭಕ್ತರೆಲ್ಲರಿಗೂ ಹೋಳಿಗೆಯ ಊಟ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.

Devaramalluru: Here see special of Srimallurambha Devi Brahmarathotsava

ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ, ಎಬಿಡಿ ಟ್ರಸ್ಟ್‌ನ ಅಧ್ಯಕ್ಷ ರಾಜೀವ್‌ಗೌಡ, ಸಹನಾ ರಾಜೀವ್‌ಗೌಡ, ಉಪ ವಿಭಾಗಾಕಾರಿ ಡಾ.ಸಂತೋಷ್ ಕುಮಾರ್, ಆರ್.ಐ. ಪ್ರಶಾಂತ್‌ಕುಮಾರ್, ದೇವರಮಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಪೇಗೌಡ, ದೇವಾಲಯ ಸಮಿತಿಯ ಅಧ್ಯಕ್ಷ ವಿ.ಮುನಿರಾಜುಗೌಡ, ಧರ್ಮದರ್ಶಿಗಳಾದ ಬಿ.ಎಲ್.ಮುನಿರಾಜು, ಶಾಂತಮ್ಮಕೆಂಪಣ್ಣ, ವೆಂಕೋಬರಾವ್, ನಿರಂಜನ್, ವೆಂಕಟೇಶ್ ಚಕ್ರವರ್ತಿ, ವಕೀಲ ವಿ.ಸುಬ್ರಮಣ್ಯಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

English summary
Here see special of Srimallurambha Devi Brahmarathotsava in Devaramalluru village of Kolar district, know more, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X